ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಮೊಹಮ್ಮದ್ ಶಮಿ ಸ್ಥಾನವನ್ನು ನಿತೀಶ್ ರಾಣಾ ತುಂಬಲಾರರುʼ: ಮನೋಜ್ ತಿವಾರಿ!

ಗೌತಮ್ ಗಂಭೀರ್ ಅವರು ನಿತೀಶ್ ರಾಣಾ ಅವರಿಗೆ ಭಾರತ ಏಕದಿನ ತಂಡದಲ್ಲಿ ಅವಕಾಶ ನೀಡಿರುವುದು ವ್ಯಾಪಾಕ ಟೀಕೆಗೆ ಗುರಿಯಾಗಿದೆ. ಇದೀಗ ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ, ಮೊಹಮ್ಮದ್ ಶಮಿ ಅವರ ಸ್ಥಾನವನ್ನು ನಿತೀಶ್ ರಾಣಾ ತುಂಬಲು ಸಾಧ್ಯವಿಲ್ಲ.

ಗೌತಮ್‌ ಗಂಭೀರ್‌ ವಿರುದ್ಧ ಗುಡುಗಿದ ಮನೋಜ್‌ ತಿವಾರಿ!

ಗೌತಮ್‌ ಗಂಭೀರ್‌ ವಿರುದ್ಧಗುಡುಗಿದ ಮನೋಜ್‌ ತಿವಾರಿ. -

Profile
Ramesh Kote Jan 23, 2026 8:16 PM

ನವದೆಹಲಿ: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ಆಯ್ಕೆಗಳು ಹಲವರಲ್ಲಿ ಅಸಮಾಧಾನ ಸ್ಫೋಟಗೊಳ್ಳಲು ಕಾರಣವಾಗಿವೆ. ಭಾರತ ತಂಡದಲ್ಲಿ ನಿರಂತರ ಬದಲಾವಣೆ ಪ್ರಯೋಗ ಮಾಡುತ್ತಿರುವ ಅವರು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿ ವ್ಯಾಪಾಕ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚಿಗೆ ಭಾರತ ತಂಡದಲ್ಲಿ ಗಂಭೀರ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಆಟಗಾರರಿಗೆ ಹೆಚ್ಚು ಮಣೆ ಹಾಕುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ಅದರಂತೆ ಟೀಮ್ ಇಂಡಿಯಾ ಮಾಜಿ ಆಟಗಾರ ಮನೋಜ್ ತಿವಾರಿ ಮಾತನಾಡಿ, ನಿತೀಶ್ ರಾಣಾ ಅವರು ಮೊಹಮ್ಮದ್ ಶಮಿ (Mohammed Shami) ಸ್ಥಾನ ತುಂಬಲು ಸಾಧ್ಯವಿಲ್ಲ. ರಾಣಾ ಆಲ್‌ರೌಂಡರ್ ಕಾರ್ಯ ನಿರ್ವಹಿಸಿದರೂ, ಬೌಲಿಂಗ್ ವಿಭಾಗ ಶಮಿ ಅವರಿಲ್ಲದೆ ಬಲಿಷ್ಠವಾಗಲು ಸಾಧ್ಯವಿಲ್ಲ. ಅವರ ಬ್ಯಾಟ್ಂಗ್ ಉತ್ತಮವಾಗಿದ್ದರೂ, ಕಳಪೆ ಬೌಲಿಂಗ್ ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಮನೋಜ್ ತಿವಾರಿ, "ಹರ್ಷಿತ್ ರಾಣಾ ಉತ್ತಮ ಬೌಲ್‌ ಮಾಡುವತ್ತ ಗಮನ ಹರಿಸಬೇಕು. ಅವರು (ಗೌತಮ್ ಗಂಭೀರ್) ರಾಣಾ ಮೇಲೆ ತುಂಬಾ ಹೂಡಿಕೆ ಮಾಡಿದ್ದಾರೆ ಮತ್ತು ಅದು ಸರಿ, ಆದರೆ ಅವರು ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಆಗಲು ಸಾಧ್ಯವಿಲ್ಲ. ಹರ್ಷಿತ್ ಬ್ಯಾಟಿಂಗ್ ಮಾಡಬಲ್ಲರು ಎಂದ ಮಾತ್ರಕ್ಕೆ ಅವರು ಬೌಲಿಂಗ್‌ನಲ್ಲಿ ಇಷ್ಟೊಂದು ರನ್‌ಗಳನ್ನು ಬಿಟ್ಟುಕೊಡುತ್ತಲೇ ಇರುತ್ತಾರೆ. ಆದರೆ ಬ್ಯಾಟ್‌ನೊಂದಿಗೆ ಕೊಡುಗೆ ನೀಡುತ್ತಾರೆ ಎಂದ ಮಾತ್ರಕ್ಕೆ ತಂಡದಲ್ಲಿ ಸ್ಥಾನ ನೀಡುವುದರಲ್ಲಿ ಅರ್ಥವಿಲ್ಲ," ಎಂದು ಹೇಳಿದ್ದಾರೆ.

T20 World Cup 2026: ನ್ಯೂಜಿಲೆಂಡ್‌ ತಂಡದ ಗಾಯಾಳು ಆಡಂ ಮಿಲ್ನೆ ಸ್ಥಾನಕ್ಕೆ ಕೈಲ್‌ ಜೇಮಿಸನ್‌ ಸೇರ್ಪಡೆ!

ಏಕದಿನ ಕ್ರಿಕೆಟ್‌ನಲ್ಲಿ ಹರ್ಷಿತ್ ರಾಣಾ ಅವರ ಸರಾಸರಿ 6.21 ರಷ್ಟಿದ್ದರೆ, ಅವರ ಟಿ20ಐ ಸರಾಸರಿ 10.17 ರಷ್ಟಿದೆ. ಟೆಸ್ಟ್ ಪಂದ್ಯಗಳಲ್ಲಿಯೂ ಸಹ, ಅವರ ಸಾರಾಸರಿ 4.5 ಕ್ಕಿಂತ ಹೆಚ್ಚಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಭಾರತಕ್ಕೆ ಸಾಕಷ್ಟು ಬೌಲಿಂಗ್ ಆಯ್ಕೆಗಳಿವೆ ಮತ್ತು ಬ್ಯಾಕಪ್‌ಗಳು ಇರುವಾಗ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟಗಾರರನ್ನು ಸಿದ್ದಪಡಿಸಬಾರದು ಎಂದು ತಿವಾರಿ ಹೇಳಿದ್ದಾರೆ.

"ಅದು ಅರ್ಥವಿಲ್ಲ. ನನಗೆ ಇನ್ನೂ ಮನವರಿಕೆಯಾಗಿಲ್ಲ. ಭಾರತ ತಂಡವು ಆಟಗಾರನನ್ನು ಸಿದ್ಧಪಡಿಸುವ ಸ್ಥಳವಲ್ಲ. ತಂಡದಲ್ಲಿ ಯಾವುದೇ ಬ್ಯಾಕಪ್ ಇಲ್ಲದಿರುವಾಗ ನೀವು ಆಟಗಾರನನ್ನು ಸಿದ್ಧಪಡಿಸುತ್ತೀರಿ. ಇಲ್ಲಿ, ಅನೇಕ ಬೌಲರ್‌ಗಳಿದ್ದಾರೆ," ಎಂದು ಅವರು ತಿಳಿಸಿದ್ದಾರೆ.

ʻವಿವಾದ ಪರಿಹಾರ ಸಮಿತಿಗೆ ಆಗ್ರಹʼ: ಐಸಿಸಿಗೆ ಮತ್ತೊಂದು ಪತ್ರ ಬರೆದ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ!

ಮೊಹಮ್ಮದ್ ಶಮಿ ಅವರು ಜಸ್‌ಪ್ರೀತ್‌ ಬುಮ್ರಾ ನಂತರ ಭಾರತದ ಎರಡನೇ ಪ್ರಮುಖ ವೇಗಿಯಾಗಿದ್ದರು. ಇದರಲ್ಲಿ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 24 ವಿಕೆಟ್‌ ಪಡೆದಿದ್ದರು. ಆದಾಗ್ಯೂ, ಗಂಭೀರ್ ಅವರ ನಡೆ ವಿಭಿನ್ನವಾಗಿದೆ. ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ಬಲಿಷ್ಠ ಬ್ಯಾಟಿಂಗ್ ಪಡೆಯ ಅಗತ್ಯವಿರುವುದರಿಂದ, ಭಾರತ ತಂಡ 8 ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಅನ್ನು ವಿಸ್ತರಿಸಲು ನೋಡುತ್ತಿದೆ. ರಾಣಾ ಅವರ ಐಪಿಎಲ್ ಪ್ರದರ್ಶನಗಳು ಮತ್ತು ಅವರು ಕೆಲಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಅವರಿಗೆ ಸ್ಥಾನ ನೀಡಲಾಗಿದೆ. ಆದರೆ ಅವರ ಬೌಲಿಂಗ್ ಪ್ರದರ್ಶನ ತೀರಾ ಕಳಪೆಯಾಗಿದೆ.