MLA Yashwant R Patil: ವಿದ್ಯಾ ಸರಸ್ವತಿ, ಧ್ವನಿ ಇಲ್ಲದವರಿಗೆ ಧ್ವನಿಯಾದ ಡಾ.ಬಿ.ಆರ್ ಅಂಬೇಡ್ಕರವರ ಮೂರ್ತಿ ಗುದ್ದಲಿ ಪೂಜೆ ಮಾಡಿರುವುದು ಸಂತಸ ತಂದಿದೆ
ಶಿಕ್ಷಣ ವಿನಯ, ವಿನಮ್ರತೆ, ಮಾನವೀಯ ಮೌಲ್ಯ ಗಳನ್ನು ಕಲಿಸುತ್ತದೆ. ದಶವಂತ ಸಮುದಾಯ ಅತ್ಯೆಂತ ಕಡಿಮೆಯುಳ್ಳ ಜನಾಂಗ ಆದರೆ ಇವರ ಬದುಕು, ಆದರ್ಶ ಅತ್ಯಂತ ಎತ್ತರಕ್ಕೆ ಬೆಳೆಸಿಕೊಂಡಿ ದ್ದಾರೆ. ಮಾನವ ಸಂಪನ್ಮೂಲ ಇಲಾಖೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಯೋಜನೆಗಳು ಮಾಡಿವೆ.
-
ಇಂಡಿ: ಶ್ರೀ ಭಾಗ್ಯವಂತಿ ವಿಧ್ಯಾಸಂಸ್ಥೆಯಲ್ಲಿ ಸರಸ್ವತಿ ಮಾತೆ ಮೂರ್ತಿ ಅನಾವರಣ ಹಾಗೂ ಸಂವಿಧಾನ ಶಿಲ್ಪಿ ,ಧ್ವನಿ ಇಲ್ಲದವರಿಗೆ, ದಮನಿತರಿಗೆ ದಾರಿ ತೋರಿದ ಇಡೀ ವಿಶ್ವದ ಜ್ಞಾನ ದಿವ್ಯ ಜ್ಯೋತಿ ಡಾ.ಬಿ.ಆರ್ ಅಂಬೇಡ್ಕರವರ ಮೂರ್ತಿ ಗುದ್ದಲಿ ಪೂಜೆ ಮಾಡಿರುವುದು ನನಗೆ ಅತೀ ಸಂತಸ ತಂದಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ(MLA Yashwant Rayagouda Patil) ಹೇಳಿದರು.
ತಾಲೂಕಿನ ಚವುಡಿಹಾಳ ಗ್ರಾಮದ ಶ್ರೀಭಾಗ್ಯವಂತಿ ಪ್ರತಿಷ್ಠಿತ ಕನ್ನಡ, ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ವಾಣಿಜ್ಯ ವಸತಿ ಪದವಿ ಪೂರ್ವ ಕಾಲೇಜ ಆವರಣದಲ್ಲಿ ಆಯೋ ಜಿಸಿದ ನೂತನ ಸರಸ್ವತಿ ಮೂರ್ತಿಅನಾವರಣೆ ಹಾಗೂ ಡಾ.ಬಿ.ಆರ್ ಅಂಬೇಡ್ಕರವರ ಮೂರ್ತಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಅವರು ಶಿಕ್ಷಣ ವಿನಯ, ವಿನಮ್ರತೆ, ಮಾನವೀಯ ಮೌಲ್ಯ ಗಳನ್ನು ಕಲಿಸುತ್ತದೆ. ದಶವಂತ ಸಮುದಾಯ ಅತ್ಯೆಂತ ಕಡಿಮೆಯುಳ್ಳ ಜನಾಂಗ ಆದರೆ ಇವರ ಬದುಕು, ಆದರ್ಶ ಅತ್ಯಂತ ಎತ್ತರಕ್ಕೆ ಬೆಳೆಸಿಕೊಂಡಿದ್ದಾರೆ. ಮಾನವ ಸಂಪನ್ಮೂಲ ಇಲಾಖೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಯೋಜನೆಗಳು ಮಾಡಿವೆ. ವಿಜಯಪೂರ ಜಿಲ್ಲೆ ಶೈಕ್ಷಣಿಕ ಪ್ರಗತಿಗೆ ಶ್ರೀಸಂಗನಬಸವಶ್ರೀಗಳು ಸಾಕಷ್ಟು ಶ್ರಮಿಸಿದ್ದಾರೆ. ಇಂದು ನಾಡಿನಾದ್ಯೆಂತ ಮಠ ಮಾನ್ಯಗಳು, ಸಂಘ, ಸಂಸ್ಥೆಗಳು ಶಿಕ್ಷಣ ಪ್ರಗತಿಗೆ ಸಾಕಷ್ಟು ಶ್ರಮಿಸುತ್ತಿವೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಲೋಣಿ, ಉದ್ದಿಮೆದಾರ ಅಣ್ಣುಗೌಡ ಬಿರಾದಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ: Indi News: ಹಿಂದುತ್ವ ವಿರೋಧಿ ಕಾಂಗ್ರೆಸ್ ಸಹಜ ಗುಣ: ಹಣಮಂತರಾಯಗೌಡ ಪಾಟೀಲ
ಶ್ರೀ ಬಂಥನಾಳದ ಶ್ರೀವೃಷಬಲಿಂಗ ಮಹಾಶಿವಯೋಗಿಗಳು ದಿವ್ಯಸಾನಿಧ್ಯ ವಹಿಸಿದರು. ವೇದ ಮೂರ್ತಿ ಕಲ್ಲಯ್ಯಾ ಹಿರೇಮಠ, ದುಂಡಯ್ಯಾ ಹಿರೇಮಠ ಸಾನಿಧ್ಯ ವಹಿಸಿದರು. ಶ್ರೀ ಭಾಗ್ಯವಂತಿ ವಿಧ್ಯಾಸಂಸ್ಥೆಯ ಅಧ್ಯಕ್ಷ ಶಾಂತಪ್ಪ ದಶವಂತ , ಸಮಾಜ ಕಲ್ಯಾಣ ಇಲಾಖೆಯ ಉಮೇಶ ಲಮಾಣಿ, ಬಿಸಿಎಂ ಜಿಲ್ಲಾಧಿಕಾರಿ ಅಧಿಕಾರಿ ಪುಂಡಲೀಕ ಮಾನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎ ಮುಜಾ ವರ, ಶಿವಯೋಗಿ ಚನಗೊಂಡ, ರಮೇಶ ಕಲ್ಯಾಣಿ, ಗಣಪತಿ ಬಾಣಿಕೋಲ, ಶಬೀರ್ ಖಾಜಿ, ಶಾಕೀರ ಖಾಜಿ, ಜಟ್ಟೆಪ್ಪ ರವಳಿ, ರಮೇಶಗೌಡ ಬಿರಾದಾರ, ಆನಂದಪ್ಪ ಭತಗುಣಕಿ, ಬಿ.ಬಿ ಪಾಟೀಲ, ರಾಮಣ್ಣ ದಶವಂತ, ಕಾಮಣ್ಣಾ ದಶವಂತ, ಶಿವಾನಂದ ದಶವಂತ, ನಾಗರಾಜ ದಶವಂತ, ಅಶೋಕ ದಶವಂತ, ಮುಖ್ಯೋಪಾಧ್ಯಾಯ ಚಂದ್ರಶೇಖರ. ಶಾಂ ದಶವಂತ, ಸಂಸ್ಥೆಯ ಕಾರ್ಯ ದರ್ಶಿ ಅಪ್ಪು ದಶವಂತ, ಬಸವರಾಜ ರೋಡಗಿ, ಪ್ರಕಾಶ ಹಲಸಂಗಿ ವೇದಿಕೆಯಲ್ಲಿದ್ದರು.
*
40 ವರ್ಷಗಳ ಹಿಂದೆ ವಿಜಯಪೂರ ಜಿಲ್ಲೆ ಈ ಭಾಗ ಕಿತ್ತು ತಿನ್ನುವ ಬಡತನ ,ನೀರಾವರಿ ವಂಚಿತ ಪ್ರದೇಶ ಕೃಷಿ ,ಕೈಗಾರಿಕೆಗಳಿಲ್ಲದೆ ಬಿಕೋ ಎನ್ನುತ್ತಿದ್ದ ಪ್ರದೇಶ ಹೊಟ್ಟೆ ತುಂಬಿಸಿಕೊಳ್ಳಲು ವಲಸೆ ಹೋಗುತ್ತಿದ್ದರು. ಆದರೆ ಇಂದು ವಿಜಯಪೂರ ಜಿಲ್ಲೆಯ ಶಾಸಕರು ದೂರದೃಷ್ಠಿ ಯುಳ್ಳವರಾಗಿರುವುದರಿಂದ ನೀರಾವರಿ, ಕೃಷಿ, ಕೈಗಾರಿಕೆ ಅಭಿವೃದ್ದಿಪಡಿಸಿ ಈ ಭಾಗ ಆರ್ಥಿಕತೆ ಮತ್ತು ಹೃದಯ ಶ್ರೀಮಂತರನ್ನಾಗಿಸಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ ನ್ಯಾಯ, ನೀತಿವಂತ ನಿಮ್ಮ ಕ್ಷೇತ್ರಕ್ಕೆ ಒಳ್ಳೆಯವರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ. ದಶವಂತ ಕುಟುಂಬ ಅತ್ಯೆಂತ ಚಿಕ್ಕ ಸಮುದಾಯ ಜನಪ್ರತಿನಿಧಿಗಳಾದವರು ಇಂತಹ ವರ್ಗಕ್ಕೆ ಸಹಾಯ ಮಾಡಬೇಕು. ಇವನ್ಯಾರವ ಇವನ್ಯಾರವ ಎನ್ನಿಸದಿರಯ್ಯಾ ಇವ ನಮ್ಮವ ಇವ ನಮ್ಮವ ಎಂದೇ ನಿಸಯ್ಯಾ ಎಂದು ೧೨ನೇ ಶತಮಾನದ ಬಸವಣ್ಣನವರು ನುಡಿದಂತೆ ನನ್ನಲ್ಲಿಗೆ ಬಂದವರಿಗೆ ಯಾರು ಎಂದು ಪ್ರಶ್ನೆ ಮಾಡದೆ ಕೆಲಸ ಕಾರ್ಯ ಮಾಡಿದ್ದೇನೆ. ಆದರೆ ನನಗೆ ಆಯ್ಕೆ ಮಾಡಲ್ಲಿಲ್ಲ, ಚುನಾವಣೆಯಲ್ಲಿ ಹಣ ಹೆಚ್ಚು ಹಂಚಿದವರಿಗೆ ಆಯ್ಕೆ ಮಾಡಿದ್ದಾರೆ, ನನ್ನಲ್ಲಿ ಹಣ ಇಲ್ಲ ಇಂದಿನ ರಾಜಕಾರಣ ಕಲುಷೀತವಾಗಿದೆ ಅಭಿವೃದ್ದಿ ಬೇಕಾಗಿಲ್ಲ ಹಣ ಮುಖ್ಯವಾಗಿದೆ. ದಶವಂತ ಕುಟುಂಬ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಸಣ್ಣದಲ್ಲ ಅನೇಕ ಕಷ್ಟಗಳು ಬರುತ್ತವೆ. ಅಪ್ಪು ದಶವಂತ ನನಗೆ ಕೇವಲ ೫ಲಕ್ಷ ಅನುಧಾನ ಕೇಳಿದಾಗ ೫೦ ಲಕ್ಷ ಸರಕಾರದಿಂದ ಸಹಾಯ ಮಾಡಿರುವೆ .ಎರಡನರ ಬಾರಿ ಬಂದಾಗ ೫೦ ಲಕ್ಷ ಒಟ್ಟು ೧ ಕೋಟಿ ಸಹಾಯ ಮಾಡಲಾಗಿದೆ, ಇಂದು ಕಾಂಗ್ರೆಸ್ ಸರಕಾರದ ಸಮಾಜ ಕಲ್ಯಾಣ ಸಚಿವರು ಎಚ್.ಸಿ ಮಹಾದೇವಪ್ಪನವರು ನನಗೆ ಅಪ್ತರು ಇವರಿಂದ ಈ ಸಂಸ್ಥೆಗೆ ಮತ್ತಷ್ಟು ಸಹಾಯ ಮಾಡಿಸುವ ಭರಸವಸೆ ನೀಡಿದರು.
ಮಾಜಿ ಸಚಿವ ಎಚ್.ಆಂಜನೇಯ