ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಿಮನಾಡಿನ ಯಾಕ್ ಹಾಗೂ ಮರುಭೂಮಿಯ ಒಂಟೆ ಒಂದೇ ಸೂರಿನಡಿ: ಶಿರಸಿಯಲ್ಲಿ ವಿಸ್ಮಯ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್!

ಹಿಮಾಲಯದ ಅತಿ ಶೀತಲ ಪ್ರದೇಶದ ಯಾಕ್ ಪ್ರಾಣಿಗಳನ್ನು ದಕ್ಷಿಣ ಭಾರತಕ್ಕೆ ಕರೆತಂದು, ವರ್ಷದ ಮೂರೂ ಋತುಗಳನ್ನು ಯಶಸ್ವಿಯಾಗಿ ಕಳೆದು ಸುಮಾರು ಹತ್ತು ತಿಂಗಳಿನಿಂದ ಅವುಗಳನ್ನು ಕಾಪಾಡುತ್ತಿರುವುದರ ಜತೆಗೆ, ಇದೀಗ ಮರುಭೂಮಿಯ ಒಂಟೆಯನ್ನೂ ಅದೇ ಪರಿಸರದಲ್ಲಿ ಜೋಪಾನ ಮಾಡುತ್ತಿದ್ದಾರೆ ಶಿರಸಿಯ ಪ್ರಾಣಿ ಹಾಗೂ ಪಕ್ಷಿ ತಜ್ಞ ರಾಜೇಂದ್ರ ಬಿ. ಸಿರಸಿಕರ್. ಇವರ ಈ ಅಪರೂಪದ ಸಾಧನೆ ಗುರುತಿಸಿ ಪ್ರತಿಷ್ಠಿತ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಸಂಸ್ಥೆಯು 'IBR Achiever' ಗೌರವ ನೀಡಿ ಸನ್ಮಾನಿಸಿದೆ.

ಶಿರಸಿಯಲ್ಲಿ ವಿಸ್ಮಯ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್!

-

Profile
Siddalinga Swamy Oct 6, 2026 10:21 PM

ವರದಿ: ವಿನುತಾ ಹೆಗಡೆ, ಶಿರಸಿ

ಪ್ರಕೃತಿ ಮತ್ತು ಪ್ರಾಣಿ ಪ್ರೇಮಿಗಳ ಲೋಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಾಣಿ ಹಾಗೂ ಪಕ್ಷಿ ತಜ್ಞ ರಾಜೇಂದ್ರ ಬಿ. ಸಿರಸಿಕರ್ ಮತ್ತೊಂದು ಅಸಾಮಾನ್ಯ ದಾಖಲೆ ಬರೆದಿದ್ದಾರೆ. ಹಿಮಾಲಯದ ಅತಿ ಶೀತಲ ಪ್ರದೇಶದ 'ಯಾಕ್' (Yak) ಪ್ರಾಣಿಯನ್ನು ದಕ್ಷಿಣ ಭಾರತಕ್ಕೆ ಪರಿಚಯಿಸಿ ಇತಿಹಾಸ ಸೃಷ್ಟಿಸಿದ್ದ ಇವರು, ಈಗ ಮತ್ತೊಂದು ಕುತೂಹಲಕಾರಿ ಹೆಜ್ಜೆಯನ್ನಿಟ್ಟಿದ್ದಾರೆ. ಹಿಮಾಚಲ ಪ್ರದೇಶದ ಮೈನಸ್ ಡಿಗ್ರಿ ಉಷ್ಣಾಂಶದ ಯಾಕ್ ಹಾಗೂ ಬಿಸಿಲಿನ ಬೇಗೆಯ ಮರುಭೂಮಿಯ ಒಂಟೆ, ಈ ವಿಭಿನ್ನ ಹವಾಮಾನದ ಎರಡು ಪ್ರಾಣಿಗಳನ್ನು ಒಂದೇ ಪ್ರದೇಶದಲ್ಲಿ ಯಶಸ್ವಿಯಾಗಿ ಒಟ್ಟಿಗೆ ಪೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವಿರುದ್ಧ ಧ್ರುವಗಳ ಜೀವಗಳು ಒಂದೇ ಕಡೆ

ಯಾಕ್ ಪ್ರಾಣಿಗಳು: ಹಿಮಾಲಯದ ಅತಿ ಶೀತ, ಹಿಮಾವೃತ ಪ್ರದೇಶಗಳಲ್ಲಿ ಮಾತ್ರ ಬದುಕಬಲ್ಲ ಪ್ರಾಣಿ. ಕಳೆದ 2025ರ ಅಕ್ಟೋಬರ್ ತಿಂಗಳಿನಲ್ಲಿ ಇವುಗಳನ್ನು ಶಿರಸಿಯ ಪ್ರಾಣಿ ಮತ್ತು ಪುನರ್ವಸತಿ ಕೇಂದ್ರಕ್ಕೆ ಕರೆತರಲಾಗಿತ್ತು.

Yak

ಮರುಭೂಮಿಯ ಒಂಟೆಗಳು: ವಿಪರೀತ ಬಿಸಿಲು ಮತ್ತು ಒಣ ಹವೆ ಇರುವ ಮರುಭೂಮಿಗೆ ಸೀಮಿತವಾದ ಪ್ರಾಣಿ.



ವಿಭಿನ್ನ ಹವಾಮಾನದ ಮತ್ತು ಸಂಪೂರ್ಣ ವಿರುದ್ಧ ಪರಿಸರದಲ್ಲಿ ಬೆಳೆಯುವ ಈ ಎರಡು ಪ್ರಾಣಿಗಳನ್ನು ಒಂದೇ ಸೂರಿನಡಿ, ಕರ್ನಾಟಕದ ವಾತಾವರಣಕ್ಕೆ ತಕ್ಕಂತೆ ಹೊಂದಿಸಿ ಪಾಲನೆ ಮಾಡುವುದು ಯಾರಿಂದಲೂ ಸಾಧ್ಯವಿಲ್ಲದ ಸಾಹಸವಾಗಿತ್ತು. ಆದರೆ ರಾಜೇಂದ್ರ ಸಿರಸಿಕರ್ ಅವರು ತಮ್ಮ ಅದ್ಭುತ ಪ್ರಾಣಿ ಸಂರಕ್ಷಣಾ ಅನುಭವದಿಂದ ಇದನ್ನು ಸಾಧ್ಯವಾಗಿಸಿದ್ದಾರೆ.

ಹೊಸ ಇತಿಹಾಸ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಯಾಕ್ ಪ್ರಾಣಿಗಳನ್ನು ದಕ್ಷಿಣ ಭಾರತಕ್ಕೆ ಕರೆತಂದು, ವರ್ಷದ ಮೂರೂ ಋತುಗಳನ್ನು ಯಶಸ್ವಿಯಾಗಿ ಕಳೆದು ಸುಮಾರು ಹತ್ತು ತಿಂಗಳಿನಿಂದ ಅವುಗಳನ್ನು ಕಾಪಾಡುತ್ತಿರುವುದರ ಜತೆಗೆ, ಇದೀಗ ಮರುಭೂಮಿಯ ಒಂಟೆಯನ್ನೂ ಅದೇ ಪರಿಸರದಲ್ಲಿ ಜೋಪಾನ ಮಾಡುತ್ತಿದ್ದಾರೆ. ಇವರ ಈ ಅಪರೂಪದ ಸಂಶೋಧನೆ ಮತ್ತು ವಿಶಿಷ್ಟ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' (India Book of Records) ಸಂಸ್ಥೆಯು 'IBR Achiever' ಗೌರವ ನೀಡಿ ಸನ್ಮಾನಿಸಿದೆ.

ದಕ್ಷಿಣ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ

ಶಿರಸಿಯ ರಾಜೇಂದ್ರ ಬಿ. ಸಿರಸಿಕರ್ ಅವರ ಈ ಸಾಧನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದಕ್ಷಿಣ ಭಾರತಕ್ಕೆ ವನ್ಯಜೀವಿ ಲೋಕದ ಅತಿ ದೊಡ್ಡ ವಿಸ್ಮಯ ಹಾಗೂ ಹೆಮ್ಮೆಯ ಕ್ಷಣವಾಗಿದೆ.