ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಠಗಳು ಸನ್ಮಾರ್ಗದ ದಾರಿದೀಪ

ಪ್ರತಿಯೊಬ್ಬರಲ್ಲೂ ದೇವರಿದ್ದಾನೆ. ಆ ದೇವರನ್ನು ಕಾಣಲು ನಮ್ಮಲ್ಲಿ ಅರಿವು ಮೂಡಿಸುವ ಮಠಗಳ ಗುರುಗಳು ಅಗತ್ಯ, ಗುರುವೆಂದರೆ ಕೇವಲ ಶಿಕ್ಷಣ ಜ್ಞಾನ ನೀಡುವವರಲ್ಲ, ಬದುಕಿಗೆ ಮಾರ್ಗ ತೋರು ವವರು ಅವರು ತೋರುವ ಮಾರ್ಗದಲ್ಲಿ ಸಮಾಜ ಶಾಂತಿ ನೆಮ್ಮದಿ ಯಿಂದ ಬಾಳಬೇಕು ಎಂದರು

ಮಠಗಳು ಸನ್ಮಾರ್ಗದ ದಾರಿದೀಪ

ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ನಡೆದ ಶ್ರೀ ಶಂಕರಲಿAಗ ಜಾತ್ರಾಮಹೋತ್ಸವ ನಿಮಿತ್ಯ ನಡೆದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪ್ರಭುಲಿಂಗ ಶ್ರೀಗಳು ಮಾತನಾಡಿದರು. -

Profile
Ashok Nayak May 8, 2026 12:09 AM

ಇಂಡಿ: ಮಠಗಳು ಈ ನಾಡಿನ ಧಾರ್ಮಿಕ ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳು ಸಮಾಜವು ಸನ್ಮಾರ್ಗದಲ್ಲಿ ಸಾಗಲು ಮಠಗಳು ದಾರಿದೀಪ ಎಂದು ಅಗರಖೇಡ ವಿರಕ್ತಮಠದ ಪ್ರಭುಲಿಂಗ ಶ್ರೀಗಳು ಹೇಳಿದರು. ತಾಲೂಕಿನ ಅಗರಖೇಡ ಗ್ರಾಮದಲ್ಲಿ ನಡೆದ ಶ್ರೀ ಶಂಕರಲಿಂಗ ಜಾತ್ರಾಮಹೋತ್ಸವ ನಿಮಿತ್ಯ ನಡೆದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ: Indi News: ಗ್ರಾಪಂ ಗಳಿಗೆ ಬಾರದ 15ನೇ ಹಣಕಾಸು ಯೋಜನೆ ಅನುದಾನ: ಬಹುತೇಕ ಗ್ರಾಪಂಗಳಿಗೆ ಅರ್ಥಿಕ ಸಂಕಷ್ಟ

ಚಳಕಾಪುರ ಆಳೂರದ ಸಿದ್ದಾರೂಢ ಮಠದ ಶಂಕರಾನಂದ ಶ್ರೀಗಳು ಮಾತನಾಡಿ,ಪ್ರತಿಯೊಬ್ಬ ರಲ್ಲೂ ದೇವರಿದ್ದಾನೆ. ಆ ದೇವರನ್ನು ಕಾಣಲು ನಮ್ಮಲ್ಲಿ ಅರಿವು ಮೂಡಿಸುವ ಮಠಗಳ ಗುರುಗಳು ಅಗತ್ಯ, ಗುರುವೆಂದರೆ ಕೇವಲ ಶಿಕ್ಷಣ ಜ್ಞಾನ ನೀಡುವವರಲ್ಲ, ಬದುಕಿಗೆ ಮಾರ್ಗ ತೋರುವವರು ಅವರು ತೋರುವ ಮಾರ್ಗದಲ್ಲಿ ಸಮಾಜ ಶಾಂತಿ ನೆಮ್ಮದಿ ಯಿಂದ ಬಾಳಬೇಕು ಎಂದರು.

ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಭೀಮಣ್ಣ ಕವಲಗಿ, ಮದನಕುಮಾರ ಶಿಂದೆ, ಡಾ. ಸಂಗನಬಸು ಬಿರಾದಾರ, ಸಂಗನಗೌಡ ಬಿರಾದಾರ ಮತ್ತಿತರರು ವೇದಿಕೆಯ ಮೇಲೆ ಇದ್ದರು.

ಇದೇ ವೇಳೆ, ಜಾತ್ರಾ ಮಹೋತ್ಸವ ನಿಮಿತ್ಯ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.