ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದ ಗ್ಯಾಂಗ್​ಸ್ಟರ್‌ಗಳ ಜತೆ ಸಂಪರ್ಕ; ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ಪಾಕಿಸ್ತಾನದ ವ್ಯಕ್ತಿಗಳೊಂದಿಗೆ ನಂಟಿರಬಹುದು ಎಂಬ ಸಂಶಯದ ಹಿನ್ನೆಲೆ ಬಂಧಿತನ ಮೊಬೈಲ್ ಪರಿಶೀಲನೆ ಮಾಡಿದಾಗ ಆತ ಪಾಕಿಸ್ತಾನದ ಗ್ಯಾಂಗ್​ಸ್ಟರ್‌ಗಳ ಇನ್​​​ಸ್ಟಾಗ್ರಾಂ​ನಲ್ಲಿ ಲೈಕ್ ಮತ್ತು ವಿಡಿಯೋಗಳ ಸ್ಟೇಟಸ್ ಹಾಕಿಕೊಂಡಿರುವುದು ಗೊತ್ತಾಗಿದೆ. ಸದ್ಯ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪಾಕಿಸ್ತಾನದ ಗ್ಯಾಂಗ್​ಸ್ಟರ್‌ಗಳ ಜತೆ ಸಂಪರ್ಕ; ವ್ಯಕ್ತಿ ಬಂಧನ

-

Prabhakara R
Prabhakara R Aug 22, 2026 11:09 PM

ದೊಡ್ಡಬಳ್ಳಾಪುರ: ಪಾಕಿಸ್ತಾನದ ಗ್ಯಾಂಗ್​ಸ್ಟರ್‌ಗಳ ಜತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ದೊಡ್ಡಬಳ್ಳಾಪುರದಲ್ಲಿ (Doddaballapur) ಪೊಲೀಸರು ಬಂಧಿಸಿದ್ದಾರೆ. ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ ಆರೋಪಿ. ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ ಅಧಿಕಾರಿಗಳ ಮಾಹಿತಿ ಮೇರೆಗೆ ವ್ಯಕ್ತಿಯನ್ನು ಬಂಧಿಸಲಾಗಿದೆ.

ಪಾಕಿಸ್ತಾನದ ವ್ಯಕ್ತಿಗಳೊಂದಿಗೆ ನಂಟಿರಬಹುದು ಎಂಬ ಸಂಶಯದ ಹಿನ್ನೆಲೆ ಬಂಧಿತನ ಮೊಬೈಲ್ ಪರಿಶೀಲನೆ ಮಾಡಿದಾಗ ಆತ ಪಾಕಿಸ್ತಾನದ ಗ್ಯಾಂಗ್​ಸ್ಟರ್‌ಗಳ ಇನ್​​​ಸ್ಟಾಗ್ರಾಂ​ನಲ್ಲಿ ಲೈಕ್ ಮತ್ತು ವಿಡಿಯೋಗಳ ಸ್ಟೇಟಸ್ ಹಾಕಿಕೊಂಡಿರುವುದು ಗೊತ್ತಾಗಿದೆ. ಅಲ್ಲದೇ ಗನ್​ಗಳ ಬಗ್ಗೆ ಆಸಕ್ತಿ ಇರುವುದು ಕೂಡ ಪತ್ತೆಯಾಗಿದೆ. ಈ ಹಿನ್ನೆಲೆ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಧಿತ ಆರೋಪಿಯು ಎಸಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸೈಯದ್ ಅಬೂಬಕರ್ ತನ್ನ ಮೊಬೈಲ್​ನಲ್ಲಿ sayedabudakar313 ಹೆಸರಿವ ಇನ್‌ಸ್ಟಾಗ್ರಾಂ ಅಕೌಂಟ್ ಬಳಸುತ್ತಿದ್ದ. Hammadmemon 333 ಹೆಸರಿನ ವ್ಯಕ್ತಿ ಇನ್​​​ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದ ವಿಡಿಯೋ ರೀಲ್ಸ್​ಗಳಿಗೆ ಲೈಕ್ ಕೊಟ್ಟು ಈ ವಿಡಿಯೋಗಳನ್ನು ಸ್ಟೇಟಸ್​ ಹಾಕಿಕೊಳ್ಳುತ್ತಿದ್ದ. ಈ ವಿಡಿಯೋಗಳು ಪಾಕಿಸ್ತಾನದ ಗ್ಯಾಂಗ್​ಸ್ಟರ್‌ಗಳಿಗೆ ಸಂಬಂಧಿಸಿದ ವಿಡಿಯೋಗಳಾಗಿದ್ದವು. ಸದ್ಯ ಆರೋಪಿಯ ಮೊಬೈಲ್​ನಲ್ಲಿ ಹಲವು ಪಿಸ್ತೂಲ್​ಗಳ ಫೋಟೋಗಳು ಕೂಡ ಕಂಡು ಬಂದಿವೆ. ಈತನಿಗೆ ಬಂದೂಕು ಮತ್ತು ಪಿಸ್ತೂಲ್​ಗಳ ಬಗ್ಗೆ ಆಸಕ್ತಿ ಇದ್ದು, ಮುಂದಿನ ದಿನಗಳಲ್ಲಿ ದೇಶದ ವಿರುದ್ಧ ಯುವಕರನ್ನ ಎತ್ತಿಕಟ್ಟುವ ಹಾಗೂ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೃತ್ಯಗಳನ್ನು ನಡೆಸುವ ಸಾಧ್ಯತೆ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.