ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೆಮಿಕಂಡಕ್ಟರ್ ಸಿಸ್ಟಮ್ಸ್ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಮುಂಚೂಣಿ ಎಂಜಿನಿಯರಿಂಗ್ ಸಂಸ್ಥೆಗಳ ಒಟ್ಟುಗೂಡಿಸಿದ ಲ್ಯಾಮ್ ರಿಸರ್ಚ್ ಚಾಲೆಂಜ್ 2026

ಅತ್ಯಾಧುನಿಕ ಸೆಮಿಕಂಡಕ್ಟರ್ ಉತ್ಪಾದನಾ ಪ್ರಕ್ರಿಯೆಯು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರದೆ ಹಾರ್ಡ್‌ವೇರ್, ಸಾಫ್ಟ್‌ವೇರ್, ಆಟೊಮೇಷನ್, ಡೇಟಾ ಸೈನ್ಸ್, ಪ್ರಕ್ರಿಯಾ ಎಂಜಿನಿಯರಿಂಗ್ (ಪ್ರೊಸೆಸ್ ಎಂಜಿನಿಯರಿಂಗ್) ಮತ್ತು ಸುಧಾರಿತ ನಿಯಂತ್ರಣ ವ್ಯವಸ್ಥೆಗಳ ಸಮಗ್ರ ಪರಿಣತಿಯನ್ನು ಬೇಡುತ್ತದೆ. ಹೀಗಾಗಿ ಸಿಸ್ಟಮ್ಸ್ ಎಂಜಿನಿಯರಿಂಗ್ ಕೌಶಲ್ಯವು ಈ ಉದ್ಯಮದ ಭವಿಷ್ಯದ ಬೆಳವಣಿಗೆಗೆ ಅತ್ಯಂತ ನಿರ್ಣಾಯಕ ಶಕ್ತಿಯಾಗಿದೆ.

ಲ್ಯಾಮ್ ರಿಸರ್ಚ್ ಚಾಲೆಂಜ್ ಸ್ಪರ್ಧೆಯ ವಿಜೇತರ ಘೋಷಣೆ

-

Profile
Ashok Nayak Nov 7, 2026 9:50 PM

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಯುಗವು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸೆಮಿಕಂಡಕ್ಟರ್ ಉದ್ಯಮಕ್ಕೆ ನುರಿತ ತಜ್ಞರ ಬೇಡಿಕೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವೇಫರ್ ಫ್ಯಾಬ್ರಿಕೇಶನ್ ಸಲಕರಣೆಗಳ ಪ್ರಮುಖ ಜಾಗತಿಕ ಪೂರೈಕೆದಾರ ಸಂಸ್ಥೆ ಯಾದ ಲ್ಯಾಮ್ ರಿಸರ್ಚ್, ತನ್ನ ಪ್ರತಿಷ್ಠಿತ 3ನೇ ಆವೃತ್ತಿಯ ಲ್ಯಾಮ್ ರಿಸರ್ಚ್ ಚಾಲೆಂಜ್ ಸ್ಪರ್ಧೆಯ ವಿಜೇತರನ್ನು ಇಂದು ಅಧಿಕೃತವಾಗಿ ಘೋಷಿಸಿದೆ.

ಈ ಸ್ಪರ್ಧೆಯು ಕಂಪನಿಯ ಅತ್ಯುನ್ನತ ಮತ್ತು ಮುಂದುವರಿದ ಸೆಮಿಕಂಡಕ್ಟರ್ ಸಿಸ್ಟಮ್ಸ್ ಸ್ಪರ್ಧೆಯಾಗಿದೆ. ಅತ್ಯಂತ ಸಂಕೀರ್ಣವಾದ ಸೆಮಿಕಂಡಕ್ಟರ್ ಉತ್ಪಾದನಾ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ಅತ್ಯುತ್ತಮವಾಗಿಸಲು ಅಗತ್ಯವಿರುವ ಸಿಸ್ಟಮ್ಸ್ ಎಂಜಿನಿಯರಿಂಗ್ ಕೌಶಲ್ಯಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಈ ಬಾರಿಯ ಸ್ಪರ್ಧೆ ಸಾಬೀತುಪಡಿಸಿದೆ.

ದೇಶದ ಸುಮಾರು 190 ಕಾಲೇಜುಗಳ 3,000ಕ್ಕೂ ಹೆಚ್ಚು ಮಹತ್ವಾಕಾಂಕ್ಷಿ ಯುವ ನಾವೀನ್ಯಕಾರರು ಮತ್ತು ಎಂಜಿನಿಯರ್‌ಗಳು ಈ ವರ್ಷದ ಸವಾಲಿನಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನವೆಂಬರ್ 5 ಮತ್ತು 6 ರಂದು ನಡೆದ ಎರಡು ದಿನಗಳ ಭರ್ಜರಿ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮ ವಿಜೇತರನ್ನು ಘೋಷಿಸಲಾಯಿತು.

ಇದನ್ನೂ ಓದಿ: Lamborghini case: ಲ್ಯಾಂಬೊರ್ಗಿನಿ ಕಾರಿನಲ್ಲಿಯೇ ಹೋಗಿ ರಸ್ತೆ ಕಸ ಗುಡಿಸಿ ಬನ್ನಿ: ಆರೋಪಿಗೆ ಹೈಕೋರ್ಟ್‌ ಸೂಚನೆ

ಅತ್ಯಾಧುನಿಕ ಸೆಮಿಕಂಡಕ್ಟರ್ ಉತ್ಪಾದನಾ ಪ್ರಕ್ರಿಯೆಯು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತ ವಾಗಿರದೆ ಹಾರ್ಡ್‌ವೇರ್, ಸಾಫ್ಟ್‌ವೇರ್, ಆಟೊಮೇಷನ್, ಡೇಟಾ ಸೈನ್ಸ್, ಪ್ರಕ್ರಿಯಾ ಎಂಜಿನಿಯ ರಿಂಗ್ (ಪ್ರೊಸೆಸ್ ಎಂಜಿನಿಯರಿಂಗ್) ಮತ್ತು ಸುಧಾರಿತ ನಿಯಂತ್ರಣ ವ್ಯವಸ್ಥೆಗಳ ಸಮಗ್ರ ಪರಿಣತಿಯನ್ನು ಬೇಡುತ್ತದೆ. ಹೀಗಾಗಿ ಸಿಸ್ಟಮ್ಸ್ ಎಂಜಿನಿಯರಿಂಗ್ ಕೌಶಲ್ಯವು ಈ ಉದ್ಯಮದ ಭವಿಷ್ಯದ ಬೆಳವಣಿಗೆಗೆ ಅತ್ಯಂತ ನಿರ್ಣಾಯಕ ಶಕ್ತಿಯಾಗಿದೆ.

ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಸುಧಾರಿತ ವೇಫರ್ ಫ್ಯಾಬ್ರಿಕೇಶನ್‌ಗೆ ಸಂಬಂಧಿಸಿದ ಕೌಶಲ್ಯಗಳನ್ನು ರೂಪಿಸುವ ಗುರಿಯೊಂದಿಗೆ ಆಯೋಜಿಸಲಾಗುವ ಲ್ಯಾಮ್ ರಿಸರ್ಚ್ ಚಾಲೆಂಜ್, ಭಾರತದ ಅತಿದೊಡ್ಡ ಉದ್ಯಮ-ನೇತೃತ್ವದ ಸೆಮಿಕಂಡಕ್ಟರ್ ಎಂಜಿನಿಯರಿಂಗ್ ಸ್ಪರ್ಧೆಗಳಲ್ಲಿ ಒಂದಾಗಿದೆ. ಕೇವಲ ವೈಯಕ್ತಿಕ ವಿಭಾಗಗಳ ಮೇಲೆ ಕೇಂದ್ರೀಕರಿಸುವ ಸಾಂಪ್ರದಾಯಿಕ ಎಂಜಿನಿ ಯರಿಂಗ್ ಸ್ಪರ್ಧೆಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದ್ದು, ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಸಿಸ್ಟಮ್ಸ್-ಮಟ್ಟದ ಚಿಂತನೆಯನ್ನು ಬೆಳೆಸಲು ಮತ್ತು ಬೃಹತ್ ಪ್ರಮಾಣದ ಉತ್ಪಾದನಾ ಕಾರ್ಯಾಚರಣೆಗಳಲ್ಲಿ ಬಹು ತಂತ್ರಜ್ಞಾನಗಳು ಹಾಗೂ ವಿಭಾಗಗಳು ಹೇಗೆ ಪರಸ್ಪರ ಸಂವಹನ ನಡೆಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುತ್ತದೆ.

ಅರ್ಹತಾ ಸುತ್ತುಗಳು ಹಾಗೂ ಹಾರ್ಡ್‌ವೇರ್ ನಿರ್ಮಾಣದ ಹಂತಗಳನ್ನು ಒಳಗೊಂಡಂತೆ ಬರೋಬ್ಬರಿ ಮೂರು ತಿಂಗಳ ಕಾಲ ನಡೆದ ಕಠಿಣ ಬಹು-ಹಂತದ ಪೈಪೋಟಿಯ ಬಳಿಕ ಆಯ್ದ ತಂಡಗಳು ಅಂತಿಮ ಹಂತಕ್ಕೆ ತೇರ್ಗಡೆಯಾದವು.

ಸ್ಪರ್ಧೆಯ ಪ್ರಮುಖ ಮುಖ್ಯಾಂಶಗಳು:

ಪ್ರತಿಯೊಂದು ತಂಡವು ವಿವಿಧ ವಿಭಾಗಗಳ (ಮಲ್ಟಿ-ಡಿಸಿಪ್ಲಿನರಿ) ಹಿನ್ನೆಲೆಯ ನಾಲ್ವರು ವಿದ್ಯಾರ್ಥಿಗಳನ್ನು ಒಳಗೊಂಡಿತ್ತು.

ಅಂತಿಮ ಸುತ್ತಿಗೆ ಕೇವಲ 25 ತಂಡಗಳನ್ನು ಆಯ್ಕೆ ಮಾಡಲಾಯಿತು.

23 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 189 ಕಾಲೇಜುಗಳ ಒಟ್ಟು 803 ತಂಡಗಳ ಪೈಕಿ 10 ಐಐಟಿಗಳು, 2 ಎನ್‌ಐಟಿಗಳು ಹಾಗೂ 2 ಬಿಟ್ಸ್ ಕ್ಯಾಂಪಸ್‌ಗಳು ಸೇರಿದಂತೆ ಒಟ್ಟು 20 ಕಾಲೇಜು ಗಳ ವಿದ್ಯಾರ್ಥಿಗಳು ಅಂತಿಮ ಸ್ಪರ್ಧಿಗಳಾಗಿ ಸ್ಥಾನ ಪಡೆದಿದ್ದರು.

ಅಂತಿಮ ಹಣಾಹಣಿಯ ವೇಳೆ ಸ್ಪರ್ಧಿಗಳು ಸಂಕೀರ್ಣ ತಾಂತ್ರಿಕ ಸವಾಲುಗಳಿಗೆ ನಾವೀನ್ಯ ಪರಿಹಾರಗಳನ್ನು ರೂಪಿಸುವ ಮೂಲಕ ತಮ್ಮ ಸೃಜನಶೀಲತೆ, ಎಂಜಿನಿಯರಿಂಗ್ ಕಾರ್ಯಾಚರಣಾ ದಕ್ಷತೆ ಮತ್ತು ಕಲ್ಪನೆಗಳನ್ನು ವಾಸ್ತವ ಫಲಿತಾಂಶಗಳನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ನಾವೀನ್ಯತೆ, ತಾಂತ್ರಿಕ ಶ್ರೇಷ್ಠತೆ, ಪರಸ್ಪರ ಸಹಯೋಗ, ಸಮಸ್ಯೆ-ಪರಿಹರಿಸುವ ನೈಪುಣ್ಯತೆ ಮತ್ತು ಒತ್ತಡದ ಸಂದರ್ಭದಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಯೋಜನೆ ಗಳನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡಲಾಯಿತು.

ಐಐಟಿ ಗುವಾಹಟಿ ಒಟ್ಟಾರೆ ವಿಜೇತರಾಗಿ ಹೊರಹೊಮ್ಮಿತು. ಐಐಟಿ ರೋಪರ್ (ರನ್ನರ್-ಅಪ್) ಮತ್ತು ಎನ್‌ಐಟಿ ಕ್ಯಾಲಿಕಟ್ (ಎರಡನೇ ರನ್ನರ್-ಅಪ್) ಉಳಿದ ಅಗ್ರ ಸ್ಥಾನಗಳನ್ನು ಪಡೆದು ಕೊಂಡವು.. ವಿಜೇತರು ಒಟ್ಟು 10 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಹಂಚಿ ಕೊಂಡರು. ಜೊತೆಗೆ, ಈ ಸಮೂಹದಿಂದ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಾಗತಿಕ ವೇಫರ್ ಫ್ಯಾಬ್ರಿಕೇಶನ್ ಉಪಕರಣಗಳ ನಾಯಕ ಸಂಸ್ಥೆಯಾದ ಲ್ಯಾಮ್ ರಿಸರ್ಚ್‌ನಲ್ಲಿ ಇಂಟರ್ನ್‌ ಶಿಪ್ ಮಾಡುವ ಅಪರೂಪದ ಅವಕಾಶವನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಲ್ಯಾಮ್ ರಿಸರ್ಚ್ ಇಂಡಿಯಾದ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರಂಗೇಶ್ ರಾಘವನ್ ಅವರು, "ಲ್ಯಾಮ್ ರಿಸರ್ಚ್ ಚಾಲೆಂಜ್ 2026ರ ಎಲ್ಲಾ ಸ್ಪರ್ಧಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳು. ಸೆಮಿಕಂಡಕ್ಟರ್ ಉತ್ಪಾದನೆಯು ಇಂದಿನ ಜಗತ್ತಿನ ಅತ್ಯಂತ ಸುಧಾರಿತ ಎಂಜಿನಿಯರಿಂಗ್ ಪರಿಸರಗಳಲ್ಲಿ ಒಂದಾಗಿದ್ದು, ಸಿಸ್ಟಮ್ಸ್-ಮಟ್ಟದ ಸಂಕೀರ್ಣ ಸವಾಲುಗಳನ್ನು ನಿವಾರಿಸಬಲ್ಲ ನೈಜ ಪ್ರತಿಭೆಗಳ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ನಮ್ಮ ಉದ್ಯಮದ ಭವಿಷ್ಯವನ್ನು ರೂಪಿಸುವ ವಾಸ್ತವ ಎಂಜಿನಿಯರಿಂಗ್ ಸವಾಲುಗಳ ನೇರ ಅನುಭವ ನೀಡುತ್ತಲೇ, ಇಂತಹ ಉನ್ನತ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ನೆರವಾಗುವಂತೆ ಈ ಚಾಲೆಂಜ್ ಅನ್ನು ರೂಪಿಸಲಾಗಿದೆ. ಮುಂದಿನ ಪೀಳಿಗೆಯ ನಾವೀನ್ಯಕಾರರನ್ನು ಸದಾ ಪ್ರೇರೇಪಿಸುವ ನಮ್ಮ ಬದ್ಧತೆಯನ್ನು ಇದು ಮತ್ತಷ್ಟು ಎತ್ತಿಹಿಡಿಯುತ್ತದೆ" ಎಂದು ಅವರು ವಿವರಿಸಿದರು.

ಎಐ ಯುಗದಲ್ಲಿ ಸಿಸ್ಟಮ್ಸ್ ಎಂಜಿನಿಯರಿಂಗ್ ಏಕೆ ಮಹತ್ವದ್ದು?

ಉದ್ಯಮಕ್ಕೆ ಅಗತ್ಯವಿರುವ ಪ್ರತಿಭೆಗಳ ಮಾನದಂಡವು ಸಾಂಪ್ರದಾಯಿಕ ಎಂಜಿನಿಯರಿಂಗ್ ವಿಭಾಗಗಳನ್ನು ಮೀರಿ ಬೆಳೆಯುತ್ತಿದೆ. ಆಧುನಿಕ ಸೆಮಿಕಂಡಕ್ಟರ್ ಉತ್ಪಾದನಾ ವಾತಾವರಣಕ್ಕೆ ಕೇವಲ ಪ್ರತ್ಯೇಕ ಬಿಡಿಭಾಗಗಳನ್ನು ಮಾತ್ರ ನೋಡದೆ, ಇಡೀ ವ್ಯವಸ್ಥೆಯನ್ನು (ಸಿಸ್ಟಮ್) ಪೂರ್ಣ ಪ್ರಮಾಣದಲ್ಲಿ ಗ್ರಹಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸಬಲ್ಲ ಎಂಜಿನಿಯರ್‌ಗಳು ಬೇಕಾಗಿದ್ದಾರೆ. ಇದು ಸಂಕೀರ್ಣ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ತಂತ್ರಜ್ಞಾನಗಳನ್ನು ಒಗ್ಗೂಡಿಸಬಲ್ಲ ಮಾನವ ಶಕ್ತಿಯ ಬೇಡಿಕೆಯನ್ನು ಸೃಷ್ಟಿಸಿದೆ. ಸೆಮಿಕಂಡಕ್ಟರ್ ಉತ್ಪಾದನೆ, ಸುಧಾರಿತ ಪ್ಯಾಕೇಜಿಂಗ್ (ಅಡ್ವಾನ್ಸ್ಡ್ ಪ್ಯಾಕೇಜಿಂಗ್), ಸಲಕರಣೆ ಎಂಜಿನಿಯರಿಂಗ್ ಮತ್ತು ಒಟ್ಟಾರೆ ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯಲ್ಲಿ ಭಾರತವು ತನ್ನ ಹೆಜ್ಜೆಯನ್ನು ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಭವಿಷ್ಯದ ಈ ಪ್ರತಿಭೆಗಳ ಸರಪಳಿಯನ್ನು ನಿರಂತರವಾಗಿ ಬೆಳೆಸುವುದು ಅತ್ಯಂತ ಅನಿವಾರ್ಯವಾಗಿದೆ.

ಭಾರತದ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗೆ ಕಾರ್ಯಪಡೆಯ ಸಬಲೀಕರಣವೇ ಬೆನ್ನೆಲುಬು

ಸೆಮಿಕಂಡಕ್ಟರ್ ಶಿಕ್ಷಣ, ಸುಧಾರಿತ ಉತ್ಪಾದನಾ ತರಬೇತಿ ಮತ್ತು ಪ್ರಾಯೋಗಿಕ ಸಿಸ್ಟಮ್ಸ್ ಎಂಜಿ ನಿಯರಿಂಗ್ ಸೇರಿದಂತೆ ಸಮಗ್ರ ಕೌಶಲ್ಯ ಉಪಕ್ರಮಗಳ ಮೂಲಕ ಲ್ಯಾಮ್ ರಿಸರ್ಚ್ ಸಂಸ್ಥೆಯು ನುರಿತ ಕಾರ್ಯಪಡೆಯ ನಿರ್ಮಾಣಕ್ಕೆ ಗಟ್ಟಿಯಾದ ಬೆಂಬಲ ನೀಡುತ್ತಿದೆ. ಇವುಗಳಲ್ಲಿ ಮುಖ್ಯವಾಗಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಭಾಗಿತ್ವದಲ್ಲಿ ಭಾರತದಲ್ಲಿ ಜಾರಿಗೆ ತರಲಾಗುತ್ತಿರುವ ಸೆಮಿವರ್ಸ್® ಸೊಲ್ಯೂಷನ್ಸ್ ಸೇರಿದೆ. ಇದು ಮುಂದಿನ ಹತ್ತು ವರ್ಷಗಳಲ್ಲಿ ಬರೋಬ್ಬರಿ 60,000 ಎಂಜಿನಿಯರ್‌ಗಳಿಗೆ ತರಬೇತಿ ನೀಡುವ ಬೃಹತ್ ಗುರಿಯನ್ನು ಹೊಂದಿದೆ. ಇದರ ಜೊತೆಗೆ, ಲ್ಯಾಮ್ ರಿಸರ್ಚ್ ಚಾಲೆಂಜ್ ಹಾಗೂ ಆರಂಭಿಕ ಹಂತದ ಉತ್ಪಾದನಾ ಉದ್ಯೋಗಾವಕಾಶಗಳಿಗಾಗಿ ಉದ್ಯಮ-ಆಧಾರಿತ ತರಬೇತಿ, ಪ್ರಮಾಣಪತ್ರ ಮತ್ತು ಉದ್ಯೋಗ ನಿಯೋಜನೆಗೆ ಬೆಂಬಲ ನೀಡುವ 240 ಗಂಟೆಗಳ ಸುಧಾರಿತ ಉತ್ಪಾದನಾ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವೂ ಸೇರಿದೆ. ಒಟ್ಟಾರೆಯಾಗಿ, ಈ ಎಲ್ಲಾ ಉಪಕ್ರಮಗಳು ಭಾರತ ದಲ್ಲಿ ವೇಗವಾಗಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಅಗತ್ಯವಿರುವ ಸದೃಢ ಪ್ರತಿಭಾ ಪಡೆಯನ್ನು ಸಜ್ಜುಗೊಳಿಸಲು ಪ್ರಮುಖ ಪಾತ್ರ ವಹಿಸುತ್ತಿವೆ.