ಥಿಯೇಟರ್, ಯೂಟ್ಯೂಬ್ ಆಯ್ತು, ಈಗ ಒಟಿಟಿಗೆ ಬರ್ತಿದೆ 'ಸಿತಾರೆ ಜಮೀನ್ ಪರ್'; ಉಲ್ಟಾ ಹೊಡೆದ ಆಮಿರ್ ಖಾನ್
ಆಮಿರ್ ಖಾನ್ ನಟನೆಯ ʻಸಿತಾರೆ ಜಮೀನ್ ಪರ್ʼ ಸಿನಿಮಾವು ಕೊನೆಗೂ ಒಟಿಟಿಯಲ್ಲಿ ಬಿಡುಗಡೆ ಆಗುತ್ತದೆ. ಈ ಮೊದಲು ಒಟಿಟಿಗೆ ಈ ಸಿನಿಮಾವನ್ನು ನೀಡುವುದಿಲ್ಲ ಎಂದು ಚಿತ್ರಮಂದಿರದಲ್ಲಿ 225 ಕೋಟಿ ರೂ. ಬಾಚಿದ್ದ ಆಮಿರ್, ನಂತರ ಯೂಟ್ಯೂಬ್‌ನಲ್ಲಿ ಹಣ ಪಾವತಿಸಿ ನೋಡುವ ಅವಕಾಶ ನೀಡಿದ್ದರು. ಇದೀಗ ಎಂಟು ತಿಂಗಳ ಬಳಿಕ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಮತ್ತೊಮ್ಮೆ ಭರ್ಜರಿ ಲಾಭ ಮಾಡಿಕೊಂಡಿದ್ದು, ಸಿನಿಪ್ರಿಯರು ಇವರನ್ನು 'ಮಾಸ್ಟರ್ ಮೈಂಡ್' ಎಂದು ಕರೆಯುತ್ತಿದ್ದಾರೆ.
-
ಕಳೆದ ವರ್ಷ ಜೂನ್‌ನಲ್ಲಿ ಆಮಿರ್ ಖಾನ್ ಅಭಿನಯದ ʻಸಿತಾರೆ ಜಮೀನ್ ಪರ್ʼ ಸಿನಿಮಾವು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಆಗಲೇ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಪಡೆಯಲು ಒಟಿಟಿ ಸಂಸ್ಥೆಗಳು ಮುಗಿಬಿದ್ದಿದ್ದವು. ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋದಂತಹ ಸಂಸ್ಥೆಗಳು 100 ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತವನ್ನು ನೀಡಲು ಸಜ್ಜಾಗಿದ್ದವು. ಆದರೆ ಆಮಿರ್ ಖಾನ್ ಅವರು ಒಪ್ಪಿರಲಿಲ್ಲ. ಆದರೆ ಈಗ ಆಮಿರ್ ಖಾನ್ ತಮ್ಮ ಜಾಣತನವನ್ನು ಪ್ರದರ್ಶಿಸಿದ್ದಾರೆ. ಜೊತೆಗೆ ತಮ್ಮ ಮಾತಿಗೆ ಉಲ್ಟಾ ಹೊಡೆದಿದ್ದಾರೆ.
ಸೋನಿ ಲೈವ್‌ಗೆ ಡಿಜಿಟಲ್ ಹಕ್ಕುಗಳು ಮಾರಾಟ
"ಚಿತ್ರಮಂದಿರಗಳು ನಶಿಸುತ್ತಿರುವುದರಿಂದ, ಯಾವುದೇ ಕಾರಣಕ್ಕೂ ನಮ್ಮ ಸಿನಿಮಾವನ್ನು ಒಟಿಟಿಗೆ ಮಾರಾಟ ಮಾಡೋದಿಲ್ಲ. ಚಿತ್ರಮಂದಿರದ ಸಂಸ್ಕೃತಿಯನ್ನು ಉಳಿಸಬೇಕಿದೆ" ಎಂದು ಕಡ್ಡಿತುಂಡು ಮಾಡಿದಂತೆ ಪ್ರತಿಕ್ರಿಯಿಸಿದ್ದರು ಆಮಿರ್ ಖಾನ್. ಆದರೆ ʻಸಿತಾರೆ ಜಮೀನ್ ಪರ್ʼ ಸಿನಿಮಾವು ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಸುಮಾರು 8 ತಿಂಗಳ ನಂತರ, ಈಗ ಒಟಿಟಿಯಲ್ಲಿ ಬಿಡುಗಡೆ ಮಾಡಲು ಆಮಿರ್ ಖಾನ್ ಪ್ಲ್ಯಾನ್ ಮಾಡಿದ್ದಾರೆ. ಈ ಸಿನಿಮಾವನ್ನು ಅವರು ಸೋನಿ ಲೈವ್ ಸಂಸ್ಥೆಗೆ ಮಾರಾಟ ಮಾಡಿದ್ದಾರೆ.
Aamir Khan: ತೆರೆ ಮೇಲೆ ಬರಲಿದೆ ಮೇಘಾಲಯ ಮರ್ಡರ್ ಕೇಸ್; ಸೋನಂ- ರಾಜಾ ಸ್ಟೋರಿ ಮಾಡ್ತಾರಾ ಆಮಿರ್ ಖಾನ್?
ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 6 ತಿಂಗಳಿಗಿಂತ ಮೊದಲು ಒಟಿಟಿಯಲ್ಲಿ ಬಿಡುಗಡೆ ಮಾಡಬಾರದು ಎಂದು ಅಂದು ಆಮಿರ್ ಖಾನ್ ಹೇಳಿದ್ದರು. ಆದರೆ ಅವರೇ ಜೂನ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ತಮ್ಮ ಸಿನಿಮಾವನ್ನು ಆಗಸ್ಟ್ 1ರಂದು ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದ್ದರು.
Amir Khan: ಕುಟುಂಬದ ಜೊತೆ ತಾಯಂದಿರ ದಿನ ಆಚರಿಸಿದ ಆಮಿರ್ ಖಾನ್ ; ಯಾರೆಲ್ಲ ಇದಾರೆ ನೋಡಿ
ಮಾಸ್ಟರ್ ಮೈಂಡ್ ಆಮಿರ್ ಖಾನ್‌ಗೆ ಸಖತ್ ಲಾಭ
ʻಸಿತಾರೆ ಜಮೀನ್ ಪರ್ʼ ಸಿನಿಮಾವನ್ನು ನಾವು ಓಟಿಟಿಯಲ್ಲಿ ರಿಲೀಸ್ ಮಾಡೋದಿಲ್ಲ ಎಂದು ಮೊದಲೇ ಹೇಳಿದ್ದರಿಂದ ಈ ಸಿನಿಮಾವನ್ನು ಬಹುತೇಕರು ಚಿತ್ರಮಂದಿರದಲ್ಲೇ ನೋಡಿದರು. ಆ ಪರಿಣಾಮ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 225+ ಕೋಟಿ ರೂ. ಕಮಾಯಿ ಆಯಿತು. ನಂತರ ಕೆಲ ತಿಂಗಳ ಬಳಿಕ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಿನಿಮಾವನ್ನು ಆಮಿರ್ ಖಾನ್ ಅಪ್ಲೋಡ್ ಮಾಡಿದ್ದರು. ಆಗ ಸಿನಿಮಾ ನೋಡಲು 100 ರೂ. ಕೊಡಬೇಕು ಎಂದು ತಿಳಿಸಿದರು. ಅಲ್ಲಿಯೂ ಒಂದಷ್ಟು ಲಾಭವಾಯಿತು. ಇದೀಗ ಅಂತಿಮವಾಗಿ 8 ತಿಂಗಳ ನಂತರ ಸೋನಿ ಲೈವ್‌ಗೆ ತಮ್ಮ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಆಮಿರ್ ಖಾನ್ ಅವರು ಮಾರಾಟ ಮಾಡಿದ್ದಾರೆ. ಮತ್ತೊಮ್ಮೆ ಲಾಭ ಮಾಡಿಕೊಂಡಿದ್ದಾರೆ. ʻಸಿತಾರೆ ಜಮೀನ್ ಪರ್ʼ ಸಿನಿಮಾದ ಒಟಿಟಿ ಸ್ಟ್ರೀಮಿಂಗ್ ಯಾವಾಗಿನಿಂದ ಶುರುವಾಗಲಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಅತೀ ಶೀಘ್ರದಲ್ಲೇ ಎಂಬ ಘೋಷಣೆ ಹೊರಬಿದ್ದಿದೆ.
ʻಸಿತಾರೆ ಜಮೀನ್ ಪರ್ʼ ಸಿನಿಮಾದ ಬಗ್ಗೆ..
ಆರ್ ಎಸ್ ಪ್ರಸನ್ನ ನಿರ್ದೇಶನದ ʻಸಿತಾರೆ ಜಮೀನ್ ಪರ್ʼ ಸಿನಿಮಾದಲ್ಲಿ ಆಮಿರ್ ಖಾನ್ ಜೊತೆಗೆ ಜೆನಿಲಿಯಾ ದೇಶಮುಖ್ ಕಾಣಿಸಿಕೊಂಡಿದ್ದಾರೆ. ಆಶೀಶ್ ಪೆಂಡ್ಸೆ, ಆರೂಷ್ ದತ್ತಾ, ಆಯುಷ್ ಭನ್ಸಾಲಿ, ಋಷಿ ಶಾಹ್ನಿ, ಗೋಪಿಕೃಷ್ಣನ್ ಕೆ ವರ್ಮಾ, ವೃಷಭ ಜೈನ್, ವೇದಾಂತ ಶರ್ಮಾ, ಸಿಮ್ರನ್ ಮಂಗೇಶ್ಕರ್, ಸಂವಿತ್ ದೇಸಾಯಿ ಮತ್ತು ನಮನ್ ಮಿಶ್ರಾ ಮುಂತಾದ ಕಲಾವಿದರಿದ್ದಾರೆ. ಈ ಸಿನಿಮಾವನ್ನು ಆಮಿರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಮಿರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ನಿರ್ಮಿಸಿದ್ದರು.