Janamejaya Umarji Column: ವಚನಗಳ ಸಂಖ್ಯೆ ಕಿರಿದಾಗುತ್ತಿದೆಯೇ ? ಇದು ಆತಂಕಕಾರಿ ಬೆಳವಣಿಗೆಯೇ ?
ಒಂದು ವರ್ಷದ ಹಿಂದೆ ಇದೇ ಪತ್ರಿಕೆಯಲ್ಲಿ ‘ಹಳಕಟ್ಟಿಯವರನ್ನೇ ದೂರವಿಡುವ ಕಾಲ ಬಂದರೆ ಆಶ್ಚರ್ಯವೇನಿಲ್ಲ’ ಶೀರ್ಷಿಕೆಯಡಿಯಲ್ಲಿ ಈ ಅಪಾಯವನ್ನು ಮೊದಲೇ ಬಯಲಿಗೆಳೆಯಲಾಗಿತ್ತು. ಆ ಸಾಲುಗಳು ಇಂತಿವೆ: “ಇವರು ವಚನ ಶಾಸ್ತ್ರ ಸಾರ ಬರೆದ ಫ.ಗು. ಹಳಕಟ್ಟಿಯವರನ್ನು ಇಂದಲ್ಲ ನಾಳೆ ದೂರ ಸರಿಸಿದರೆ ಆಶ್ಚರ್ಯವೇನಿಲ್ಲ


ಯಕ್ಷ ಪ್ರಶ್ನೆ
ಜನಮೇಜಯ ಉಮರ್ಜಿ
ವಚನಗಳ ಸಂಖ್ಯೆ ನಿಜವಾಗಿಯೂ ಕುಗ್ಗುತ್ತಿದೆಯೇ? ಇದು ಈಗಿರುವ ಮೂಲಭೂತ ಪ್ರಶ್ನೆ. ವಚನಗಳನ್ನು ನಂಬಿ ಆರಾಧಿಸುತ್ತಿರುವ ಜನಸಾಮಾನ್ಯರು, ಪ್ರತಿ ಬಾರಿ ಹೊಸ ಸಂಪುಟ ನೋಡಿದಾಗ, ‘ಅಯ್ಯೋ, ಪರಂಪರಾಗತವಾಗಿ ನಾವು ಪಠಿಸುತ್ತಿದ್ದ ವಚನಗಳು ಏಕೆ ಇಲ್ಲವಾಗುತ್ತಿವೆ?’ ಎಂದು ಆಶ್ಚರ್ಯಪಡುವುದು ಸಾಮಾನ್ಯವಾಗಿದೆ. ಹಿಂದೆ ಸಂಪಾದಿಸಿದ ಹಲವು ಹಿರಿಯರ ಎಷ್ಟೋ ವಚನಗಳನ್ನು ಮೊದಲ ಸಂಪುಟದಿಂದಲೇ ಕೈಬಿಡಲಾಗಿದೆ ಎಂಬ ಸಂಶಯವಿದೆ. ಕಳೆದ ಕೆಲವು ದಶಕಗಳಲ್ಲಿ, ವಿವಿಧ ಆವೃತ್ತಿಗಳು ಮತ್ತು ಸಂಕಲನ ಗಳಲ್ಲಿ ಈ ಶರಣರ ವಚನಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.
12ನೇ ಶತಮಾನದ ಕರ್ನಾಟಕದ ಅಸಾಧಾರಣ ಆಧ್ಯಾತ್ಮಿಕ ಪ್ರವಾಹವಾದ ವಚನ ಸಾಹಿತ್ಯ ಈಗ ಕಿರಿದಾಗುವ ಅಪಾಯಕ್ಕೆ ಸಿಲುಕಿದೆ. ಮೊನ್ನೆ ಬಾಗಲಕೋಟೆಯಲ್ಲಿ ನಡೆದ ಮೊಯ್ಲಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ಇದ್ದ ವಿಷಯ ಬಿಟ್ಟು ವಚನಗಳ ಕುರಿತು ಸ್ವಾರಸ್ಯಕರ ಚರ್ಚೆ ನಡೆದಿದೆ. ಒಂದೇ ಸಮಯಕ್ಕೆ ಎಲ್ಲ ಕಡೆ ಒಂದೇ ವಿಷಯ ಹೇಳಿ ಕಥನ ಸೃಷ್ಟಿಸುವುದು ಒಂದು ಹಳೆಯ ತಂತ್ರ.
ಈಗ ವಚನ ಸಾಹಿತ್ಯದ ದ್ವಾರಪಾಲಕ ಎಂದು ಕರೆಸಿಕೊಳ್ಳುವ ಚಿಂತಕರೊಬ್ಬರು, ಈ ಹಿಂದೆ ಮಾಡಿದ ತಪ್ಪನ್ನು ನಾವು ಸರಿಪಡಿಸುತ್ತಿರುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಯಾವ ತಪ್ಪನ್ನು ಸರಿಪಡಿಸಲಾಗುತ್ತಿದೆ? ಮತ್ತು ಅದಕ್ಕಿಂತ ಮುಖ್ಯವಾಗಿ, ಯಾರ ತಪ್ಪು? ವಚನ ಅಧ್ಯಯನ ಮತ್ತು ಸಂಪಾದನಾ ಕಾರ್ಯಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಡಾ. ಕಲಬುರ್ಗಿಯವರು ವಚನ ಸಂಪುಟಗಳಲ್ಲಿ ತಪ್ಪು ಮಾಡಿದ್ದಾರೆಯೇ? ಈಗ ಅವುಗಳನ್ನು ಸರಿಪಡಿಸಲಾಗುವುದೇ? ಹಾಗಾದರೆ, ಇದು ಹಿಂದಿನ ಪ್ರಯತ್ನಗಳಲ್ಲಿ ಬುದ್ಧಿಪೂರ್ವಕವಾಗಿ ಕೆಲವು ವಚನಗಳನ್ನು ಕೈಬಿಡುತ್ತಾ ಬರಲಾಗಿದೆ ಎಂಬ ತಪ್ಪೊಪ್ಪಿಗೆಯಾ? ತಮ್ಮ ಉದ್ದೇಶಕ್ಕೆ ಅಡ್ಡ ಬರುವ ಶಿವಶರಣರ ವಚನಗಳನ್ನು ಜಾಗರೂಕತೆ ಯಿಂದ ನಿಗ್ರಹಿಸಲಾಗುತ್ತಿದೆಯೇ? ಎಂಬೆ ಪ್ರಶ್ನೆಗಳು ಈಗ ಏಳುತ್ತಿವೆ.
ಇದನ್ನೂ ಓದಿ:Janamejaya Umarji Column: ಗೋಕರ್ಣದ ಗುಹೆಯೊಳಗಿದ್ದದ್ದು ನೀನಾ ?
ಒಂದು ವರ್ಷದ ಹಿಂದೆ ಇದೇ ಪತ್ರಿಕೆಯಲ್ಲಿ ‘ಹಳಕಟ್ಟಿಯವರನ್ನೇ ದೂರವಿಡುವ ಕಾಲ ಬಂದರೆ ಆಶ್ಚರ್ಯವೇನಿಲ್ಲ’ ಶೀರ್ಷಿಕೆಯಡಿಯಲ್ಲಿ ಈ ಅಪಾಯವನ್ನು ಮೊದಲೇ ಬಯಲಿಗೆಳೆಯಲಾಗಿತ್ತು. ಆ ಸಾಲುಗಳು ಇಂತಿವೆ: “ಇವರು ವಚನ ಶಾಸ್ತ್ರ ಸಾರ ಬರೆದ ಫ.ಗು. ಹಳಕಟ್ಟಿಯವರನ್ನು ಇಂದಲ್ಲ ನಾಳೆ ದೂರ ಸರಿಸಿದರೆ ಆಶ್ಚರ್ಯವೇನಿಲ್ಲ. ವಚನ ದರ್ಶನ ಪುಸ್ತಕದಲ್ಲಿ ನೀಡಿರುವ ವಚನಗಳು ಬಹುತೇಕ ಜನಪ್ರಿಯವೇ ಆಗಿವೆ. ಪುಸ್ತಕದಲ್ಲಿ ಕರ್ನಾಟಕ ಸರಕಾರ ಪ್ರಕಟಿಸಿದ ಡಾ. ಕಲಬುರ್ಗಿ ಯವರ ಸಂಪಾದನೆಯ ಸಂಪುಟಗಳಲ್ಲಿಯ ವಚನ ಸಂಖ್ಯೆಗಳನ್ನೇ ನಮೂದಿಸಲಾಗಿದೆ.
ಈ ವಚನಗಳನ್ನು ‘ಪ್ರಕ್ಷಿಪ್ತ’ ಎಂದು ಸಾಬೀತುಪಡಿಸಲು ನಾಳೆ ಡಾ.ಕಲಬುರ್ಗಿಯವರನ್ನು ಈ ಜನ ನಿರಾಕರಿಸಬಹುದು. ಬಹುಶಃ ಕಲಬುರ್ಗಿಯವರೇ ಹೇಳಿದ ಮಾತು ಎನಿಸುತ್ತೆ. ಪ್ರಕ್ಷಿಪ್ತ ಎಂದು ನಿರಾಕರಿಸುತ್ತಾ ಹೋದರೆ 10 ಪ್ರತಿಶತ ವಚನಗಳು ಮಾತ್ರ ಉಳಿಯಬಹುದೇನೋ". ಅದು ನಿಜವಾಗುತ್ತಿದೆ.
ಬಹುಶಃ ಕಮ್ಯುನಿಸ್ಟ್ ಮತ್ತು ಸೆಮೆಟಿಕ್ ರಿಲಿಜನ್ನುಗಳಿಗೆ ಅನುಕೂಲವಾಗುವ ಶೇ.10ರಷ್ಟು ವಚನಗಳನ್ನು ಮಾತ್ರ ಉಳಿಸಿಕೊಳ್ಳಬಹುದೇ ಎಂಬ ಭಯ ಈಗ ವಚನಾಭಿಮಾನಿಗಳಲ್ಲಿ ಶುರು ವಾಗಿದೆ. ಮೊದಮೊದಲು ಸಂಪುಟದಿಂದ ಸಂಪುಟಕ್ಕೆ ಹೆಚ್ಚಾಗುತ್ತಾ ಹೋದ ವಚನಗಳ ಸಂಖ್ಯೆಯನ್ನು, ಈಗ ಮತ್ತೆ ಕರಗಿಸಲಾಗುತ್ತಿದೆಯಾ? ಯಾವುದೇ ಕಾರಣಕ್ಕೂ ಡಾ. ಕಲಬುರ್ಗಿ ಯವರು ಇದ್ದಾಗ ಕರ್ನಾಟಕ ಸರಕಾರ ಪ್ರಕಟಿಸಿದ ವಚನ ಸಂಪುಟಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಸುರಕ್ಷಿತ ಎನಿಸುತ್ತಿದೆ.
‘ಟೈಮ್ ಕ್ಯಾಪ್ಸೂಲ್’ನಲ್ಲಿ ಹಾಕಿ ಇಟ್ಟುಕೊಳ್ಳುವುದು ಇನ್ನೂ ಒಳಿತು. ವಚನಕಾರರು ಹಿಂದೂ ಧರ್ಮದಲ್ಲಿಯ ಒಂದು ಬಗೆಯ ವಿಚಾರವಾದಿ ( Rationalist ) ಗಳೆಂದು ನಾವು ಹೇಳಬಹುದು ಎಂದು ಹಳಕಟ್ಟಿಯವರು ಹೇಳಿದ್ದಾರೆ. ಹೀಗಾಗಿ ಕಮ್ಯುನಿಸ್ಟ್ ಮತ್ತು ಸೆಮೆಟಿಕ್ ರಿಲಿಜನ್ನುಗಳ ಪರವಿರುವವರಿಗೆ ಈಗಾಗಲೇ ಹಳಕಟ್ಟಿಯವರು ಬೇಡವಾಗಿದ್ದಾರೆ. ಉದಾಹರಣೆಗೆ ಸತ್ಯ-ಮಿಥ್ಯ, ನಿಜ-ದರ್ಶನಗಳಲ್ಲಿ, ಶಿವಾನುಭವ ಪತ್ರಿಕೆಗಳಲ್ಲಿ ಬಂದ ವಿಷಯಗಳನ್ನು ಕೈ ಬಿಡಲಾಗಿದೆ, ಅರ್ಥಾತ್ ಹಳಕಟ್ಟಿಯವರ ತಪ್ಪುಗಳನ್ನು ತಿದ್ದಿಕೊಳ್ಳಲಾಗಿದೆ. ಈಗ ಡಾ.ಕಲಬುರ್ಗಿಯವ ಸರದಿ ಎನಿಸುತ್ತಿದೆ.
ವಚನಗಳ ಸಂಖ್ಯೆ ನಿಜವಾಗಿಯೂ ಕುಗ್ಗುತ್ತಿದೆಯೇ? ಇದು ಈಗಿರುವ ಮೂಲಭೂತ ಪ್ರಶ್ನೆ. ವಚನ ಗಳನ್ನು ನಂಬಿ ಆರಾಧಿಸುತ್ತಿರುವ ಜನಸಾಮಾನ್ಯರು, ಪ್ರತಿ ಬಾರಿ ಹೊಸ ಸಂಪುಟ ನೋಡಿ ದಾಗ, ‘ಅಯ್ಯೋ, ಪರಂಪರಾಗತವಾಗಿ ನಾವು ಪಠಿಸುತ್ತಿದ್ದ ವಚನಗಳು ಏಕೆ ಇಲ್ಲವಾಗುತ್ತಿವೆ?’ ಎಂದು ಆಶ್ಚರ್ಯಪಡುವುದು ಸಾಮಾನ್ಯವಾಗಿದೆ. ಹಿಂದೆ ಸಂಪಾದಿಸಿದ ಹಲವು ಹಿರಿಯರ ಎಷ್ಟೋ ವಚನಗಳನ್ನು ಮೊದಲ ಸಂಪುಟದಿಂದಲೇ ಕೈಬಿಡಲಾಗಿದೆ ಎಂಬ ಸಂಶಯವಿದೆ.
ಕಳೆದ ಕೆಲವು ದಶಕಗಳಲ್ಲಿ, ವಿವಿಧ ಆವೃತ್ತಿಗಳು ಮತ್ತು ಸಂಕಲನಗಳಲ್ಲಿ ಈ ಶರಣರ ವಚನಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಈ ವ್ಯತ್ಯಾಸಗಳಿಗೆ ಹಸ್ತಪ್ರತಿಗಳ ವ್ಯತ್ಯಾಸ ಮತ್ತು ಐತಿಹಾಸಿಕ ಅಂತರವನ್ನು ಕಾರಣವೆಂದು ಕೆಲವರು ಹೇಳುತ್ತಾರೆ. ಆದರೆ ಬಹುಪಾಲು ಜನ ಹೇಳುವ ಪ್ರಕಾರ ಸೈದ್ಧಾಂತಿಕ ಪಕ್ಷಪಾತಕ್ಕಾಗಿ ಇವುಗಳನ್ನು ‘ಪ್ರಕ್ಷಿಪ್ತ’ ಎನ್ನುವ ಹಣೆಪಟ್ಟಿ ಹಚ್ಚಿ ಕೈ ಬಿಡಲಾಗುತ್ತಿದೆ. ಡಾ.ಕಲಬುರ್ಗಿಯವರು ಮೂಲದಲ್ಲಿ ವಚನ ಸಂಪಾದನೆಯನ್ನು ಪ್ರಾಮಾಣಿಕ ವಾಗಿ ಮಾಡಿದ್ದಾರೆ, ಆದರೆ ವ್ಯಾಖ್ಯಾನದಲ್ಲಿ ಯತಾರ್ಥವಿಲ್ಲ. ಒಂದು ಇಸಮ್ಮಿನ ದೃಷ್ಟಿಕೋನವಿದೆ. ಅವರ ವ್ಯಾಖ್ಯಾನಗಳು ವಚನಗಳನ್ನು ಅವು ಮೂಲದಲ್ಲಿ ನಿರೂಪಿಸುವ ಆಧ್ಯಾತ್ಮಿಕ ಮತ್ತು ಭಕ್ತಿ ತತ್ವಗಳ ಬದಲಿಗೆ ಕೇವಲ ಸಾಮಾಜಿಕ ಟೀಕೆ, ಬಂಡಾಯ, ಸಮಾಜೋ-ರಾಜಕೀಯದ ಸರಕಾಗಿ ನೋಡುತ್ತವೆ ಎಂಬ ಆರೋಪ ಹೊಸದೇನಲ್ಲ. ವಚನಗಳ ಕೈಬಿಡುವಿಕೆ ಅಥವಾ ಆಯ್ದ ಸೇರ್ಪಡೆ ಕೇವಲ ಸಂಗ್ರಹದ ವಿಷಯವಲ್ಲ,
ರಾಜಕೀಯವಾಗಿದ್ದರೂ ಪರವಾಗಿಲ್ಲ. ಇದರ ಹಿಂದೆ ಧರ್ಮಭಂಜಕ ಹುನ್ನಾರವಿದೆ. ಶಿವ-ತತ್ತ್ವ, ಅನುಭಾವ, ಯೋಗ, ಅಧ್ಯಾತ್ಮ, ಆಗಮ-ಉಪನಿಷತ್ತು, ಭಕ್ತಿಯನ್ನು ಒತ್ತಿ ಹೇಳುವ ವಚನಗಳು ಈ ತಪ್ಪು ಸರಿಪಡಿಸುವಿಕೆಗೆ ಸಂತ್ರಸ್ತರು. ಅಕಡೆಮಿಕ್ ವಲಯದ ಎಡಪಂಥೀಯರಿಂದ ಇದು ಎಗ್ಗಿಲ್ಲದೇ ನಡೆದೇ ಇದೆ. ಇದು ಒಂದು ಗಂಭೀರವಾದ ಕಳವಳಕ್ಕೆ ಕಾರಣವಾಗಿದೆ.
ಈ ಮೂಲಕ ಬಲವಾದ ಆಸ್ತಿಕ ಅಥವಾ ಹಿಂದೂ ಬೇರುಗಳನ್ನು ಹೊಂದಿರುವ ವಚನಗಳನ್ನು ಕೇವಲ ಶುಷ್ಕ ವೈಚಾರಿಕವಾಗಿಸಲು ಪ್ರಯತ್ನಿಸಲಾಗುತ್ತಿದೆ. ಲಿಂಗಾಯತ ಪರಂಪರೆಯನ್ನು ಅದರ ಶಿವಭಕ್ತಿಯ ಬೇರುಗಳಿಂದ ಬೇರ್ಪಡಿಸಲು ಹೀಗೆ ಮಾಡಲಾಗುತ್ತಿದೆ. ಉದಾತ್ತ ಲಿಂಗಾಯತವನ್ನು ಮಾರ್ಕ್ಸವಾದಿ ಶಕ್ತಿಗಳು ಮತ್ತು ಸೆಮೆಟಿಕ್ ರಿಲಿಜನ್ ಶಕ್ತಿಗಳು ಬಿಡದೇ ಕಾಡುತ್ತಿವೆ. ಕರ್ನಾಟಕ ದಲ್ಲಿಯೇ 6000ಕ್ಕೂ ಹೆಚ್ಚು ಇದ್ದ ಲಿಂಗಾಯತ ಮಠಗಳು ಈಗ ಎಷ್ಟಿವೆ? ಎಷ್ಟೊಂದು ಮತಾಂತರ ನಡೆದಿದೆ? ಎಂಬುದನೆಲ್ಲ ನೋಡಿದಾಗ ಇದು ಅನುಭವಕ್ಕೆ ಬರುತ್ತದೆ.
ತಮ್ಮ ಕಥನಗಳನ್ನು ಪೂರೈಸಲು ಲಿಂಗಾಯತ ಪರಂಪರೆಯನ್ನು ತಿರಿಚುತ್ತಿರುವವರು ಯಾರು ಎಂದು ಜನಮಾನಸಕ್ಕೆ ಈಗ ತಿಳಿಯುತ್ತಿದೆ. ಧರ್ಮದಲ್ಲಿಯ ಆಷಾಢಭೂತಿಗಳನ್ನು ಟೀಕಿಸಿದ ವಚನಗಳನ್ನು ಹಿಂದೂ ಧರ್ಮದ ವಿರುದ್ಧ ಎದ್ದ ಬಂಡಾಯ ಎಂಬಂತೆ ಬಿಂಬಿಸಲಾಗುತ್ತಿದೆ. ಆಷಾಢಭೂತಿಗಳು ಎಲ್ಲ ಕಡೆ ಇದ್ದಾರೆ.
ಲಿಂಗಾಯತ ಪರಂಪರೆಯನ್ನು ಶುಷ್ಕ ತರ್ಕ, ಹುಸಿ ಮಾನವತಾವಾದ ಮತ್ತು ನಾಸ್ತಿಕತೆಯ ಪೂರ್ವಗಾಮಿಯಾಗಿ ಚಿತ್ರಿಸಲು ಒಂದು ತಂಡ ನಿರಂತರ ಹೆಣಗುತ್ತಿದೆ. ಈ ವಾದ ಬಲಪಡಿಸಲು ರಾಜಕೀಯ ವಾಸನೆಯ ಪೂರ್ವಗ್ರಹವನ್ನು ಪುಸ್ತಕ, ಸಾರ್ವಜನಿಕ ಭಾಷಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಕ್ತಪಡಿಸಲಾಗುತ್ತಿದೆ. ಇದಕ್ಕೆ ಸರಕಾರಿ ವ್ಯವಸ್ಥೆಯನ್ನೂ ಬಳಸಿಕೊಳ್ಳಲಾಗುತ್ತಿದೆ.
ಹೊಸ ತಲೆಮಾರಿನ ಜನರು ವಚನ ಸಾಹಿತ್ಯವನ್ನು ಇಡಿಯಾಗಿ ನೋಡಲು ಶುರುಮಾಡಿzರೆ. ಹೀಗಾಗಿ ಅಂಥ ವಚನಗಳು ಸಿಗದಂತೆ ಮಾಡುವ ಹುನ್ನಾರ ಶುರುವಾಗಿದೆ. 12ನೇ ಶತಮಾನದ ಮಹಾನದಿಯನ್ನು ಬತ್ತದಂತೆ ಉಳಿಸಿಕೊಳ್ಳುವುದು ಎಂದರೆ, ಈ ಹಿಂದೆ ನಿರ್ಲಕ್ಷಿಸಲ್ಪಟ್ಟ ವಚನ ಗಳೂ ಸೇರಿದಂತೆ ಎಲ್ಲಾ ವಚನಗಳನ್ನು ಉಳಿಸಿಕೊಳ್ಳುವುದು.
ಪ್ರತ್ಯೇಕತೆ, ಸಂಕುಚಿತತೆ ತೊರೆದು ಎಲ್ಲ ಆಯಾಮದ, ಸಿದ್ಧಾಂತದ ವ್ಯಾಖ್ಯಾನಗಳನ್ನು ಉತ್ತೇಜಿಸು ವುದು. ಏಕೆಂದರೆ ವಚನಗಳಲ್ಲಿ ಅದ್ವೈತ, ಶಿವಾದ್ವೈತ, ಶಕ್ತಿ ವಿಶಿಷ್ಟಾದ್ವೈತ, ಶೈವ, ವೀರಶೈವ ಎಲ್ಲವೂ ಇವೆ. ವಚನ ಸಾಹಿತ್ಯವನ್ನು ಪಂಥೀಯ ವೈಪರೀತ್ಯಕ್ಕೆ ಬಳಸಿಕೊಂಡು ಪ್ರತ್ಯೇಕಿಸುವ ಬದಲು, ವಿಶಾಲವಾದ ಭಾರತೀಯ ಆಧ್ಯಾತ್ಮಿಕ ಪರಿಸರ ವ್ಯವಸ್ಥೆಯೊಳಗೆ ಇರುವ ಅದರ ವೈಭವ ವನ್ನು ಆನಂದಿಸಬೇಕಾಗಿದೆ.
ಲಿಂಗಾಯತ ಪರಂಪರೆ ಯಾರ ಅಧಿಕೃತ ಗುತ್ತಿಗೆಯಲ್ಲ. ಒಂದು ಇಸಮ್ಮಿನ ದ್ವಾರಪಾಲಕರು ತಮ್ಮ ಉದ್ದೇಶಗಳಿಗೆ ಸರಿಹೊಂದುವಂತೆ ಬಸವಾದಿ ಪ್ರಮಥರ ವಚನಗಳನ್ನು ನಿರ್ಧರಿಸುತ್ತಾರೆಯೇ? ಸಂಪುಟಗಳನ್ನು ಮರುಪರಿಶೀಲಿಸುವ, ಸಂಪಾದಕೀಯ ಆಯ್ಕೆಗಳನ್ನು ಪ್ರಶ್ನಿಸುವ ಮತ್ತು ಪಕ್ಷಪಾತ ವಿಲ್ಲದೆ ಇದು ನಡೆಯಲು ಒತ್ತಾಯಿಸುವ ಸಮಯ ಇದಲ್ಲವೇ? ಇನ್ನು ಹತ್ತು ವರ್ಷಗಳಲ್ಲಿ ಒಂದು ಪದವನ್ನು ಇಲ್ಲವಾಗಿಸುತ್ತೇವೆ ಎಂದು ಮುಖಂಡರೊಬ್ಬರು ಮೊನ್ನೆ ಗುಡುಗಿದ್ದರು. ಈಗ ಇನ್ನೊ ಬ್ಬರು, ‘ಡಾ.ಕಲಬುರ್ಗಿಯವರೂ ಅಂತಿಮವಲ್ಲ, ಅವರ ತಪ್ಪುಗಳನ್ನು ಸರಿಪಡಿಸುತ್ತೇವೆ’ ಎಂದು ಹೇಳಿzರೆ. ಅಂದ ಹಾಗೆ, ಮುಂದಿನ ತಿಂಗಳಲ್ಲಿ ಸಂಸ್ಕೃತಿ ಪ್ರಚಾರ ಸೋಗಿನ ಅಭಿಯಾನವೊಂದು ನಡೆಯಲಿದೆ.
ಈ ಅಭಿಯಾನದ ಅಂತಿಮ ಗುರಿ ಬೆಂಗಳೂರಿನಲ್ಲಿ ಕರ್ನಾಟಕದ ಅಧಿಕಾರಾರೂಢ ಸಮಾಜವಾದಿ ನಾಯಕರ ಸನ್ಮಾನ. ಹಾಗೆಂದು ಸಮಿತಿಯೇ ಹೇಳಿಕೊಂಡಿದ್ದು ವರದಿಯಾಗಿದೆ. ಪ್ರಸ್ತುತ ಸಾಂಸ್ಕೃ ತಿಕ ನಾಯಕರ ಕುರ್ಚಿ ಸೆಪ್ಟೆಂಬರಿನಲ್ಲಿ ಅಲುಗಾಡುತ್ತಿರುವುದಕ್ಕೆ ಮತ್ತು ಇದಕ್ಕೆ ಸಂಬಂಧ ಕಲ್ಪಿಸಿ ಕೊಂಡರೆ ಕಾಕತಾಳೀಯವೇನಲ್ಲ.
(ಲೇಖಕರು ಚಿಂತಕರು