ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chopper Crash: ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ಅವಘಡ; ಹೆಲಿಕಾಪ್ಟರ್‌ ಪತನ- 7 ಜನರ ದುರ್ಮರಣ

Kedarnath Chopper Crashes: ಅಹ್ಮದಾಬಾದ್‌ನಲ್ಲಿ ವಿಮಾನ ಪತನಗೊಂಡು 246 ಜನ ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಕೇದಾರನಾಥದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕೇದಾರನಾಥ ಧಾಮಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್‌ ಪತನಗೊಂಡು ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್‌ ಪತನ- 7 ಜನರ ದುರ್ಮರಣ

-

Rakshita Karkera
Rakshita Karkera Jun 15, 2025 8:38 AM

ಉತ್ತರಾಖಂಡ: ಕೇದಾರನಾಥ ಧಾಮಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಕಾಡಿನಲ್ಲಿ ಪತನಗೊಂಡು(Kedarnath Chopper Crashes) ಐದು ಜನರು ಸಾವನ್ನಪ್ಪಿದ್ದಾರೆ. ಆರ್ಯನ್ ಏವಿಯೇಷನ್ ​​ಹೆಲಿಕಾಪ್ಟರ್ ಗುಪ್ತಕಾಶಿಯಿಂದ ಕೇದಾರನಾಥ ಧಾಮಕ್ಕೆ ಯಾತ್ರಿಕ ಹೊತ್ತೊಯ್ಯುತ್ತಿತ್ತು. 10 ನಿಮಿಷಗಳ ಪ್ರಯಾಣದ ಸಮಯದಲ್ಲಿ, ಹೆಲಿಕಾಪ್ಟರ್ ಗೌರಿಕುಂಡ್ ಮತ್ತು ಸೋನ್‌ಪ್ರಯಾಗ್ ನಡುವೆ ಅಪಘಾತಕ್ಕೀಡಾಯಿತು. ಇನ್ನು ಈ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಏಳು ಯಾತ್ರಿಕರು ದಾರುಣ ಸಾವನ್ನಪ್ಪಿದ್ದಾರೆ.



ಅಪಘಾತದಲ್ಲಿ ಮೃತಪಟ್ಟವರಲ್ಲಿ ಪೈಲಟ್ ಕೂಡ ಸೇರಿದ್ದಾರೆ. ತೆರೆದ ಮೈದಾನದಲ್ಲಿ ಹೆಲಿಕಾಪ್ಟರ್ ನ ಅವಶೇಷಗಳು ಬೆಂಕಿಗೆ ಆಹುತಿಯಾಗಿರುವುದನ್ನು ದೃಶ್ಯಗಳು ತೋರಿಸಿವೆ. ದೇವಾಲಯಕ್ಕೆ ಹೋಗುವಾಗ ಗೌರಿಕುಂಡ್ ಮತ್ತು ತ್ರಿಯುಗಿನಾರಾಯಣ ನಡುವೆ ಅಪಘಾತ ಸಂಭವಿಸಿದೆ.