Sirsi News: ಜ.9ರಂದು 1008 ಸದ್ಗುರು ಶ್ರೀ ಬೃಹ್ಮಾನಂದ ಸರಸ್ವತೀ ಮಹಾಸ್ವಾಮಿಗಳ ಗುರು ವಂದನಾ ಕಾರ್ಯಕ್ರಮ
ತಾಲೂಕಾ ಆರ್ಯ ಈಡಿಗ, ನಾಮಧಾರಿ, ಬಿಲ್ಲವ ಸಮಾಜ ಅಭಿವೃದ್ಧಿ ಸಂಘದ ಸಂಯುಕ್ತಾ ಶ್ರಯದಲ್ಲಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬೃಹ್ಮಾನಂದ ಸರಸ್ವತೀ ಮಹಾಸ್ವಾಮಿಗಳ ಗುರು ವಂದನಾ ಕಾರ್ಯಕ್ರಮವನ್ನು ಜ.9ರಂದು ಬೆಳಗ್ಗೆ 11ಕ್ಕೆ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ
-
ಶಿರಸಿ: ತಾಲೂಕಾ ಆರ್ಯ ಈಡಿಗ, ನಾಮಧಾರಿ, ಬಿಲ್ಲವ ಸಮಾಜ ಅಭಿವೃದ್ಧಿ ಸಂಘದ ಸಂಯುಕ್ತಾ ಶ್ರಯದಲ್ಲಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶ ಪರಮಪೂಜ್ಯ ಮಹಾ ಮಂಡಲೇಶ್ವರ 1008 ಸದ್ಗುರು ಶ್ರೀ ಬೃಹ್ಮಾನಂದ ಸರಸ್ವತೀ ಮಹಾಸ್ವಾಮಿ(Jagadguru Peethadhisha Parama Pujya Maha Mandaleshwara 1008 Sadguru Sri Brihmananda Saraswati Mahaswami)ಗಳ ಗುರುವಂದನಾ ಕಾರ್ಯಕ್ರಮವನ್ನು ಜ.9ರಂದು ಬೆಳಗ್ಗೆ 11ಕ್ಕೆ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯ ಲಿದೆ ಎಂದು ವಿಭಾಗೀಯ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.
ಇದನ್ನೂ ಓದಿ: Sirsi News: ಧಮ್ಕಿ ಆರೋಪಕ್ಕೆ ಅನಂತಮೂರ್ತಿ, ಉಪೇಂದ್ರ ಪೈ ಸ್ಪಷ್ಟನೆ ನೀಡಲಿ: ಪ್ರದೀಪ್ ಶೆಟ್ಟಿ ಆಗ್ರಹ
ಅವರಿಂದು ನಗರದ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದರು.
ಈ ಸಂದರ್ಭದಲ್ಲಿ ಶ್ರೀ ಮಠದ ನೂತನ ಟ್ರಸ್ಟಿಗಳಾಗಿ ಆಯ್ಕೆಯಾದ ಶಾಸಕ ಭೀಮಣ್ಣ ಬಿ.ನಾಯ್ಕ( MLA Bhimanna B. Naik), ಸಮಿತಿಯ ಅಧ್ಯಕ್ಷ ಎಚ್.ಆರ್.ನಾಯ್ಕ, ಮಂಗಳೂರಿನ ಹರೀಶ ಕುಮಾರ, ಸುಜಾತಾ ವಸಂತ ಬಂಗೇರ, ಉದ್ಯಮಿ ಕೆ. ಚಂದ್ರು ಪೂಜಾರಿ, ಮಂಜುನಾಥ ಪೂಜಾರಿ ಇವರೆಲ್ಲಿಗೂ ಗೌರವ ಅಭಿನಂದನೆ ನೆರವೇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶೋಭಾ ನಾಯ್ಕ, ಶ್ರೀನಿವಾಸ ನಾಯ್ಕ, ಗಣಪತಿ ನಾಯ್ಕ ಮುಂತಾದವ ರಿದ್ದರು.