ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mitchell Starc: ಕೆಣಕಿದ ಜೈಸ್ವಾಲ್ ಕುರಿತು ಮಿಚೆಲ್ ಸ್ಟಾರ್ಕ್ ಮೊದಲ ಪ್ರತಿಕ್ರಿಯೆ

Mitchell Starc: ʼಜೈಸ್ವಾಲ್ ಭಾರತದ ಭವಿಷ್ಯದ ಆಟಗಾರ. ಅವರು ಇಲ್ಲಿನ ಪರಿಸ್ಥಿತಿಯನ್ನು ಚೆನ್ನಾಗಿ ಗ್ರಹಿಸಿ ಉತ್ತಮವಾಗಿ ಆಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಬೆಳೆದು ಬರುತ್ತಿರುವ 'ಫಿಯರ್‌ಲೆಸ್ ಯುವ ಕ್ರಿಕೆಟಿಗ' ಎಂದು ಜೈಸ್ವಾಲ್‌ ಸಾಧನೆಯನ್ನು ಸ್ಟಾರ್ಕ್‌ ಕೊಂಡಾಡಿದರು.

Abhilash BC Abhilash BC Dec 5, 2024 4:55 PM
ಅಡಿಲೇಡ್: ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(Yashasvi Jaiswal) ಆಸೀಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌(Mitchell Starc) ಅವರನ್ನು ಕೆಣಕ್ಕಿದ್ದರು. 'ನೀನು ತುಂಬಾ ಸ್ಲೋ ಬೌಲಿಂಗ್ (ನಿಧಾನಗತಿಯಲ್ಲಿ) ಮಾಡುತ್ತೀಯಾ' ಎಂದು ಜೈಸ್ವಾಲ್‌ ಅವರು ಸ್ಟಾರ್ಕ್‌ಗೆ ಹೇಳಿದ್ದರು. ಈ ಕುರಿತು ಮೊದಲ ಬಾರಿಗೆ ಸ್ಟಾರ್ಕ್ ಮೌನ ಮುರಿದಿದ್ದಾರೆ.
'ಪರ್ತ್ ಪಂದ್ಯದಲ್ಲಿ ಜೈಸ್ವಾಲ್ ಅವರ ಮಾತುಗಳು ಕೇಳಿಸಿರಲಿಲ್ಲ. ಈ ಹಿಂದೆ ನಾನು ಕೆಣಕಿದ ಆಟಗಾರರನ್ನು ಸುಮ್ಮನೇ ಬಿಡುತ್ತಿರಲಿಲ್ಲ. ಈಗ ಹೆಚ್ಚೇನು ಕೆಣಕಲು ಹೋಗುವುದಿಲ್ಲʼ ಎಂದು ಸ್ಟಾರ್ಕ್‌ ನಗುಮೊಗದಿಂದಲೇ ಉತ್ತರಿಸಿದ್ದಾರೆ.
ʼಜೈಸ್ವಾಲ್ ಭಾರತದ ಭವಿಷ್ಯದ ಆಟಗಾರ. ಅವರು ಇಲ್ಲಿನ ಪರಿಸ್ಥಿತಿಯನ್ನು ಚೆನ್ನಾಗಿ ಗ್ರಹಿಸಿ ಉತ್ತಮವಾಗಿ ಆಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಬೆಳೆದು ಬರುತ್ತಿರುವ 'ಫಿಯರ್‌ಲೆಸ್ ಯುವ ಕ್ರಿಕೆಟಿಗ' ಎಂದು ಜೈಸ್ವಾಲ್‌ ಸಾಧನೆಯನ್ನು ಸ್ಟಾರ್ಕ್‌ ಕೊಂಡಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಜೈಸ್ವಾಲ್ ದ್ವಿತೀಯ ಇನಿಂಗ್ಸ್‌ನಲ್ಲಿ ಅಮೋಘ ಶತಕ (161) ಗಳಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಾಧನೆ ಮಾಡಿದ್ದರು.
ಇದನ್ನೂ ಓದಿ AUS vs IND: ಅಡಿಲೇಡ್‌ ಟೆಸ್ಟ್‌ನಲ್ಲೂ ರಾಹುಲ್‌ ಓಪನರ್‌; ಖಚಿತಪಡಿಸಿದ ನಾಯಕ ರೋಹಿತ್‌
https://twitter.com/cricketcomau/status/1864448095288738285
ದ್ವಿತೀಯ ಟೆಸ್ಟ್‌ ಪಂದ್ಯ ನಾಳೆ ಅಡಿಲೇಡ್‌ ಮೈದಾನದಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯದಂತೇ ಜೈಸ್ವಾಲ್‌ ಮತ್ತು ರಾಹುಲ್‌ ಭಾರತ ಇನಿಂಗ್ಸ್‌ ಆರಂಭಿಸಲಿದ್ದಾರೆ. ನಾಯಕ ರೋಹಿತ್‌ ಶರ್ಮ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಇದನ್ನು ಈಗಾಗಕೇ ರೋಹಿತ್‌ ಖಚಿತಪಡಿಸಿದ್ದಾರೆ. ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ಗೆ ಇದು ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯವಾಗಿದೆ. ಹೀಗಾಗಿ ಉಭಯ ಆಟಗಾರರ ಬ್ಯಾಟಿಂಗ್‌ ಪ್ರದರ್ಶನ ಮೇಲೆ ಭಾರೀ ಕುತೂಹಲವಿದೆ.
ಆಸ್ಟ್ರೇಲಿಯಾ ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ತಂಡದಲ್ಲಿ ಏಕಮಾತ್ರ ಬದಲಾವಣೆ ಮಾಡಿದೆ. ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ಜೋಶ್ ಹ್ಯಾಜಲ್‌ವುಡ್ ಸ್ಥಾನಕ್ಕೆ ವೇಗಿ ಸ್ಕಾಟ್ ಬೋಲ್ಯಾಂಡ್ ಆಗಮಿಸಿದ್ದಾರೆ. ಈ ಮೂಲಕ 18 ತಿಂಗಳ ಬಳಿಕ ಬೋಲ್ಯಾಂಡ್ ಆಸ್ಟ್ರೇಲಿಯಾ ತಂಡಕ್ಕೆ ಪುನರಾಗಮನ ಮಾಡಿದರು. ಫಿಟ್‌ನೆಸ್‌ ಆತಂಕದಲ್ಲಿದ್ದ ಮಿಷೆಲ್ ಮಾರ್ಷ್ ಫಿಟ್‌ ಆಗಿದ್ದು ತಂಡದಲ್ಲೇ ಮುಂದುವರಿದಿದ್ದಾರೆ.
ಆಸ್ಟ್ರೇಲಿಯಾ ಆಡುವ ಬಳಗ
ಉಸ್ಮಾನ್ ಖ್ವಾಜಾ, ನೇಥನ್ ಮೆಕ್‌ಸ್ವೀನಿ, ಮಾರ್ನಲ್ ಲಾಬುಶೇನ್‌, ಸ್ಟೀವನ್‌ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಥಾನ್ ಲಿಯೋನ್‌, ಸ್ಕಾಟ್ ಬೋಲ್ಯಾಂಡ್.