ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sirsi News: ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಶಿರಸಿ ರಂಗಧಾಮದಲ್ಲಿ ಲೋಗೋ ಬಿಡುಗಡೆಗೊಳಿಸಿ ಶಾಸಕ ಭೀಮಣ್ಣ ನಾಯ್ಕ

ಕಳೆದ ಐದು ದಶಕಗಳಿಂದ ಆದರ್ಶ ವನಿತಾ ಸಮಾಜವು ಮಹಿಳೆಯರನ್ನು ಸಂಘಟಿಸುವಲ್ಲಿ ಮತ್ತು ಅವರಲ್ಲಿನ ಸುಪ್ತ ಪ್ರತಿಭೆ ಗಳನ್ನು ಹೊರ ತರುವಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಸುವರ್ಣ ಮಹೋತ್ಸವದ ಈ ಸಂಭ್ರಮವು ಸಂಸ್ಥೆಯ ಸುದೀರ್ಘ ಮತ್ತು ಅರ್ಥಪೂರ್ಣ ಪಯಣಕ್ಕೆ ಸಾಕ್ಷಿಯಾಗಿದೆ

ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯ

-

Ashok Nayak
Ashok Nayak Mar 14, 2026 10:52 AM

ಶಿರಸಿ: ನಗರದ ರಂಗಧಾಮದಲ್ಲಿ ಆಯೋಜಿಸಲಾಗಿದ್ದ 'ಆದರ್ಶ ವನಿತಾ ಸಮಾಜ ಸಹ್ಯಾದ್ರಿ(Adarsh ​​Vanita Samaj Sahyadri)' ಸಂಸ್ಥೆಯ ಸುವರ್ಣ ಮಹೋತ್ಸವ( Golden Jubilee) ಕಾರ್ಯಕ್ರಮದಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ( MLA Bhimanna T. Naik) ಅವರು ಪಾಲ್ಗೊಂಡು, ಸಂಸ್ಥೆಯ ಸುವರ್ಣ ಮಹೋತ್ಸವದ ಸ್ಮರಣಾರ್ಥ ಹೊರತಂದ ವಿಶೇಷ 'ಲೋಗೋ' ವನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕರು, "ಕಳೆದ ಐದು ದಶಕಗಳಿಂದ ಆದರ್ಶ ವನಿತಾ ಸಮಾಜವು ಮಹಿಳೆಯರನ್ನು ಸಂಘಟಿಸುವಲ್ಲಿ ಮತ್ತು ಅವರಲ್ಲಿನ ಸುಪ್ತ ಪ್ರತಿಭೆ ಗಳನ್ನು ಹೊರ ತರುವಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಸುವರ್ಣ ಮಹೋತ್ಸವದ ಈ ಸಂಭ್ರಮವು ಸಂಸ್ಥೆಯ ಸುದೀರ್ಘ ಮತ್ತು ಅರ್ಥಪೂರ್ಣ ಪಯಣಕ್ಕೆ ಸಾಕ್ಷಿಯಾಗಿದೆ," ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: Sirsi News: 'ನೀ ಹೂ ಅಂದ್ರ ಗಿಚ್ಚ ಆಕ್ಕೇನಿ ಇಲ್ಲಂದ್ರ ಹುಚ್ಚಕ್ಕೇನಿ' ಆರಂಭ

ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢರಾಗಬೇಕು. ಇಂತಹ ಸಂಸ್ಥೆಗಳು ಮಹಿಳೆಯರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಸಂಸ್ಥೆಯ 50 ವರ್ಷಗಳ ಸಾರ್ಥಕ ಹಾದಿಯನ್ನು ಬಿಂಬಿಸುವ ಆಕರ್ಷಕ ಲೋಗೋವನ್ನು ಶಾಸಕರು ಅನಾವರಣಗೊಳಿಸಿ, ಸುವರ್ಣ ಮಹೋತ್ಸವದ ಮುಂಬರುವ ಎಲ್ಲಾ ಕಾರ್ಯಕ್ರಮಗಳಿಗೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಆದರ್ಶ ವನಿತಾ ಸಮಾಜದ ಪದಾಧಿಕಾರಿಗಳು, ಪ್ರಮುಖರು ಹಾಗೂ ನೂರಾರು ಸಂಖ್ಯೆಯಲ್ಲಿ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

ರಂಗಧಾಮದ ಸಭಾಂಗಣವು ಸಾಂಸ್ಕೃತಿಕ ಕಳೆ ಹಾಗೂ ಮಹಿಳಾ ಶಕ್ತಿಯ ಸಂಭ್ರಮಕ್ಕೆ ಸಾಕ್ಷಿಯಾಯಿತು.