ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Death by Heart Attack: ಆಟ ಆಡುತ್ತಿರುವಾಗ ಎದೆನೋವಿನಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ಹೃದಯ ವೈಫಲ್ಯದಿಂದ ಶಾಕಿಂಗ್‌ ಅನಿಸುವ ರೀತಿಯಲ್ಲಿ ಮೃತಪಡುತ್ತಿರುವ ಘಟನೆಗಳು ಇತ್ತೀಚೆಗೆ ಬಹಳಷ್ಟು ನಡೆಯುತ್ತಿವೆ. ದಕ್ಷಿಣ ಕನ್ನಡದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಇದೇ ರೀತಿ ಆಟವಾಡುತ್ತಿರುವಾಗ ಎದೆನೋವು (Heart Attack) ಕಾಣಿಸಿಕೊಂಡು ಮೃತಪಟ್ಟಿದ್ದಾನೆ.

ಆಟ ಆಡುತ್ತಿರುವಾಗ ಎದೆನೋವಿನಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ May 5, 2025 8:34 AM

ದಕ್ಷಿಣ ಕನ್ನಡ: ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ (SSLC Student) ಆಟ ಆಡುತ್ತಿರುವಾಗಲೇ ಎದೆನೋವಿನಿಂದ ಕುಸಿದು ಬಿದ್ದು ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ಎಂಬಲ್ಲಿ ನಡೆದಿದೆ. ಜೋಡುಸ್ಥಾನದ ಪ್ರಥಮ್ (16) ಮೃತ ಬಾಲಕನಾಗಿದ್ದು, ಭಾನುವಾರ ಮಧ್ಯಾಹ್ನ ಮನೆಯ ಸಮೀಪ ಆಟವಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ (Student death) ಮೃತಪಟ್ಟಿದ್ದಾನೆ.

ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ಹೃದಯಾಘಾತದಿಂದ ಶಾಕಿಂಗ್‌ ಅನಿಸುವ ರೀತಿಯಲ್ಲಿ ಮೃತಪಡುತ್ತಿರುವ ಘಟನೆಗಳು ಇತ್ತೀಚೆಗೆ ಬಹಳಷ್ಟು ನಡೆಯುತ್ತಿವೆ. ಮೈಸೂರಿನ ರಾವಂದೂರು ಎಂಬಲ್ಲಿ ಜನವರಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ಹೀಗೇ ಹೃದಯವೈಫಲ್ಯದಿಂದ ಸಾವನ್ನಪ್ಪಿದ್ದಳು. ಕಲಬುರಗಿಯಲ್ಲಿ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ, ತುಮಕೂರು ಜಿಲ್ಲೆಯ ಚಿಕ್ಕನಾಯನಹಳ್ಳಿ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದರು. ಕೊಪ್ಪಳದಲ್ಲಿ ಇನ್ನೊಂದು ಶಾಕಿಂಗ್ ಘಟನೆ ಇತ್ತೀಚೆಗೆ ನಡೆದಿತ್ತು. ಅಂಗನವಾಡಿಯಲ್ಲಿ ಆಟ ಆಡುತ್ತಿದ್ದಾಗ ಕುಸಿದು ಬಿದ್ದು 5 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಳು.

ನೀರು ಕುಡಿಯಲು ಹೋದ ಮೂವರು ಬಾಲಕರು ಮುಳುಗಿ ಸಾವು

ಯಾದಗಿರಿ: ನೀರು ಕುಡಿಯಲು ಹೋಗಿದ್ದ ಮೂವರು ಬಾಲಕರು ನೀರಿನ ಹೊಂಡಕ್ಕೆ ಬಿದ್ದು ದುರ್ಮರಣ ಹೊಂದಿದ (Drowned) ಧಾರುಣ ಘಟನೆ ಜಿಲ್ಲೆಯಲ್ಲಿ ಭಾನುವಾರ (ಮೇ 4) ನಡೆದಿದೆ (Yadagiri News). ಯಾದಗಿರಿ ತಾಲೂಕಿನ ಅಚೋಲಾದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಅಚ್ಚೊಲಾ ತಾಂಡಾದ ನಿವಾಸಿಗಳಾದ ಅಮರ್ (12) ಜಯ ರಾಠೋಡ (14) ಕೃಷ್ಣ ರಾಠೋಡ್(10) ಎಂದು ಗುರುತಿಸಲಾಗಿದೆ. ಕುರಿ ಕಾಯಲು ಹೋಗಿದ್ದ ಬಾಲಕರು ನೀರು ಕುಡಿಯಲೆಂದು ತೆರಳಿದ್ದ ವೇಳೆ ಈ ಅನಾಹುತ ಸಂಭವಿಸಿದೆ.

ಬೇಸಗೆ ಹಿನ್ನೆಲೆಯಲ್ಲಿ ಬಾಲಕರು ದಾಹ ತಣಿಸಿಕೊಳ್ಳಲು ನೀರು ಕುಡಿಯಲು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ. ನೀರಿನ ಹೊಂಡಕ್ಕೆ ನೀರು ಕುಡಿಯಲು ಹೋಗಿದ್ದ ಬಾಲಕರು ಕಾಲು ಜಾರಿ ಬಿದ್ದಿರುವ ಸಾಧ್ಯತೆ ಇದೆ. ಮೃತ ಬಾಲಕರ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಯಾದಗಿರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Santhara Ritual : ಸಂತಾರ ಪಾಲಿಸಿದ 3 ವರ್ಷದ ಬಾಲಕಿ ಸಾವು; ಏನಿದು ಘಟನೆ?