ಕಬಡ್ಡಿ ಆಟಗಾರನ ಹತ್ಯೆ ಪ್ರಕರಣ: ಮಾಸ್ಟರ್‌ಮೈಂಡ್ ನ ಎನ್‌ಕೌಂಟರ್ ಮಾಡಿದ ಮೊಹಾಲಿ ಪೊಲೀಸರು
ಕಬಡ್ಡಿ ಆಟಗಾರನನ್ನು ಗುಂಡಿಕ್ಕಿ ಕೊಂದ ಎರಡು ದಿನಗಳ ಬಳಿಕ ಪ್ರಕರಣದ ಮಾಸ್ಟರ್ ಮೈಂಡ್ ನನ್ನು ಮೊಹಾಲಿ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಆತ ನೀಡಿರುವ ಮಾಹಿತಿ ಮೇರೆಗೆ ಮಾಸ್ಟರ್ ಮೈಂಡ್ ನನ್ನು ಪತ್ತೆ ಹಚ್ಚಲಾಗಿತ್ತು.
(ಸಂಗ್ರಹ ಚಿತ್ರ) -
ಮೊಹಾಲಿ: ಕ್ರೀಡಾಂಗಣದಲೇ ಕಬಡ್ಡಿ ಆಟಗಾರನನ್ನು (kabaddi player) ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಾಸ್ಟರ್ ಮೈಂಡ್ ನನ್ನು ಮೊಹಾಲಿ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಕಳೆದ ಸೋಮವಾರ ಪಂಜಾಬ್‌ನ (Punjab) ಮೊಹಾಲಿಯಲ್ಲಿ (Mohali) ಖ್ಯಾತ ಕಬಡ್ಡಿ ಪಟು ರಾಣಾ ಬಾಲಚೌರಿಯಾ (kabaddi player Rana Balachauria) ಅವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ದೇಶಾದ್ಯಂತ ಆತಂಕ ಹೆಚ್ಚಿಸಿತ್ತು. ಇದೀಗ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಾಸ್ಟರ್ ಮೈಂಡ್ ನನ್ನು ಎನ್‌ಕೌಂಟರ್ (encounter) ಮಾಡಿ ಕೊಂದು ಹಾಕಿದ್ದಾರೆ.
ಪಂಜಾಬ್‌ನ ಮೊಹಾಲಿಯಲ್ಲಿ ಸೋಮವಾರ ನಡೆದ ಪಂದ್ಯದ ವೇಳೆ ಕಬಡ್ಡಿ ಆಟಗಾರ ರಾಣಾ ಬಾಲಚೌರಿಯಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ ಎರಡು ದಿನಗಳ ಬಳಿಕ ಬುಧವಾರ ಪೊಲೀಸರು ಆರೋಪಿ ಮಾಸ್ಟರ್‌ಮೈಂಡ್ ಹರ್ಪಿಂದರ್ ಸಿಂಗ್ ನನ್ನು ಎನ್‌ಕೌಂಟರ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲ್ಯದಲ್ಲಿ ಕಿರುಕುಳ ನೀಡಿದ್ದಕ್ಕಾಗಿ ವೃದ್ಧ ತಂದೆಯನ್ನು ಹೊಡೆದು ಕೊಂದ ಮಗ
ಲಾಲ್ರು ಬಳಿ ಇದ್ದ ತಾರ್ನ್ ತರನ್ ನಿವಾಸಿ ಹರ್ಪಿಂದರ್ ಸಿಂಗ್ ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ದಾಳಿ ನಡೆಸಿದ್ದು, ಹರ್ಪಿಂದರ್ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಸಾವನ್ನಪ್ಪಿದ್ದಾನೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ವಿಮಾನ ನಿಲ್ದಾಣದಲ್ಲಿ ಮತ್ತೋರ್ವ ಆರೋಪಿ ಐಶ್‌ದೀಪ್ ಸಿಂಗ್ ಎಂಬಾತನನ್ನು ಬಂಧಿಸಲಾಗಿತ್ತು. ಆತ ನೀಡಿದ ಮಾಹಿತಿಯನ್ನು ಆಧರಿಸಿ ಹರ್ಪಿಂದರ್ ಸಿಂಗ್ ನನ್ನು ಪತ್ತೆ ಹಚ್ಚಲಾಗಿದೆ. ಕಬಡ್ಡಿ ಪಟು ರಾಣಾ ಬಾಲಚೌರಿಯಾ ಹತ್ಯೆಗೆ ಐಶ್ ದೀಪ್ ಸಿಂಗ್ ಮಾಸ್ಕೋದಿಂದ ಆಗಮಿಸಿದ್ದು, ಕೊಲೆ ಮಾಡಿದ ಬಳಿಕ ಮಸ್ಕತ್‌ಗೆ ಹೋಗಲು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದನು.
ಈ ಕೊಲೆಯ ಮಾಸ್ಟರ್ ಮೈಂಡ್ ಹರ್ಪಿಂದರ್ ಸಿಂಗ್. ಕೊಲೆಯ ವೇಳೆ ಐಶ್ ದೀಪ್ ಕೂಡ ಜೊತೆಯಲ್ಲಿ ಇದ್ದನು. ಐಶ್ ದೀಪ್ ಸಿಂಗ್ ವಿದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ದರೋಡೆಕೋರ ಡೋನಿ ಬಾಲ್ ಜೊತೆ ಸಂಪರ್ಕದಲ್ಲಿದ್ದನು ಎನ್ನಲಾಗಿದೆ.
ಇಬ್ಬರು ಬೈಕ್ ನಲ್ಲಿ ಆಗಮಿಸಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ರಾಣಾ ಬಾಲಚೌರಿಯಾ ಅವರ ಸಮೀಪಕ್ಕೆ ಬಂದು ಗುಂಡು ಹರಿಸಿದ್ದಾರೆ. ನಾಲ್ಕರಿಂದ ಐದು ಗುಂಡುಗಳನ್ನು ಹತ್ತಿರದಿಂದ ಹಾರಿಸಲಾಗಿದೆ. ಈ ಪ್ರಕರಣಕ್ಕೆ ದರೋಡೆಕೋರರ ಸಂಪರ್ಕವು ಸೇರಿಕೊಂಡಿರುವುದರಿಂದ ಪೊಲೀಸರು ವಿವಿಧ ಮೂಲಗಳಿಂದ ತನಿಖೆ ನಡೆಸುತ್ತಿದ್ದಾರೆ.
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಯುವಕ; ಆಘಾತಕಾರಿ ವಿಡಿಯೊ ವೈರಲ್
ಆ ದಿನ ಏನಾಗಿತ್ತು?
ಮೊಹಾಲಿಯ ಖ್ಯಾತ ಕಬಡ್ಡಿ ಪಟು ಹಾಗೂ ಕಬಡ್ಡಿ ಆಯೋಜಕನಾಗಿದ್ದ ರಾಣಾ ಬಾಲಚೌರಿಯಾ ಸೋಮವಾರ ಮೊಹಾಲಿಯಲ್ಲಿ ಕಬಡ್ಡಿ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದನು. ತಂಡದ ನಾಯಕನಾಗಿದ್ದ ರಾಣಾ ಟಾಸ್ ಗೆದ್ದು ವಾರ್ಮ್ ಅಪ್ ನಡೆಸುತ್ತಿದ್ದ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭಗೊಳ್ಳುವುದಿತ್ತು. ಆದರೆ ಈ ವೇಳೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಹತ್ತಿರ ಬಂದ ಹರ್ಪಿಂದರ್ ಹಾಗೂ ಆತನ ಸಹಚರರು ರಾಣಾ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ರಾಣ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.