ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Freestyle Chess Grand Slam: 6,7ನೇ ಸ್ಥಾನಕ್ಕೆ ತೃಪ್ತಿಪಟ್ಟ ಎರಿಗೈಸಿ, ಪ್ರಜ್ಞಾನಂದ

ಅರ್ಜುನ್‌ ಅವರು ಅಮೆರಿಕದ ಫ್ಯಾಬಿಯಾನೊ ಕರುವಾನ ವಿರುದ್ಧ 0-2 ಅಂತರದಿಂದ ಸೋಲು ಕಾಣುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಏಳನೇ ಸ್ಥಾನಕ್ಕಾಗಿ ನಡೆದ ಸೆಣಸಾಟಲ್ಲಿ ಪ್ರಜ್ಞಾನಂದ ಅವರು ಅಮೆರಿಕದ ವೆಸ್ಲಿ ಸೊ ಅವರನ್ನು 1.5-0.5 ಅಂಕಗಳಿಂ ಸೋಲಿಸಿ ಏಳನೇ ಸ್ಥಾನ ಪಡೆದರು.

ಫ್ರೀಸ್ಟೈಲ್‌ ಚೆಸ್‌ ಗ್ರ್ಯಾನ್‌ಸ್ಲಾಮ್‌; ಲೆವೋನ್ ಅರೋನಿಯನ್ ಚಾಂಪಿಯನ್‌

Profile Abhilash BC Jul 21, 2025 3:19 PM

ಲಾಸ್‌ ವೇಗಸ್‌ (ಅಮೆರಿಕ): ಇಲ್ಲಿ ನಡೆದ ಫ್ರೀಸ್ಟೈಲ್‌ ಚೆಸ್‌ ಗ್ರ್ಯಾನ್‌ಸ್ಲಾಮ್‌(Freestyle Chess Grand Slam) ಟೂರ್ನಿಯ ಅಂತಿಮ ದಿನಾಟಲ್ಲಿ ಭಾರತದ ಅಗ್ರ ಚೆಸ್ ಪ್ರತಿಭೆಗಳಾದ ಅರ್ಜುನ್ ಎರಿಗೈಸಿ(Arjun Erigaisi) ಮತ್ತು ಆರ್. ಪ್ರಜ್ಞಾನಂದ(R Praggnanandhaa) ಕ್ರಮವಾಗಿ ಆರನೇ ಮತ್ತು ಏಳನೇ ಸ್ಥಾನ ಪಡೆದರು. ಲೆವೋನ್ ಅರೋನಿಯನ್(Levon Arnoian) ಚಾಂಪಿಯನ್‌ ಪಟ್ಟ ಅಲಂಕರಿಸಿ ₹1.72 ಕೋಟಿ ಬಹುಮಾನ ಪಡೆದರು. ಅಗ್ರಸ್ಥಾನಕ್ಕಾಗಿ ನಡೆದ ಕಾಳಗದಲ್ಲಿ ಲೆವೋನ್ ಅವರು ಹ್ಯಾನ್ಸ್‌ ನೀಮನ್‌ರನ್ನು 1.5-0.5 ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದರು.

ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಅಮೆರಿಕದ ಹಿಕಾರು ನಕಾಮುರ ಅವರನ್ನು ನಾರ್ವೆಯ ಕಾರ್ಲ್‌ಸನ್‌ 1.5-0.5 ಅಂತರದಿಂದ ಮಣಿಸಿದರು. ಪ್ರಜ್ಞಾನಂದ ಅವರು ಈ ಮೊದಲು ಗುಂಪು ಹಂತದಲ್ಲಿ ಕಾರ್ಲ್‌ಸನ್‌ ಮೇಲೆ ಜಯಗಳಿಸಿದ್ದರಿಂದ ಅವರಿಗೆ ಫೈನಲ್ ಹಾದಿ ತಪ್ಪಿತ್ತು. ಕ್ಲಾಸಿಫಿಕೇಷನ್ ಪಂದ್ಯದಲ್ಲಿ ಮೊದಲ ಆಟದಲ್ಲಿ ಪ್ರಜ್ಞಾನಂದ ಜಯಗಳಿಸಿದರು. ಆದರೆ ಎರಡನೇ ಪಂದ್ಯದಲ್ಲಿ ಕಾರ್ಲ್‌ಸನ್ ಗೆದ್ದು ಸ್ಕೋರ್ ಸಮನಾಯಿತು. ಟೈಬ್ರೇಕ್‌ ಬ್ಲಿಟ್ಝ್‌ ಪಂದ್ಯಗಳಲ್ಲಿ ನಾರ್ವೆಯ ಆಟಗಾರ ಜಯಗಳಿಸಿದ್ದರು. ಆದರೆ ಮುಂದಿನ ಪಂದ್ಯದಲ್ಲಿ ಕಾರ್ಲ್‌ಸನ್‌ ಅವರು ಅರ್ಜುನ್‌ ಇರಿಗೇಶಿ ಅವರನ್ನು ಸೋಲಿಸಿ ಮೂರನೇ ಸ್ಥಾನಕ್ಕಾಗಿ ಆಡುವ ಅವಕಾಶ ಪಡೆದುಕೊಂಡರು.

ಅರ್ಜುನ್‌ ಅವರು ಅಮೆರಿಕದ ಫ್ಯಾಬಿಯಾನೊ ಕರುವಾನ ವಿರುದ್ಧ 0-2 ಅಂತರದಿಂದ ಸೋಲು ಕಾಣುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಏಳನೇ ಸ್ಥಾನಕ್ಕಾಗಿ ನಡೆದ ಸೆಣಸಾಟಲ್ಲಿ ಪ್ರಜ್ಞಾನಂದ ಅವರು ಅಮೆರಿಕದ ವೆಸ್ಲಿ ಸೊ ಅವರನ್ನು 1.5-0.5 ಅಂಕಗಳಿಂ ಸೋಲಿಸಿ ಏಳನೇ ಸ್ಥಾನ ಪಡೆದರು.

ಇದನ್ನೂ ಓದಿ ENG vs IND: ಸರಣಿಯಿಂದ ಹೊರಬಿದ್ದ ನಿತೀಶ್ ಕುಮಾರ್‌; 4ನೇ ಪಂದ್ಯಕ್ಕೆ ಅರ್ಶ್‌ದೀಪ್‌ ಅಲಭ್ಯ