Indi News: ಗದುಕಿನ ತೋಂಟದ ಶ್ರೀಗಳು ಜಲ ಮತ್ತು ಜೈವಿಕ ವೈವಿಧ್ಯತೆ ಸಂರಕ್ಷಣೆಗೆ ಹೋರಾಡಿದ ಮಹಾಮಾನವಾದಿಗಳು
ಸನ್ಮಾನ ಸ್ವೀಕರಿಸಿ ಇಂಡಿಯ ಯುವಕ ಸಧ್ಯ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪೋಲಿಸ ಅಧಿಕಾರಿ ಯಾಗಿ ಕೆಲಸ ನಿರ್ವಹಿಸುತ್ತಿರುವ ಮಂಜುನಾಥ ಮರಬದ ಮಾತನಾಡಿ ಅಪರಾಧಗಳನ್ನು ಎಲ್ಲರೂ ಕೂಡಿ ತಡೆಯಬೇಕಾಗಿದೆ. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಕೇವಲ ಪೋಲಿಸ ಇಲಾಖೆ ಎಲ್ಲವನ್ನು ಮಾಡಲು ಸಾದ್ಯವಾಗುವದಿಲ್ಲ
ಇಂಡಿಯ ಬಸವರಾಜೇಂದ್ರ ದೇವಸ್ಥಾನದಲ್ಲಿ ಇಂಡಿಯ ಯುವಕ ಪಿಎಸ್ ಐ ಆಗಿ ಆಯ್ಕೆಯಾದ ಮಂಜುನಾಥ ಮರಬದ ಇವರನ್ನು ಸನ್ಮಾನಿಸಲಾಯಿತು -
ಇಂಡಿ: ಗದುಗಿನ ಶ್ರೀ ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಕೇವಲ ಧಾರ್ಮಿಕ ಮುಖಂಡರಾಗಿರದೆ ಪ್ರಗತಿಪರ ಚಿಂತಕರು ಕನ್ನಡ ನಾಡು ನುಡಿ ಜಲ ಮತ್ತು ಜೈವಿಕ ವೈವಿದ್ಯತೆ ಸಂರಕ್ಷಣೆಗೆ ಹೋರಾಡಿದ ಮಹಾ ಮಾನವತಾವಾದಿಗಳು ಎಂದು ಸಾಲೋಟಗಿ ಸಿದ್ದೇಶ್ವರ ಆಶ್ರಮದ ಶ್ರೀ ಸಂಗಮೇಶ್ವರ ಶ್ರೀಗಳು ಹೇಳಿದರು.
ನಗರದ ಬಸವರಾಜೇಂದ್ರ ದೇವಸ್ಥಾನದಲ್ಲಿ ಬಸವರಾಜೇಂದ್ರ ಸತ್ಸಂಗ ಸಮಿತಿ ಮತ್ತು ಶ್ರೀ ಗಜಾನನ ಯುವಕ ಮಂಡಳಿ ಇವರ ವತಿಯಿಂದ ಹುಣ್ಣಿಮೆ ಕಾರ್ಯಕ್ರಮದ ನಿಮಿತ್ಯ ನಡೆದ ಗದಗದ ಡಾ. ಸಿದ್ದಲಿಂಗ ಶ್ರೀಗಳ 8ನೇ ಪೂಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುದರು.
ಗದಗ ಜಿಲ್ಲೆಯ ಕಪ್ಪತಗುಡ್ಡ ಸಂರಕ್ಷಣೆ ಮಾಡಿ ಗುಡ್ಡವನ್ನು ಉಳಿಸಲು ದೊಡ್ಡ ಮಟ್ಟದ ಪರಿಸರ ಚಳುವಳಿಯನ್ನು ಮಾಡಿದರು. ಬಹುರಾಷ್ಟ್ರೀಯ ಕಂಪನಿಯಾದ ಪ್ರೋಸ್ಕೋ ಉಕ್ಕಿನ ಸ್ಥಾವರ ಸ್ಥಾಪನೆಯ ವಿರುದ್ದ ಹೋರಾಟ ನಡೆಸಿದವರು ರೈತರನ್ನು ಒಗ್ಗೂಡಿಸಿ ಯಶಸ್ವಿಯಾದರು ಎಂದರು.
ಇದನ್ನೂ ಓದಿ: Indi News: ಜು.13-14ರವರೆಗೆ ಶ್ರೀಮಾತಾ ದುರ್ಗಾದೇವಿಯ ಜಾತ್ರೆ ಅದ್ದೂರಿ ಆಚರಣೆ
ಸನ್ಮಾನ ಸ್ವೀಕರಿಸಿ ಇಂಡಿಯ ಯುವಕ ಸಧ್ಯ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪೋಲಿಸ ಅಧಿಕಾರಿ ಯಾಗಿ ಕೆಲಸ ನಿರ್ವಹಿಸುತ್ತಿರುವ ಮಂಜುನಾಥ ಮರಬದ ಮಾತನಾಡಿ ಅಪರಾಧಗಳನ್ನು ಎಲ್ಲರೂ ಕೂಡಿ ತಡೆಯಬೇಕಾಗಿದೆ. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಕೇವಲ ಪೋಲಿಸ ಇಲಾಖೆ ಎಲ್ಲವನ್ನು ಮಾಡಲು ಸಾದ್ಯವಾಗುವದಿಲ್ಲ, ಅದಲ್ಲದೆ ಇಂದಿನ ಯುವಕರು ಸಂಸ್ಕಾರ ಬೆಳಿಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕಾಗಿದೆ ಎಂದರು.
ಸತ್ಸಂಗ ಸಮಿತಿಯ ಕಾರ್ಯದರ್ಶಿ ಆರ್.ವಿ.ಪಾಟೀಲ, ಅರವಿಂದ ಗಾಳಿಮಠ, ಸದಾನಂದ ಈರನಕೇರಿ, ಎಚ್.ಎಸ್.ಎಳೆಗಾವಿ, ಬಿ.ಎಸ್.ಪಾಟೀಲ ಶಿಕ್ಷಕರು ಮಾತನಾಡಿದರು.
ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ, ನಿವೃತ್ತ ಪ್ರಾಧ್ಯಾಪಕ ನೀಲಪ್ಪ ಹಂಜಗಿ, ನಿವೃತ್ತ ಪ್ರಾಚಾರ್ಯ ಆಯ್.ಬಿ ಸುರಪುರ,
ಎಂ.ಜೆ ಪಾಟೀಲ, ಎಸ್.ವಿ.ಹೂಗಾರ, ಕೆ.ಜಿ.ನಾಟಿಕಾರ, ಸಿ.ಎಂ.ಉಪ್ಪಿನ ಬಿ.ಆರ್ ಬಿರಾದಾರ ಶ್ರೀಮತಿ ಎನ್.ಟಿ. ಸಂಗಾ, ಜಯಶ್ರೀ ಪತ್ತಾರ, ಸುಶೀಲಾ ಪಾಟೀಲ, ಮಹಾನಂದಾ ಮೈದರಗಿ, ವಿದ್ಯಾ ಪಾಟೀಲ ಮತ್ತಿತರಿದ್ದರು.
ಇದೇ ವೇಳೆ ಪೋಲಿಸ ಇಲಾಖೆಯಲ್ಲಿ ಆಯ್ಕೆಯಾದ ಪಿಎಸ್ ಐ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ ಮರಬದ ಇವರನ್ನು ಸನ್ಮಾನಿಸಲಾಯಿತು.