ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

HD Kumaraswamy: ಪುಣೆಯ ಶ್ರೀಮಂತ್ ದಗ್ದುಶೇಠ್ ಹಲ್ವಾಯಿ ಗಣಪತಿ ಮಂದಿರಕ್ಕೆ ಎಚ್‌ಡಿಕೆ ಭೇಟಿ; ವಿಶೇಷ ಪೂಜೆ

ಪುಣೆ ನಗರದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡುವ ಮೊದಲು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ಶ್ರೀ ಶ್ರೀಮಂತ್ ದಗ್ದುಶೇಠ್ ಹಲ್ವಾಯಿ ಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಪುಣೆಯ ಶ್ರೀಮಂತ್ ದಗ್ದುಶೇಠ್ ಹಲ್ವಾಯಿ ಗಣಪತಿ ಮಂದಿರಕ್ಕೆ ಎಚ್‌ಡಿಕೆ ಭೇಟಿ

-

Prabhakara R
Prabhakara R Oct 30, 2026 3:21 PM

ಪುಣೆ: ನಗರದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡುವ ಮೊದಲು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಶ್ರೀ ಶ್ರೀಮಂತ್ ದಗ್ದುಶೇಠ್ ಹಲ್ವಾಯಿ ಗಣಪತಿ ಮಂದಿರಕ್ಕೆ ಕುಟುಂಬ ಸಮೇತ ತೆರಳಿ ಪೂಜೆ ಸಲ್ಲಿಸಿದರು. ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸುವಂತೆ ಆಗಲಿ ಎಂದು ಆ ಮಹಾಗಣಪತಿ ಸನ್ನಿಧಿಯಲ್ಲಿ ಪ್ರಾರ್ಥಿಸಿರುವುದಾಗಿ ಅವರು ತಿಳಿಸಿದ್ದಾರೆ.

HD Kumaraswamy (12)

ಮಹಾರಾಷ್ಟ್ರ ಪ್ರವಾಸದಲ್ಲಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಗುರು ಸನ್ನಿಧಿ ಶ್ರೀ ಶಿರಡಿ ಕ್ಷೇತ್ರಕ್ಕೆ ಕುಟುಂಬ ಸಮೇತ ತೆರಳಿ ಭಗವಾನ್ ಶ್ರೀ ಸಾಯಿಬಾಬಾ ಅವರ ದಿವ್ಯ ದರುಶನ ಪಡೆದಿದ್ದರು. ಇಂದು ಪುಣೆಯ ಶ್ರೀಮಂತ್ ದಗ್ದುಶೇಠ್ ಹಲ್ವಾಯಿ ಗಣಪತಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಮಂಗನ ಕೈಗೆ ಮಾಣಿಕ್ಯ ಸಿಕ್ಕಿದರೆ ಏನಾಗುತ್ತದೆ?: ಪ್ರಿಯಾಂಕ್‌ ಖರ್ಗೆ ವಿರುದ್ಧ ಎಚ್‌ಡಿಕೆ ಕಿಡಿ

ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಕೇಂದ್ರ ಸಚಿವ ವಾಗ್ದಾಳಿ ಮುಂದುವರಿಸಿದ್ದಾರೆ. ಮಂಗನ ಕೈಗೆ ಮಾಣಿಕ್ಯ ಸಿಕ್ಕಿದರೆ ಏನಾಗುತ್ತದೆ? ಗೃಹ ಇಲಾಖೆ ದುಸ್ಥಿತಿ ಹಂಗಾಗಿದೆ. ತುಘಲಕ್ ಕೈಗೆ ಸಿಕ್ಕಿ ಪೊಲೀಸರು ಹೈರಾಣ ಆಗಿದ್ದಾರೆ ಎಂದು ಕೇಂದ್ರ ಸಚಿವ ಟೀಕಿಸಿದ್ದಾರೆ.

ಮಿಸ್ಟರ್ ತುಘಲಕ್... ವಿಷಯಾಂತರ ಕಿಡಿಗೇಡಿಗಳ ಲಕ್ಷಣ. ವಿಷಯ ಬಿಟ್ಟು ಮಿಕ್ಕಿದ್ದೆಲ್ಲಾ ಏಕೆ? ನೇರವಾಗಿ ಯುದ್ಧ ಮಾಡಿ. ಪಲಾಯನ ಏಕೆ? ಪಡಿಪಾಟಲು ಯಾಕೆ?, ಸುಳ್ಳುಸುದ್ದಿ ಶೂರ... ನೀವು ಏನೇನು ಮಾಡುತ್ತಿದ್ದೀರಿ? ಪ್ರಕರಣದ ದಿಕ್ಕು ತಪ್ಪಿಸಲು ಎಷ್ಟೊಂದು ಬಸ್ಕಿ ಹೊಡೆಯುತ್ತಿದ್ದೀರಿ? ನೀವು, ನಿಮ್ಮಪ್ಪ, ನಿಮ್ಮ ಸಿಎಂ ಹೊಸೆದ ಕುತಂತ್ರಕ್ಕೆ ಬಲಿಯಾದವರಿಗೇ ಕ್ಲೀನ್ ಚಿಟ್!! ಕ್ಲೀನ್ ಚಿಟ್ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಲ್ಲ. ಅರೆರೆ.. ಎಂಥಾ ಐನಾತಿ ಐಡಿಯಾ? ಅತಿಜಾಣ ಗ್ರಹಣ ಮಂತ್ರಿ!!

ನನ್ನ ಅನುಮಾನ ಏನೆಂದರೆ, ನಿಮ್ಮ ತನಿಖೆಯೇ ಸ್ಟಿಂಗ್ ಆಗುತ್ತಿದೆ! ಲೀಕ್ ಆಗುತ್ತಿರುವ ಸುದ್ದಿಗಳು ಅದಕ್ಕೆ ರೇಖಿ ಹಿಡಿಯುತ್ತಿವೆ. ರೀ ತುಘಲಕ್... ನೀವು ಆರಂಭ ಮಾಡಿದ್ದೀರಿ, ನಾನು ಮುಗಿಸುತ್ತೇನೆ ಎಂದು ಎಚ್‌ಡಿಕೆ ಕಿಡಿಕಾರಿದ್ದಾರೆ.