ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kolhar News: ತಾಲೂಕ ಆಡಳಿತದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ತಾಲ್ಲೂಕ ದಂಡಾಧಿಕಾರಿ ಸಂತೋಷ ಮ್ಯಾಗೇರಿ ಧ್ವಜವಂದನೆ ಸ್ವೀಕರಿಸಿ ಮಾತನಾಡುತ್ತಾ ಶರಣರು, ಸಂತರು, ಕವಿಗಳು, ಸಾಹಿತಿಗಳು ಕನ್ನಡ ನಾಡು, ನುಡಿ ಮತ್ತು ಭಾಷೆಯನ್ನು ಬೆಳೆಸಲು ಅಪಾರ ವಾಗಿ ಶ್ರಮಿಸಿದ್ದಾರೆ ಎಂದರು. ನಾಡು ನುಡಿಯ ವಿಷಯದಲ್ಲಿ ನಾವುಗಳು ಕೂಡ ಅಪಾರವಾದ ಸ್ವಾಭಿಮಾನ ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.

ತಾಲೂಕ ಆಡಳಿತದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

-

Ashok Nayak Ashok Nayak Nov 4, 2025 3:48 PM

ಕೊಲ್ಹಾರ: ತಾಲ್ಲೂಕ ಆಡಳಿತದ ನೇತೃತ್ವದಲ್ಲಿ ಅ‌ತ್ಯಂತ ವಿಜೃಂಭಣೆಯಿಂದ 70 ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮ ಪಟ್ಟಣದ ಸರ್ಕಾರಿ ಶಾಲಾ ಆವರಣದಲ್ಲಿ ಜರುಗಿತು.

ತಾಲ್ಲೂಕ ದಂಡಾಧಿಕಾರಿ ಸಂತೋಷ ಮ್ಯಾಗೇರಿ ಧ್ವಜವಂದನೆ ಸ್ವೀಕರಿಸಿ ಮಾತನಾಡುತ್ತಾ ಶರಣರು, ಸಂತರು, ಕವಿಗಳು, ಸಾಹಿತಿಗಳು ಕನ್ನಡ ನಾಡು, ನುಡಿ ಮತ್ತು ಭಾಷೆಯನ್ನು ಬೆಳೆಸಲು ಅಪಾರ ವಾಗಿ ಶ್ರಮಿಸಿದ್ದಾರೆ ಎಂದರು. ನಾಡು ನುಡಿಯ ವಿಷಯದಲ್ಲಿ ನಾವುಗಳು ಕೂಡ ಅಪಾರವಾದ ಸ್ವಾಭಿಮಾನ ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.

ಎನ್.ಎಸ್.ಎಸ್ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಜೀವಕುಮಾರ ಬಿರಾದಾರ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಯುವಕರ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿ ಸುವ ಕಾರ್ಯ ಸರ್ಕಾರ ದಿಂದ ನಡೆಯಬೇಕು ಹಾಗೂ ನನ್ನಂತ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದ ಕನ್ನಡ ಯುವಕರನ್ನು ಗೌರವಿಸುವುದರಿಂದ ಕನ್ನಡ ನಾಡಿನ ಶಕ್ತಿ ದೇಶಕ್ಕೆ ತಿಳಿಯುತ್ತದೆ ಎಂದರು.

ಉಪನ್ಯಾಸಕರಾಗಿ ಡಿ ಆರ್ ಕೊಠಾರಿ ಮಾತನಾಡಿ ನಾಡಿನ ಜಾನಪದ,ಕಲೆ, ತಂತ್ರಜ್ಞಾನ, ಸಾಹಿತ್ಯ, ಸಾಮ್ರಾಜ್ಯಗಳ ಸಾಧನೆ ನಮ್ಮ ಕನ್ನಡಿಗರ ಸಾಧನೆ ಜಗತ್ತಿಗೆ ಮಾದರಿ ಎಂದು ಹೆಮ್ಮೆ ಪಡಬೇಕು ಎಂದು ಹೇಳಿದರು.

ಇದನ್ನೂ ಓದಿ: Kolhar News: ಪೌರಕಾರ್ಮಿಕರ ಶ್ರಮ ಶ್ರೇಷ್ಠವಾದದ್ದು: ಮುಖ್ಯಾಧಿಕಾರಿ ವೀರೇಶ ಹಟ್ಟಿ

ಉಪನ್ಯಾಸಕರಾಗಿ ಬಸವರಾಜ ಹಂಗರಗಿ ಮಾತನಾಡಿ ಕನ್ನಡ ಭಾಷೆಗೆ 2008 ರಲ್ಲಿ ಶಾಸ್ತ್ರೀಯ ಸ್ಥಾನಮಾನ ನೀಡಿದೆ ಇದರಿಂದ ಕನ್ನಡ ಭಾಷೆಗೆ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಕನ್ನಡ ಭಾಷೆಯ ಮಹತ್ವ ತಿಳಿಸಿದರು.

ಗೊಂದಲ: ಕಾರ್ಯಕ್ರಮದ ವೇದಿಕೆಯಲ್ಲಿ ಕರವೇ (ಪ್ರವೀಣ ಶಟ್ಟಿ) ಬಣದ ತಾಲೂಕ ಅಧ್ಯಕ್ಷ ರವಿ ಗೊಳಸಂಗಿ ಕಾರ್ಯಕ್ರಮವನ್ನು ದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಸಾರ್ವಜನಿಕ ಕಾರ್ಯನಿರ್ವಹಿಸುತ್ತಿಲ್ಲ, ದೂರವಾಣಿ ಕರೆ ಮಾಡಲಾಗಿಯೂ ಕೂಡ ಸ್ಪಂದನೆ ನೀಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಕೆಲ ಪಟ್ಟಣ‌ ಪಂಚಾಯತ್ ಸದಸ್ಯರು ಇದು ನಾಡ ಹಬ್ಬ ಹಾಗಾಗಿ ಆರೋಪ ಮಾಡುವುದು ತರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ದರು‌. ಈ ಸಂದರ್ಭದಲ್ಲಿ ಸ್ವಲ್ಪ ಕಾಲ ಗೊಂದಲಮಯ ವಾತಾವರಣ ನಿರ್ಮಾಣಗೊಂಡು ನಂತರ ತಿಳಿಗೊಂಡಿತು.

Kolhar 2

ವಿಶೇಷತೆ: ಕನ್ನಡ ನಾಗದೇವತೆ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಕಲಾಮೇಳ ದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು ಮತ್ತು ವಿಶೇಷ ಸಾಧಕರಿಗೆ, ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಮದ್ದೀನ, ಪ.ಪಂ ಮುಖ್ಯಾಧಿ ಕಾರಿ ವೀರೇಶ ಹಟ್ಟಿ, ಪ.ಪಂ ಅಧ್ಯಕ್ಷ ಸಿ.ಎಸ್ ಗಿಡ್ಡಪ್ಪಗೋಳ, ಉಪಾಧ್ಯಕ್ಷ ರಾಜಮಾ ನದಾಫ, ಪಿಎಸ್ಐ ಅಶೋಕ ನಾಯಕ, ಕರವೇ ಅಧ್ಯಕ್ಷರಾದ ರವಿ ಗೋಳಸಂಗಿ, ಮಹಾಂತೇಶ ಗಿಡ್ಡಪ್ಪಗೋಳ, ವ್ಹಿ ಎಚ್ ಪುರೋಹಿತ, ಸಂಗಮೇಶ ಜಂಗಮಶೆಟ್ಟಿ, ಪ.ಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿ ಗಳು, ಸಿಬ್ಬಂದಿ ವರ್ಗದವರು , ಪಟ್ಟಣದ ನಾಗರೀಕರು, ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.