ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vijayanagara News: ಹೊಸಪೇಟೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಿ. ಲಿಂಗಯ್ಯ ಸ್ಮರಣಾರ್ಥ ನಿರ್ಮಿಸಿರುವ ಶ್ರೀ ಯೋಗಿ ನಾರಾಯಣ ನೂತನ ಬಸ್ ನಿಲ್ದಾಣ ಉದ್ಘಾಟನೆ

Vijayanagara News: ಹೊಸಪೇಟೆ ನಗರದ ಬಳ್ಳಾರಿ ರಸ್ತೆಯ ಅಲದ ಮರದ ಹತ್ತಿರ ಸ್ವಾತಂತ್ರ್ಯ ಹೋರಾಟಗಾರ ಪಿ. ಲಿಂಗಯ್ಯ ಅವರ ಸ್ಮರಣಾರ್ಥ ಅವರ ಮಕ್ಕಳು ನಿರ್ಮಿಸಿರುವ ಶ್ರೀ ಯೋಗಿ ನಾರಾಯಣ ನೂತನ ಬಸ್ ನಿಲ್ದಾಣವನ್ನು ಹುಡಾ ಅಧ್ಯಕ್ಷ ಎಚ್.ಎನ್ . ಮೊಹಮ್ಮದ್ ಇಮಾಮ್ ನಿಯಾಜಿ ಉದ್ಘಾಟಿಸಿದರು.

ಹೊಸಪೇಟೆಯಲ್ಲಿ ಶ್ರೀ ಯೋಗಿ ನಾರಾಯಣ ನೂತನ ಬಸ್ ನಿಲ್ದಾಣ ಉದ್ಘಾಟನೆ

-

Profile
Siddalinga Swamy Nov 26, 2026 6:17 PM

ಹೊಸಪೇಟೆ, ನ.26: ನಗರದ ಬಳ್ಳಾರಿ ರಸ್ತೆಯ ಅಲದ ಮರದ ಹತ್ತಿರ ಸ್ವಾತಂತ್ರ್ಯ ಹೋರಾಟಗಾರ ಪಿ. ಲಿಂಗಯ್ಯ ಅವರ ಸ್ಮರಣಾರ್ಥ ಅವರ ಮಕ್ಕಳು ನಿರ್ಮಿಸಿರುವ ಶ್ರೀ ಯೋಗಿ ನಾರಾಯಣ ನೂತನ ಬಸ್ ನಿಲ್ದಾಣವನ್ನು ಹುಡಾ ಅಧ್ಯಕ್ಷ ಎಚ್.ಎನ್ . ಮೊಹಮ್ಮದ್ ಇಮಾಮ್ ನಿಯಾಜಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹುಡಾ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ, ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಹಾಗೂ ಸಾರ್ವಜನಿಕ ಸೇವೆಯ ಮನೋಭಾವ ಬೆಳೆಸುವ ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ. ಮಕ್ಕಳು ಸ್ವಾತಂತ್ರ್ಯ ಹೋರಾಟಗಾರ ಪಿ. ಲಿಂಗಯ್ಯ ಅವರ ಸ್ಮರಣಾರ್ಥ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ ನಿರ್ಮಿಸಿರುವುದು ಅತ್ಯಂತ ಶ್ಲಾಘನೀಯ. ಇಂದಿನ ಯುವ ಪೀಳಿಗೆಗೆ ಇಂತಹ ಸಮಾಜಮುಖಿ ಕಾರ್ಯಗಳು ಪ್ರೇರಣೆಯಾಗಬೇಕು ಎಂದು ಹೇಳಿದರು.

ಮಹನೀಯರ ಸ್ಮರಣೆಯನ್ನು ಕೇವಲ ಮಾತುಗಳಿಗೆ ಸೀಮಿತಗೊಳಿಸದೆ, ಅವರ ಹೆಸರಿನಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವ ಕಾರ್ಯಗಳನ್ನು ಕೈಗೊಳ್ಳುವುದು ನಿಜವಾದ ಗೌರವವಾಗಿದೆ. ಇಂತಹ ಉತ್ತಮ ಕಾರ್ಯಗಳಿಗೆ ಸಮಾಜದ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಪಿ. ಲಿಂಗಯ್ಯ ಅವರ ಮಕ್ಕಳಾದ ಪಿ. ಸಾಂಬಶಿವರಾವ್ ಅವರ ಈ ಸೇವಾ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಬಲಿಜ ಸಂಘದ ತಾಲೂಕು ಗೌರವ ಅಧ್ಯಕ್ಷ ಆರ್.ಕೆ. ರವಿಕುಮಾರ್ , ಶ್ರೀ ಯೋಗಿ ನಾರಾಯಣ ಟ್ರಸ್ಟ್‌ನ ಗೌರವಾಧ್ಯಕ್ಷ ದೊಡ್ಡ ಹನುಮಂತಪ್ಪ, ಶ್ರೀ ಯೋಗಿ ನಾರಾಯಣ ಟ್ರಸ್ಟ್‌ನ ಅಧ್ಯಕ್ಷ ಕೆ. ಗೋವಿಂದ, ಉತ್ತರ ಕರ್ನಾಟಕ ಬಲಿಜ ಸಂಘದ ಅಧ್ಯಕ್ಷ ಕಾಳಿದಾಸ್, ತಾಲೂಕು ಬಲಜ ಸಂಘದ ಅಧ್ಯಕ್ಷ ಜಿ. ಪಾಂಡುರಂಗ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಾಗೂ ಮುಖಂಡರಾದ ದ್ವಾರಕೇಶಿ ಹಾಗೂ ಇತರರು ಉಪಸ್ಥಿತರಿದ್ದರು.