ಬಡವರಿಗೆ ಒದಗಬೇಕಿದ್ದ ಸೌಲಭ್ಯದಲ್ಲಿ ರಾಜಕಾರಣ : ಅನಂತ ಮೂರ್ತಿ ಹೆಗಡೆ ಕಳವಳ
ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ನಿರ್ಮಾಣ ಕಾಮಗಾರಿಯ ಶೇಕಡಾ 80% ರಷ್ಟು ಸಂಬಂ ಧಿಸಿ ವೈದ್ಯಕೀಯ ಉಪಕರಣ, ತಜ್ಞವೈದ್ಯರ ನೇಮಕಾತಿ ಸಂಬಂಧಿಸಿ ಯಾವುದೇ ಪ್ರಕ್ರಿಯೆ ಪೂರ್ಣಗೊಂಡು ಒಂದು ವರ್ಷಕ್ಕಿಂತಲೂ ಅಧಿಕ ಸಮಯ ಆದರೂ ಸಹ, ಇದು ವರೆಗೂ ಆಸ ತೆಗೆ ದೇಶಪಾಂಡೆ ಒಳಗೊಂಡು ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷವಾಗಿದೆ.
-
ಶಿರಸಿ: ನಗರದಲ್ಲಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ಮುಗಿಯುತ್ತಾ ಬಂದರೂ ಇದುವರೆಗೂ ವೈದ್ಯರ ನೇಮಕ, ಅಗತ್ಯ ಯಂತ್ರೋಪಕರಣಗಳ ಪೂರೈಕೆ ಅಗದೇ ಇರುವುದು ದುರಂತ. ಬಡವರಿಗೆ ಒದಗ ಬೇಕಿದ್ದ ಸೌಲಭ್ಯದಲ್ಲಿ ರಾಜಕಾರಣ ನಡೆಯುತ್ತಿರುವ ಕುರಿತು ಎಂದು ಸಾಮಾಜಿಕ ಕಾರ್ಯಕರ್ತ ಅನಂತ ಮೂರ್ತಿ ಹೆಗಡೆ ಕಳವಳ ವ್ಯಕ್ತಪಡಿಸಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಾಡಿದ್ದು 16 ರಂದು ಈ ಕುರಿತು ಅಧಿವೇಶನದ ಸಮಯದಲ್ಲಿ ಪ್ರತಿ ಭಟನೆ ನಡೆಸುವುದಾಗಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಅವಘಾತಗಳಿಗೆ ಒಳಗಾಗಿ ಮಾರ್ಗಮಧ್ಯೆ ಸಾವನ್ನವು ತಿರುವವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಜಿಲೆಯಲ್ಲಿ ಮಲ್ಲಿ ಸೊ ಷಾಲಿಟಿ ಇಲ್ಲದಿರುವ ಕಾರಣ ಹೆಚಿನ ಚಿಕಿತ್ಸೆ ಗಾಗಿ ಹೊರ ಜಿಲೆಯ ಉತ್ತಮ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಶಿರಸಿಯಲ್ಲಿ ಅಂದಿನ ಬಿಜೆಪಿ ಸರಕಾರದ 250 パパ985. g ಸರಕಾರ ಆಸ್ಪತ್ರೆಯನ್ನು ನಿರ್ಲಕ್ಷಿಸಿ ಜನರ ಸಾವಿನ ಮೇಲೆ ತನ್ನ ರಾಜ್ಯಭಾರವನ್ನು ಮಾಡುತ್ತಿರುವಂತೆ ಭಾಸವಾಗುತ್ತಿದೆ.
ಇದನ್ನೂ ಓದಿ: Sirsi News: ಹಾಸ್ಯಗಾರರ ಕೃತಿಗೆ ಇನ್ನೊಂದು ಗರಿ
ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ನಿರ್ಮಾಣ ಕಾಮಗಾರಿಯ ಶೇಕಡಾ 80% ರಷ್ಟು ಸಂಬಂ ಧಿಸಿ ವೈದ್ಯಕೀಯ ಉಪಕರಣ, ತಜ್ಞವೈದ್ಯರ ನೇಮಕಾತಿ ಸಂಬಂಧಿಸಿ ಯಾವುದೇ ಪ್ರಕ್ರಿಯೆ ಪೂರ್ಣಗೊಂಡು ಒಂದು ವರ್ಷಕ್ಕಿಂತಲೂ ಅಧಿಕ ಸಮಯ ಆದರೂ ಸಹ, ಇದು ವರೆಗೂ ಆಸ ತೆಗೆ ದೇಶಪಾಂಡೆ ಒಳಗೊಂಡು ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷವಾಗಿದೆ. ಬಿಜೆಪಿ ಅವಧಿಯಲ್ಲಿ. ಆರಂಭಗೊಳ್ಳದಿರುವುದು ಸ್ಥಳೀಯ ಶಾಸಕರು. ಜಿಲ್ಲಾ ಉಸುವಾರಿ ಸಚಿವರು ಹಾಗು ಹಿರಿಯರಾಗಿ ರುವ ಆರಂಭಗೊಂಡಿರುವ ಆಸ್ಪತ್ರೆಯನ್ನು ರಾಜಕೀಯ ಕಾರಣಕ್ಕಾಗಿ ನಿರ್ಮಾಣ ಹಂತದಲ್ಲಿ ನಿಧಾನಗೊಳಿಸಲಾಗುತ್ತಿದೆ. ಈಗಲೇ ಆಸ್ಪತ್ರೆ ನಿರ್ಮಾಣವಾದರೆ ಅದರ ಕ್ರೆಡಿಟ್ ಬಿಜೆಪಿ, ಸರಕಾರಕ್ಕೆ ದೊರೆಯುತ್ತದೆ, ಬದಲಾಗಿ ಮುಂಬರುವ ಚುನಾವಣೆ ಸಮಯಕ್ಕೆ ಆಸ್ಪತ್ರೆ ಪೂರ್ಣ ಗೊಳಿಸಿದರೆ, ಆಗ ಕ್ರೆಡಿಟ್ ತಮಗೆ ಬರುತ್ತದೆ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ ಎನಿಸುತ್ತದೆ. ಇದನ್ನು ಶಿರಸಿಯ ಸಮಸ್ತ ನಾಗರಿಕರ ಪರವಾಗಿ ವಿರೋಧಿಸುವುದು ಅನಿವಾರ್ಯವಾಗಿದೆ.
ಈ ಹಿಂದೆ ಘೋಷಿಸಲಾಗಿದ್ದ ಆಸ್ಪತ್ರೆಗೆ ಸಂಬಂಧಿಸಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ವೈದ್ಯ ಕೀಯ ಉಪಕರಣಗಳ ಖರೀದಿ ಹಾಗು ತಜ್ಞ ವೈದ್ಯರ ನೇಮಕಾತಿ ಸಂಬಂಧಿಸಿ ಮಾಹಿತಿ ಕೇಳಲಾಗಿತ್ತು. ಇದಕ್ಕೆ ಪ್ರತಿಯಾಗಿ ಡಿಸೆಂಬರ್ 4 ರಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಿಂದ ಆಸ್ಪತ್ರೆ ವೈದ್ಯಕೀಯ ಉಪಕರಣ ಹಾಗು ತಜ್ಞ ವೈದ್ಯರ ನೇಮಕಾತಿ ಸಂಬಂಧಿಸಿ ಯಾವುದೇ ಹುದ್ದೆಗಳು ಮಂಜೂರಾಗಿಲ್ಲ. ಹಾಗು ಯಂತ್ರೋಪಕರಣಗಳು ಸರಬರಾಜು ಆಗಿಲ್ಲ ಎಂಬ ಉತ್ತರ ದೊರಕಿದೆ. ಈ ಪ್ರಸ್ತಾವನೆಯು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಳಿಯಿದ್ದು, ಯಾವ ಹಂತದಲ್ಲಿದೆ ಎಂಬ ಮಾಹಿತಿ ಇಲ್ಲದಿರುವುದಾಗಿ ಉತ್ತರ ನೀಡಿದ್ದಾರೆ.
ಇದು ಹೀಗೆಯೇ ಮುಂದುವರೆದರೆ ಇದೊಂದು ದೊಡ್ಡ ಗೋಡೌನ್ ಆಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ವೈದ್ಯಕೀಯ ಉಪಕರಣಗಳಿಗೆ ಆದಷ್ಟು ಕೂಡಲೇ ಟೆಂಡರ್ ಕರೆಯಬೇಕು ಮತ್ತು ತಜ್ಞ ವೈದ್ಯರ ನೇಮಕಾತಿ ನಡೆಯಬೇಕು ಎಂದು ಆಗ್ರಹಿಸಿ ಇದೇ ಡಿಸೆಂಬರ್ 16, ಮಂಗಳವಾರದಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಬೃಹತ್ ಹೋರಾಟ ಕೈಗೊಳ್ಳಲಾಗುತ್ತಿದೆ. ಇದು ಕೇವಲ ಯಾರ ವಿರುದ್ಧದ ಹೋರಾಟವಲ್ಲ. ಕ್ಷೇತ್ರದ ಜನರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದ್ದು, ಪಕ್ಷಬೇಧ ಮರೆತು ಈ ಆಸ್ಪತ್ರೆ ಹೋರಾಟಕ್ಕೆ ಭಾಗವಹಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಉಷಾ ಹೆಗಡೆ, ಜಿ ಎಸ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.