ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Indi News: ಸತ್ಸಂಗದ ಸಂಸ್ಕಾರ ಮಠಗಳ ಕೊಡುಗೆ: ಮುರಗೇಂದ್ರ ಶ್ರೀಗಳು

ನಗರದ ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ 60 ವರ್ಷ ದಾಟಿದ ಹಿರಿಯರಿಗೆ ಆದರ್ಶ ದಂಪತಿಗಳಿಗೆ ಸನ್ಮಾ ನಿಸುವ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಇತಿಹಾಸ ಸಾಂಸ್ಕೃತಿಕ ಧಾರ್ಮಿಕ ಭಜನೆ ಪುರಾಣ ಹಾಗೂ ಪ್ರವಚನ ಮಾಡುತ್ತಿರುವ ಮಠಗಳ ಕಾರ್ಯ ಶ್ಲಾಘನೀಯ ಎಂದರು.

Indi News: ಸತ್ಸಂಗದ ಸಂಸ್ಕಾರ ಮಠಗಳ ಕೊಡುಗೆ: ಮುರಗೇಂದ್ರ ಶ್ರೀಗಳು

ಇಂಡಿ ನಗರದ ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ ೬೦ ವರ್ಷ ದಾಟಿದ ಹಿರಿಯರಿಗೆ ಆದರ್ಶ ದಂಪತಿಗಳಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮುರಗೇಂದ್ರ ಶ್ರೀಗಳು ಮಾತನಾಡಿದರು. -

Profile
Ashok Nayak Apr 6, 2026 12:09 PM

ಇಂಡಿ: ಮಠ ಮಾನ್ಯಗಳಿಂದಲೇ ತಾಲೂಕು ಪ್ರಸಿದ್ದಿ ಪಡೆದಿದೆ. ಹಲವಾರು ಮಠಗಳು ಅನ್ನ ಪ್ರಸಾದ, ಉಚಿತ ಶಿಕ್ಷಣ ಹುಣ್ಣಿಮೆ ಕಾರ್ಯಕ್ರಮದಂತಹ ಸಂಸ್ಕಾರ ನೀಡುತ್ತಿವೆ. ಸತ್ಸಂಗ ದಿಂದ ಜೀವನದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳು ಹೇಳಿದರು.

ನಗರದ ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ 60 ವರ್ಷ ದಾಟಿದ ಹಿರಿಯರಿಗೆ ಆದರ್ಶ ದಂಪತಿಗಳಿಗೆ ಸನ್ಮಾ ನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತಿಹಾಸ ಸಾಂಸ್ಕೃತಿಕ ಧಾರ್ಮಿಕ ಭಜನೆ ಪುರಾಣ ಹಾಗೂ ಪ್ರವಚನ ಮಾಡುತ್ತಿರುವ ಮಠಗಳ ಕಾರ್ಯ ಶ್ಲಾಘನೀಯ ಎಂದರು.

ಇದನ್ನೂ ಓದಿ: Indi News: ಹಸಿರು ಕ್ರಾಂತಿ ಮೂಲಕ ಆಹಾರ ಭದ್ರತೆಗೆ ಬುನಾದಿ ಹಾಕಿದ ಜಗಜೀವನರಾಮ

ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಧಾರ್ಮಿಕತೆ ಬೆಳೆಸಿಕೊಂಡು ಹೋಗಲು ಇಂದಿನ ಯುವ ಪೀಳಿಗೆ ಮುಂದಾಗಬೇಕಿದೆ. ಯಾವದೇ ಕೆಲಸ ವಿರಲಿ ಕೀಳಾಗಿ ನೋಡದೆ ಕಾರ್ಯಗಳನ್ನು ಮಾಡಿದಾಗ ನೆಮ್ಮದಿ ಬದುಕು ಸಾಗಿಸಲು ಸಾಧ್ಯ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಕಾಯಕ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ದುಡಿದು ತಿನ್ನುವವರಿಗೆ ಬೇಧ ಇಲ್ಲ, ಕಾಯಕವೇ ಶ್ರೇಷ್ಠ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಡಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗ ಬೇಕಿದೆ. ಸಮಾನತೆ ಪರಂಪರೆಯಲ್ಲಿ ಮಠಗಳು ಕಾರ್ಯನಿರ್ವಹಿಸುತ್ತಿದ್ದು ಇದನ್ನು ಅರಿತು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ರಾಘವೇಂದ್ರ ಕುಲಕರ್ಣಿ, ರಾಜೇಶ್ವರಿ ಕ್ಷತ್ರಿ, ಅನೀಲ ಪ್ರಸಾದ ಏಳಗಿ ಮಾತನಾಡಿದರು.

ವೇದಿಕೆಯ ಮೇಲೆ ನೀಲಕಂಠಗೌಡ ಪಾಟೀಲ, ಅರವಿಂದ ಕುಲಕರ್ಣಿ ವೇದಿಕೆಯ ಮೇಲೆ ಇದ್ದರು. ಶ್ರೀಮತಿ ರಾಚಮ್ಮ ಶ್ರೀ ಬಸಯ್ಯ ನಿಂಬರಗಿಮಠ ದಂಪತಿಗಳು, ಶ್ರೀಮತಿ ಚೆನ್ನಮ್ಮ ಶ್ರೀ ಚಂದ್ರಕಾಂತ ಉಪ್ಪಿನ ದಂಪತಿಗಳು ಶ್ರೀಮತಿ ಸುಗಲಾಬಾಯಿ ಶ್ರೀ ಭೀಮನಗೌಡ ಪಾಟೀಲ ದಂಪತಿಗಳು ಶ್ರೀಮತಿ ಮಹಾದೇವಿ ಚನ್ನಗೌಡ ಪಾಟೀಲ ದಂಪತಿಗಳು, ಶ್ರೀ ಪಾರ್ವತಿ ಶಂಕರ ಮಜ್ಜಗಿ ದಂಪತಿಗಳು ಸನ್ಮಾನಿಸಲಾಯಿತು.