ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Spy For Pakistan: ಬಲೂನ್‌ ಮೂಲಕ ಪಾಕಿಸ್ತಾನ ಬೇಹುಗಾರಿಕೆ; ಹಿಮಾಚಲದಲ್ಲಿ ಪತ್ತೆಯಾಯ್ತು ಸ್ಫೋಟಕ ಮಾಹಿತಿ

mysterious balloon: ಹಿಮಾಚಲ ಪ್ರದೇಶದಲ್ಲಿ ಪಾಕಿಸ್ತಾನಕ್ಕೆ ಸಂಬಂಧಿಸಿದ ಗುರುತುಗಳಿರುವ ನಿಗೂಢ ಬಲೂನ್ ಪತ್ತೆಯಾಗಿರುವುದು ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ. ಸ್ಥಳೀಯರು ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಲೂನ್ ಅನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಪಾಕಿಸ್ತಾನಿ ಗುರುತುಗಳಿರುವ ನಿಗೂಢ ಬಲೂನ್ ಪತ್ತೆ

ಪಾಕಿಸ್ತಾನಿ ಗುರುತುಗಳಿರುವ ನಿಗೂಢ ಬಲೂನ್ ಪತ್ತೆ -

Priyanka P
Priyanka P Dec 17, 2025 12:58 PM

ಶಿಮ್ಲಾ: ಮನೆಯೊಂದರ ಛಾವಣಿಯ ಮೇಲೆ ಪಾಕಿಸ್ತಾನದ (Pakistan) ಗುರುತುಗಳನ್ನು ಹೊಂದಿರುವ ಅನುಮಾನಾಸ್ಪದ ಬಲೂನ್ (mysterious balloon) ಪತ್ತೆಯಾಗಿರುವ ಘಟನೆ ಹಿಮಾಚಲ ಪ್ರದೇಶದ (Himachal Pradesh) ಉನಾ ಜಿಲ್ಲೆಯಲ್ಲಿ ನಡೆದಿದ್ದು, ಗ್ರಾಮದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಕಳೆದ ಶನಿವಾರ ಈ ಘಟನೆ ನಡೆದಿತ್ತು.

ಆ ಬಲೂನ್ ವಿಮಾನವನ್ನು ಹೋಲುತ್ತಿದ್ದು, ಪಾಕಿಸ್ತಾನಿ ಧ್ವಜದ ಗುರುತುಗಳು ಮತ್ತು ಅದರ ಮೇಲೆ PIA (ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ) ಎಂದು ಬರೆಯಲಾಗಿದೆ. ಉನಾ ಜಿಲ್ಲೆಯ ಮತ್ತೊಂದು ಗ್ರಾಮದಲ್ಲಿ ಇದೇ ರೀತಿಯ ಘಟನೆ ವರದಿಯಾದ ಕೆಲವು ದಿನಗಳ ನಂತರ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಆಸ್ಟ್ರೇಲಿಯಾದ ಬೊಂಡಿ ಬೀಚ್‌ನಲ್ಲಿ ಯಹೂದಿಯರ ರಕ್ತಪಾತಗೈದ ಹಂತಕನಿಗೆ ಭಾರತೀಯ ಲಿಂಕ್‌

ಶನಿವಾರ ಬೆಳಿಗ್ಗೆ ಚಾಲೆಟ್ ಗ್ರಾಮದ ನಿವಾಸಿಯೊಬ್ಬರು ತಮ್ಮ ಮನೆಯ ಛಾವಣಿಯ ಮೇಲೆ ಬಲೂನ್ ಅನ್ನು ಕಂಡು ದೌಲತ್‌ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸ್ ಠಾಣೆಯ ಉಸ್ತುವಾರಿ ರವಿಪಾಲ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ಅವಲೋಕಿಸಿದರು. ಪೊಲೀಸರು ಬಲೂನನ್ನು ವಶಕ್ಕೆ ಪಡೆದಿದ್ದಾರೆ.

ಇದರ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಸುತ್ತಮುತ್ತಲಿನ ಪ್ರದೇಶವನ್ನು, ಇತರ ಅನುಮಾನಾಸ್ಪದ ವಸ್ತುಗಳನ್ನು ಪರಿಶೀಲಿಸಿದರು. ಇದಕ್ಕೂ ಮೊದಲು, ಡಿಸೆಂಬರ್ 8 ರಂದು ಗ್ಯಾಗ್ರೆಟ್ ಉಪವಿಭಾಗದ ಟಟೆಹ್ರಾ ಗ್ರಾಮದಲ್ಲಿ ಅಂತಹ ಮೂರು ಬಲೂನ್‌ಗಳು ಕಂಡುಬಂದಿದ್ದವು. ಆ ಬಲೂನ್‌ಗಳ ಮೇಲೆ ಪಾಕಿಸ್ತಾನಿ ಧ್ವಜದ ಗುರುತುಗಳಿದ್ದು, ಅವುಗಳ ಮೇಲೆ ಐ ಲವ್ ಪಾಕಿಸ್ತಾನ್ ಎಂದು ಬರೆಯಲಾಗಿತ್ತು.

ಬಲೂನ್‌ಗಳಿಗೆ ಯಾವುದೇ ಸಾಧನಗಳನ್ನು ಜೋಡಿಸಲಾಗಿಲ್ಲ ಎಂದು ಪೊಲೀಸ್ ತಂಡ ತಿಳಿಸಿದೆ. ಇನ್ನು ಈ ಬಲೂನ್ ಅನ್ನು ಹಾರಿಸಿದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳ್ಳನೊಬ್ಬ ಮಹಿಳೆಯ ಸರಗಳ್ಳತನ ಮಾಡಿದ್ದಾನೆ. ಧೈರ್ಯ ತೋರಿದ ಮಹಿಳೆ ಸರಗಳ್ಳನ ಮೇಲೆ ಪ್ರತಿದಾಳಿ ನಡೆಸಿರುವ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಕೊಟ್ಖೈನಲ್ಲಿ ನಡೆದಿದೆ. ಮಹಿಳೆಯಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಕಳ್ಳ, ಆಕೆಯ ಮುಖ ಮತ್ತು ದೇಹದ ಇತರ ಭಾಗಗಳನ್ನು ಕಚ್ಚಿ ಗಾಯಗೊಳಿಸಿದನು.

ಮಹಿಳೆಯ ಜೋರಾದ ಕಿರುಚಾಟ ಕೇಳಿ, ಅಲ್ಲೇ ಇದ್ದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದರು. ಸ್ಥಳೀಯರು ಆತನನ್ನು ಕಂಬಿಗೆ ಕಟ್ಟಿ ಥಳಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗೆದೆ. ನಂತರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಕೋಟ್ಖೈನ ಖಲ್ತು ನಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿಯು ಆಕೆಯ ಆಭರಣಗಳನ್ನು ಕಸಿದುಕೊಂಡ ತಕ್ಷಣ ಮಹಿಳೆ ಆಕೆಯನ್ನು ಬೆನ್ನಟ್ಟಿ ಬಂಧಿಸಿದ್ದಾಳೆ. ತಪ್ಪಿಸಿಕೊಳ್ಳುವ ಉದ್ದೇಶದಿಂದ ಆರೋಪಿಯು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಕೋಟ್ಖೈ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಕಾರ, ಬುಧವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಪೊಲೀಸ್ ಕಸ್ಟಡಿಗೆ ಕೋರಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಮತ್ತು ಮಹಿಳೆ ಇಬ್ಬರೂ ನೇಪಾಳಿ ಮೂಲದವರು ಎನ್ನಲಾಗಿದೆ.