Physical Abuse: 10ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ-ಚರ್ಚ್ ಪಾದ್ರಿಯಿಂದಲೇ ಹೀನ ಕೃತ್ಯ!
Tamil Nadu Pastor: ಚರ್ಚ್‌ನಲ್ಲಿಯೇ ಸುಮಾರು 10ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ(Physical Abuse) ನಡೆದಿರುವ ಘೋರ ಘಟನೆಯೊಂದು ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. 54 ವರ್ಷದ ಸ್ವಯಂ ಘೋಷಿತ ಧಾರ್ಮಿಕ ಪ್ರಚಾರಕ ವಿಕ್ಟರ್ ಕಾಮರಾಜ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ತನ್ನ ಮನೆಯನ್ನೇ ಚರ್ಚ್ ಮಾಡಿಕೊಂಡು ಅದನ್ನು ನಡೆಸುತ್ತಿದ್ದ ಕಾಮರಾಜ್, ಶಾಲಾ ಬಾಲಕಿಯರಿಗೆ ಸಂಜೆ ತರಗತಿಗಳ ಸಮಯದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.


ಚೆನ್ನೈ: ಸತ್ಯ, ಧರ್ಮ, ನೀತಿಯನ್ನು ಬೋಧಿಸುವ ಚರ್ಚ್‌ನಲ್ಲಿಯೇ ಸುಮಾರು 10ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ(Physical Abuse) ನಡೆದಿರುವ ಘೋರ ಘಟನೆಯೊಂದು ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ಇನ್ನು ಈ ಹೀನ ಕೃತ್ಯವನ್ನು ಎಸಗಿದವನು ಬೇರೆ ಯಾರೂ ಅಲ್ಲ ಆ ಚರ್ಚ್‌ನ ಪಾದ್ರಿಯೇ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಸೆಂಗುನ್ರಾಮ್ ಬಳಿ ಘಟನೆ ನಡೆದಿದ್ದು, 54 ವರ್ಷದ ಸ್ವಯಂ ಘೋಷಿತ ಧಾರ್ಮಿಕ ಪ್ರಚಾರಕ ವಿಕ್ಟರ್ ಕಾಮರಾಜ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ತನ್ನ ಮನೆಯನ್ನೇ ಚರ್ಚ್ ಮಾಡಿಕೊಂಡು ಅದನ್ನು ನಡೆಸುತ್ತಿದ್ದ ಕಾಮರಾಜ್, ಶಾಲಾ ಬಾಲಕಿಯರಿಗೆ ಸಂಜೆ ತರಗತಿಗಳ ಸಮಯದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದೀಗ ಬಾಲಕಿಯರ ಪೋಷಕರು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.
ಇನ್ನು ಕಾಮರಾಜ್‌ನ ಮೊಬೈಲ್‌ನಲ್ಲಿ ಘಟನೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಇವೆ ಎನ್ನಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳ ಲೈಂಗಿಕ ಕಿರುಕುಳವನ್ನು ದೃಢಪಡಿಸುವ ಮಾಹಿತಿ ಇದೆ ಎಂದು ವರದಿಯಾಗಿದೆ. ಪೊಲೀಸರು ಕಾಮರಾಜ್ ಅವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಬಂಧಿಸಿದರು. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಪ್ರಸ್ತುತ ಪುಝಲ್ ಜೈಲಿನಲ್ಲಿ ಇರಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Digital Arrest: ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ
ಕೆಲವೇ ದಿನಗಳ ಹಿಂದೆ ತಮಿಳುನಾಡಿನಲ್ಲಿ ಇಂತಹದ್ದೇ ಒಂದು ಭಯಾನಕ ಘಟನೆಯೊಂದು ವರದಿಯಾಗಿತ್ತು. ಕನಕಮ್ಮ ಛಥಿರಾಮ್ ಪ್ರದೇಶದಲ್ಲಿ ಚೆನ್ನೈ-ತಿರುಪತಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕೆಲಸ ನಡೆಯುತ್ತಿದೆ. ಹೆದ್ದಾರಿ ಕಾಮಗಾರಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಡೆದುಕೊಂಡು ಹೋಗುತ್ತಿದ್ದ 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆಕೆಯ ಕಿರುಚಾಟ ಕೇಳಿ ಸ್ಥಳೀಯ ಗ್ರಾಮಸ್ಥರು ಓಡಿ ಬಂದಿದ್ದಾರೆ. ಆಗ ಕಿಡಿಗೇಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ಬೆನ್ನಟ್ಟಿ ಹಿಡಿದು, ಗ್ರಾಮಸ್ಥರು ಅವನನ್ನು ಹಿಡಿದು, ನಂತರ ಪೊಲೀಸರಿಗೆ ಒಪ್ಪಿಸಿದರು.