FIFA World Cup 2026: ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದ ಬ್ರೆಜಿಲ್, ಆಸ್ಟ್ರೇಲಿಯಾ
FIFA World Cup: 2026ರ ಫಿಫಾ ಫುಟ್‌ಬಾಲ್ ವಿಶ್ವಕಪ್‌ಗೆ ಅಮೆರಿಕ, ಮೆಕ್ಸಿಕೊ, ಕೆನೆಡಾ ಆತಿಥ್ಯದಲ್ಲಿ ನಡೆಯಲಿದೆ. ಫುಟ್‌ಬಾಲ್ ವಿಶ್ವಕಪ್ ಇತಿಹಾಸದಲ್ಲಿ ಮೂರು ರಾಷ್ಟ್ರಗಳು ಆತಿಥ್ಯ ವಹಿಸುತ್ತಿರುವುದು ಇದೇ ಮೊದಲ ಬಾರಿ. ಒಟ್ಟು 16 ನಗರಗಳಲ್ಲಿ ಪಂದ್ಯಾವಳಿ ಆಯೋಜನೆಯಾಗಲಿವೆ.


ಸಾವೊ ಪಾಲೊ(ಬ್ರೆಜಿಲ್): ಮಂಗಳವಾರ ರಾತ್ರಿ ನಡೆದಿದ್ದ ಅರ್ಹತಾ ಪಂದ್ಯದಲ್ಲಿ ಪೆರುಗ್ವೆ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿದ ಬ್ರೆಜಿಲ್(Brazil) ತಂಡ ಮುಂದಿನ ವರ್ಷ ನಡೆಯಲಿರುವ ಫಿಫಾ ಫುಟ್‌ಬಾಲ್ ವಿಶ್ವಕಪ್ 2026 ಟೂರ್ನಿಗೆ ಅರ್ಹತೆ(FIFA World Cup 2026) ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. 2026 ರ ಫಿಫಾ ವಿಶ್ವಕಪ್ ಆವೃತ್ತಿಯಲ್ಲಿ 48 ತಂಡಗಳು ಭಾಗವಹಿಸಲಿದ್ದು, ಹಿಂದಿನ 32 ತಂಡಗಳ ಬದಲಿಗೆ ಈಗ ವಿಶ್ವದಾದ್ಯಂತ ಅರ್ಹತಾ ಅಭಿಯಾನಗಳು ನಡೆಯುತ್ತಿದೆ. ಇದುವರೆಗೆ 10 ತಂಡಗಳು ಅರ್ಹತೆ ಪಡೆದಿದೆ.
ಜಪಾನ್, ಇರಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಜೋರ್ಡಾನ್, ಉಜ್ಬೇಕಿಸ್ತಾನ್, ನ್ಯೂಜಿಲೆಂಡ್, ಅರ್ಜೆಂಟೀನಾ, ಬ್ರೆಜಿಲ್, ಈಕ್ವೆಡಾರ್ ಫಿಫಾ ಫುಟ್‌ಬಾಲ್ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡ ತಂಡಗಳು. ವಿಶ್ವ ಚಾಂಪಿಯನ್ ಬ್ರೆಜಿಲ್, ವಿಶ್ವಕಪ್‌ನ ಪ್ರತಿ ಆವೃತ್ತಿಯಲ್ಲಿ ಪಾಲ್ಗೊಂಡಿರುವ ಏಕೈಕ ರಾಷ್ಟ್ರವೆನಿಸಿದೆ. ಜೆಡ್ಡಾದಲ್ಲಿ ನಡೆದ ಮತ್ತೊಂದು ಅರ್ಹತಾ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 2-1 ಗೋಲುಗಳ ಅಂತರದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಅರ್ಹತೆ ಪಡೆದುಕೊಂಡಿತು.
ಇದನ್ನೂ ಓದಿ Neymar: ಫುಟ್‌ಬಾಲ್ ತಾರೆ ನೇಮರ್‌ಗೆ ಕೋವಿಡ್ ಸೋಂಕು
2026ರ ಫಿಫಾ ಫುಟ್‌ಬಾಲ್ ವಿಶ್ವಕಪ್ ಅಮೆರಿಕ, ಮೆಕ್ಸಿಕೊ, ಕೆನೆಡಾ ಆತಿಥ್ಯದಲ್ಲಿ ನಡೆಯಲಿದೆ. ಫುಟ್‌ಬಾಲ್ ವಿಶ್ವಕಪ್ ಇತಿಹಾಸದಲ್ಲಿ ಮೂರು ರಾಷ್ಟ್ರಗಳು ಆತಿಥ್ಯ ವಹಿಸುತ್ತಿರುವುದು ಇದೇ ಮೊದಲ ಬಾರಿ. ಒಟ್ಟು 16 ನಗರಗಳಲ್ಲಿ ಪಂದ್ಯಾವಳಿ ಆಯೋಜನೆಯಾಗಲಿವೆ.
ಇತ್ತೀಚೆಗೆ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ತಾರತಮ್ಯ ನಡೆಸಿದ ಕಾರಣಕ್ಕೆ 6 ದೇಶಗಳಿಗೆ ಫಿಫಾ ದಂಡ ಹಾಕಿತ್ತು. ಅಲ್ಬೇನಿಯಾ, ಈಕ್ವೆಡಾರ್, ಪರಗ್ವೆ, ರೊಮೇನಿಯಾ, ಬೋಸ್ನಿಯಾ-ಹೆರ್ಜೆಗೋವಿನಾ, ಇಂಡೋನೇಷ್ಯಾ ದಂಡಕ್ಕೊಳಗಾದ ದೇಶಗಳು.