Indi News: ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಸ್ವಚ್ಛತಾ ಶ್ರಮದಾನ ಮುಖ್ಯ: ಉಪನ್ಯಾಸಕಿ ಶಾಹಿನಾ ಪಾಟೀಲ ಅಭಿಮತ
ವಿದ್ಯಾರ್ಥಿಗಳು ಡಾ.ಅಬ್ದುಲ್ ಕಲಾಂ ರವರ ವಾಣಿ ಯಂತೆ ಹೊಲದಲ್ಲಿ ಬೆಳೆಯುವ ಬೇಳೆಗಳು ಬೆಳೆಯುವ ವ್ಯಕ್ತಿ ಕಳೆ ಇಟ್ಟುಕೊಂಡರೆ ಬುದ್ಧಿಮಾಂದ್ಯ ವ್ಯಕ್ತಿಯಾಗಿರುತ್ತಾನೆ. ಅದಕ್ಕೆ ಶಿಕ್ಷಕ ಯಾವ ರೀತಿಯ ಮಾರ್ಗದರ್ಶನ ಜ್ಞಾನ ನೀಡಿ ಕಳೆಯನ್ನು ತೆಗೆದು ವಿಶ್ವಜ್ಞಾನಿ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ರಂತಹ ವಿಶ್ವರತ್ನ ಪಡೆದುಕೊಂಡಿದ್ದೇವೆ
ನಗರದ ಟಿಪ್ಪು ಸುಲ್ತಾನ ಸರ್ಕಲ್ ಸಮೀಪದ ಮೆಟ್ರಿಕ್ ನಂತರದ ಹಾಗೂ ಮ್ಯಾಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯ ಇಂಡಿಯಲ್ಲಿ ವ್ಯಕ್ತಿತ್ವ ವಿಕಸನ ಉಪನ್ಯಾಸ ಸ್ವಚ್ಛತಾ ಶ್ರಮದಾನ ವಿದ್ಯಾರ್ಥಿನಿಯರಿಗೆ ಉಪನ್ಯಾಸದ ಮೂಲಕ ಜಾಗೃತಿ ಕಾರ್ಯಕ್ರಮ ಮಾಡುತ್ತಿರುವುದು. -
ಇಂಡಿ: ಸರ್ಕಾರಿ ಪದವಿಪೂರ್ವ ಕಾಲೇಜ ಇಂಡಿ ಉಪನ್ಯಾಸಕಿ ಶ್ರೀಮತಿ ಸಹಿನಾ ಪಾಟೀಲ ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವನ್ನು ನೀಗಿಸಬೇಕಾದರೆ ಶಿಕ್ಷಣವೆಂಬ ಹಸಿವನ್ನು ಪಡೆಯಬೇಕು. ನಹೀ ಜ್ಞಾನೇನ ಸದೃಶ್ಯಂ ಜ್ಞಾನಕ್ಕಿಂತ ಮಿಗಿಲಾದ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ. ಗುಣವಿಲ್ಲದವನ ರೂಪ ಹಸಿವು ಇಲ್ಲದ ಮನುಷ್ಯ ವ್ಯರ್ಥವಾಗಿ, ಪ್ರಜ್ಞೆ ಇಲ್ಲದವನ ಧನ ವ್ಯರ್ಥವಾಗಿ ಇರುತ್ತದೆ. ಜ್ಞಾನ ಇಲ್ಲದ ವ್ಯಕ್ತಿ ಅಂಧಕ ಇದ್ದ ಹಾಗೆ ಅವನ ಕೈಯಲ್ಲಿ ಬೆಂಕಿ ಕಿಡಿ ಕೊಟ್ಟಾಗ ಎಲ್ಲವು ಧಗಿ ಧಗಿಸುತ್ತದೆ ಆದ್ದರಿಂದ ಜ್ಞಾನ ಎಂಬುದು ಅರಿವಿನ ಸಾಗರ ಇದ್ದಂತೆ.
ವಿದ್ಯಾರ್ಥಿಗಳು ಡಾ.ಅಬ್ದುಲ್ ಕಲಾಂರವರ ವಾಣಿಯಂತೆ ಹೊಲದಲ್ಲಿ ಬೆಳೆಯುವ ಬೇಳೆಗಳು ಬೆಳೆಯುವ ವ್ಯಕ್ತಿ ಕಳೆ ಇಟ್ಟುಕೊಂಡರೆ ಬುದ್ಧಿಮಾಂದ್ಯ ವ್ಯಕ್ತಿಯಾಗಿರುತ್ತಾನೆ. ಅದಕ್ಕೆ ಶಿಕ್ಷಕ ಯಾವ ರೀತಿಯ ಮಾರ್ಗದರ್ಶನ ಜ್ಞಾನ ನೀಡಿ ಕಳೆಯನ್ನು ತೆಗೆದು ವಿಶ್ವಜ್ಞಾನಿ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ರಂತಹ ವಿಶ್ವರತ್ನ ಪಡೆದುಕೊಂಡಿದ್ದೇವೆ ಎಂಬ ಮಾತನ್ನು ಈ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ: Indi News: ಶಿಕ್ಷಣ ಪ್ರವಾಹವಿದ್ದಂತೆ: ಗುರುಮಾತೆ ಚೆನ್ನಮ್ಮಾ ಝಳಕಿ ಅಭಿಮತ
ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ತಮ್ಮ ಮುಂದೆ ಇರುವಂತಹ ತಂದೆ ತಾಯಿ ಚಿಕ್ಕಪ್ಪ ಚಿಕ್ಕಮ್ಮ ಅಣ್ಣ ತಮ್ಮ ಮತ್ತು ತಂಗಿ ಸ್ಮರಣೆ ಮಾಡಿಕೊಂಡು ಶಿಕ್ಷಣವೆಂಬ ಸಂಸ್ಕಾರ ಪಡೆಯಬೇಕು. ಅದೇ ರೀತಿಯಲ್ಲಿ ತಾವು ವಾಸಿಸುವ ಕೋಣೆ ಗಳು, ಅವರಣ, ಅಡುಗೆ ಮನೆ ಸ್ವಚ್ಛತೆಯಿಂದ ಕೂಡಿರಬೇಕು ಹಾಗೂ ನಮಗೆ ನೆಮ್ಮದಿಯಿಂದ ನಿದ್ರೆ ಬರಬೇಕು ಎಂದರೆ ನಮ್ಮ ವಾತಾವರಣ ಶುದ್ಧವಾಗಿ ಇರಬೇಕು ಎಂದು ಉಪನ್ಯಾಸ ನೀಡಿದರು.
ಸಹಾಯಕ ನಿರ್ದೇಶಕರು ಉಮೇಶ್ ಲಮಾಣಿ ಮಾತನಾಡಿ, ವಿದ್ಯಾರ್ಥಿಗಳು ನಮ್ಮನ್ನು ನಾವು ಗುರುತಿಸಲ್ಪಡುವ ನಡೆ-ನುಡಿ ಆಚಾರ- ವಿಚಾರದಲ್ಲಿ ದಿನ ನಿತ್ಯದ ಜೀವನದಲ್ಲಿ ಸಂಸ್ಕಾರ ಬದುಕಿಸುತ್ತದೆ. ಸಂಸ್ಕೃತಿಯು ಬೆಳೆಸುತ್ತದೆ.ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಯಶಸ್ವಿ ಮಹಿಳೆ ಇರಬೇಕಾದರೆ ನಾವು ಶಿಕ್ಷಣವಂತರಾಗಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದ ನಿರೂಪಣೆ ವಸತಿ ನಿಲಯದ ವಿದ್ಯಾರ್ಥಿನಿ ಲಕ್ಷ್ಮಿ ನಾದ ನೆರವೇರಿಸಿದರು. ನಿಲಯ ಪಾಲಕ ಸಂಗನಬಸು ನಾಗಣಸೂರ ಸ್ವಾಗತಿಸಿ, ಪುಂಡಲೀಕ ಗೊಂದಳಿ ವಂದಿಸಿದರು.
ನಿಲಯ ಪಾಲಕರಾದ ಹಣಮಂತ ಅರವತ್ತು, ಅಶೋಕ ತಳವಾರ, ಮಲ್ಲು ವಾಲಿಕಾರ ಸೇರಿದಂತೆ ಅನೇಕರು ಇದ್ದರು.