ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ನಾಲ್ಕನೇ ಟೆಸ್ಟ್‌ನಿಂದ ಆಕಾಶ್‌ ದೀಪ್‌ ಔಟ್‌, ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ಯುವ ವೇಗಿ!

Akash Deep ruled out: ಗಾಯದ ಕಾರಣ ಭಾರತ ತಂಡದ ವೇಗದ ಬೌಲರ್‌ ಆಕಾಶ್‌ ದೀಪ್‌ ಇಂಗ್ಲೆಂಡ್‌ ವಿರುದ್ದದ ನಾಲ್ಕನೇ ಟೆಸ್ಟ್‌ ಪಂದ್ಯದಿಂದ ಹೊರ ನಡೆದಿದ್ದಾರೆಂದು ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಅನ್ಶೂಲ್‌ ಕಾಂಬೋಜ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.

4ನೇ ಟೆಸ್ಟ್‌ನಿಂದ ಆಕಾಶ್‌ ದೀಪ್‌ ಔಟ್‌, ಭಾರತಕ್ಕೆ ಹಿನ್ನಡೆ!

ನಾಲ್ಕನೇ ಟೆಸ್ಟ್‌ ಪಂದ್ಯದಿಂದ ಆಕಾಶ್‌ ದೀಪ್‌ ಔಟ್‌.

Profile Ramesh Kote Jul 22, 2025 9:22 PM

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತ ತಂಡ ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ರಿಷಭ್‌ ಪಂತ್‌, ನಿತೀಶ್‌ ಕುಮಾರ್‌ ರೆಡ್ಡಿ, ಅರ್ಷದೀಪ್‌ ಸಿಂಗ್ ಬಳಿಕ ಇದೀಗ ವೇಗದ ಬೌಲರ್‌ ಆಕಾಶ್‌ ದೀಪ್‌ (Akash Deep) ಕೂಡ ಗಾಯಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್‌ಫಾರ್ಮ್‌ ಆಕಾಶ್‌ ದೀಪ್‌ ಜುಲೈ 23 ರಂದು ಇಲ್ಲಿನ ಓಲ್ಡ್‌ ಟ್ರಾಫರ್ಡ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ ಪಂದ್ಯದಿಂದ (IND vs ENG) ಹೊರ ನಡೆದಿದ್ದಾರೆಂದು ನಾಯಕ ಶುಭಮನ್‌ ಗಿಲ್‌ (Shubman Gill) ಖಚಿತಪಡಿಸಿದ್ದಾರೆ. ಇನ್ನು ಆಕಾಶ ದೀಪ್‌ ಅವರ ಸ್ಥಾನಕ್ಕೆ ಯುವ ವೇಗಿ ಅನ್ಶೂಲ್‌ ಕಾಂಬೋಜ್‌ ಬುಧವಾರ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುವ ಮ್ಯಾಂಚೆಸ್ಟರ್‌ನಲ್ಲಿ ಯುವ ವೇಗಿ ಅನ್ಶೂಲ್‌ ಕಾಂಬೋಜ್‌ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಭಮನ್‌ ಗಿಲ್‌ ಸುಳಿವು ನೀಡಿದ್ದಾರೆ. ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಪಂದ್ಯದಲ್ಲಿ ಅನ್ಶೂಲ್‌ ಕಾಂಬೋಜ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದರು. ಜಸ್‌ಪ್ರೀತ್‌ ಬುಮ್ರಾ ವಿಶ್ರಾಂತಿ ಪಡೆಯಲಿದ್ದು, ಕನ್ನಡಿಗ ಪ್ರಸಿಧ್‌ ಕೃಷ್ಣ ಅವರ ಸ್ಥಾನದಲ್ಲಿ ಅನ್ಶೂಲ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದೆ.

ENG vs IND: ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಸಂಜಯ್‌ ಮಾಂಜ್ರೇಕರ್‌!

ರಿಷಭ್‌ ಪಂತ್‌ಗೆ ವಿಕೆಟ್‌ ಕೀಪರ್‌ ಜವಾಬ್ದಾರಿ

ಗಾಯದ ಸಮಸ್ಯೆಯ ನಡುವೆ ಭಾರತ ತಂಡಕ್ಕೆ ಒಳ್ಳೆಯ ಸುದ್ದಿ ಸಿಕ್ಕಿದೆ. ರಿಷಭ್ ಪಂತ್ ಶೀಘ್ರವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ನಿರ್ವಹಿಸಲಿದ್ದಾರೆ ಎಂದು ಶುಭಮನ್ ಬಹಿರಂಗಪಡಿಸಿದ್ದಾರೆ. ಪಂತ್‌ ವಿಕೆಟ್‌ ಕೀಪರ್ ಸ್ಥಾನಕ್ಕೆ ಮರಳಿರುವುದರಿಂದ ಭಾರತ ತಂಡ ಧ್ರುವ್ ಜುರೆಲ್ ಅವರನ್ನು ವಿಕೆಟ್‌ ಕೀಪರ್‌ ಆಗಿ ಆಡಿಸುವುದಿಲ್ಲ ಮತ್ತು ಹೆಚ್ಚುವರಿ ಆಲ್‌ರೌಂಡರ್, ಬ್ಯಾಟರ್ ಅಥವಾ ಬೌಲರ್ ಅನ್ನು ತರಲು ಆ ಸ್ಥಾನವನ್ನು ಬಳಸಿಕೊಳ್ಳಬಹುದು.

ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ

ನಾಲ್ಕನೇ ಟೆಸ್ಟ್‌ ಪಂದ್ಯದ ನಿಮಿತ್ತ ಭಾರತ ತಂಡದಲ್ಲಿ ಕನಿಷ್ಠ ಎರಡು ಬದಲಾವಣೆಯನ್ನು ತರಬಹುದು. ನಿತೀಶ್‌ ರೆಡ್ಡಿ ಮುಂದಿನ ಎರಡು ಪಂದ್ಯಗಳಿಂದ ಹೊರ ನಡೆದಿದ್ದಾರೆ. ಆಕಾಶ್‌ ದೀಪ್‌ ಸ್ನಾಯು ಸೆಳೆತದ ಕಾರಣ ನಾಲ್ಕನೇ ಟೆಸ್ಟ್‌ನಿಂದ ಹೊರ ಬಿದ್ದಿದ್ದಾರೆ. ಈ ಇಬ್ಬರ ಸ್ಥಾನದಲ್ಲಿ ಯಾರು ಆಡಲಿದ್ದಾರೆಂದು ತೀವ್ರ ಕುತೂಹಲ ಕೆರಳಿಸಿದೆ.

IND vs ENG: ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ಭಾರತ ತಂಡದ ಪ್ಲೇಯಿಂಗ XI ಆರಿಸಿದ ಆರ್‌ ಅಶ್ವಿನ್‌!

ನಿತೀಶ್‌ ರೆಡ್ಡಿ ಸರಣಿಯಿಂದ ಔಟ್‌

"ನಿತೀಶ್ ರೆಡ್ಡಿ ಅವರನ್ನು ಸರಣಿಯಿಂದ ಹೊರಗಿಡಲಾಗಿದೆ. ಆಕಾಶ್ ದೀಪ್ ಮತ್ತು ಅರ್ಷದೀಪ್‌ ಸಿಂಗ್ ಅವರನ್ನು 4ನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ. ಆದರೆ ನಮ್ಮ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ ಮತ್ತು ನಾವು 20 ವಿಕೆಟ್‌ಗಳನ್ನು ಹೇಗೆ ಪಡೆಯುವುದು ಎಂಬುದರ ಮೇಲೆ ಗಮನ ಹರಿಸುತ್ತೇವೆ," ಎಂದು ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಶುಭಮನ್ ಗಿಲ್‌ ತಿಳಿಸಿದ್ದಾರೆ.

"ಅನ್ಶೂಲ್‌ ಕಾಂಬೋಜ್‌ ಅವರನ್ನು ನಾವು ನೋಡಿದ್ದೇವೆ. ನಮಗೆ ನಿಖರವಾಗಿ ಏನು ಬೇಕೆಂದು ನಮಗೆ ತಿಳಿದಿದೆ. ಅವರು ಇಲ್ಲಿ ಯಾವ ಕಾರಣಕ್ಕೆ ನಮ್ಮ ಜೊತೆ ಇದ್ದಾರೆಂದು ತಿಳದಿದೆ ಹಾಗೂ ಅವರು ನಮಗಾಗಿ ಪಂದ್ಯವನ್ನು ಗೆಲ್ಲಲಿದ್ದಾರೆ. ಹೌದು, ಪ್ರತಿಯೊಂದು ಪಂದ್ಯದಲ್ಲಿಯೂ ವಿಭಿನ್ನ ಸಂಯೋಜನೆಯನ್ನು ಆಡಿಸುವುದು ಆದರ್ಶವಲ್ಲ. ಆದರೆ ಅವರು ಟೆಸ್ಟ್‌ಗೆ ಪದಾರ್ಪಣೆ ಮಾಡುವ ಸನಿಹದಲ್ಲಿದ್ದಾರೆಂಬುದು ನಿಜ. ಅವರು ಹಾಗೂ ಪ್ರಸಿಧ್‌ ಕೃಷ್ಣ ಅವರಲ್ಲಿ ಒಬ್ಬರು ಆಡಬಹುದು," ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ.