ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಡಿಪಾರ್ಟ್‌ಮೆಂಟ್‌ನವರ ಕಿರುಕುಳ ಸಹಿಸಲಾಗದೆ ಸಹಾಯವಾಣಿಗೆ ಕರೆ ಮಾಡಿದ ಪೊಲೀಸ್‌ ಅಧಿಕಾರಿ

Viral News: ಜನಸಾಮಾನ್ಯರು ಸಾಮಾನ್ಯವಾಗಿ ತಾವು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ 112ಕ್ಕೆ ಕರೆ ಮಾಡಿ ಪೊಲೀಸರ ಸಹಾಯ ಪಡೆಯುತ್ತಾರೆ. ಆದರೆ ಪೊಲೀಸ್ ಅಧಿಕಾರಿಯೊಬ್ಬರು 112ಕ್ಕೆ ಕರೆ ಮಾಡಿ ಪೊಲೀಸರ ಸಹಾಯ ಕೇಳಿದ ಘಟನೆ ಝಾನ್ಸಿಯ ಪೊಲೀಸ್ ಲೈನ್‍ನಲ್ಲಿ ನಡೆದಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಪೊಲೀಸರ ಕಿರುಕುಳದಿಂದ ಪಾರಾಗಲು 112ಕ್ಕೆ ಕರೆ ಮಾಡಿದ ಪೊಲೀಸ್ ಅಧಿಕಾರಿ

ಸಾಂದರ್ಭಿಕ ಚಿತ್ರ

Profile pavithra Jan 17, 2025 5:59 PM

Source : Free press jounal

ಲಖನೌ, ಜ.17, 2025: ಪೊಲೀಸ್‍ ಅಧಿಕಾರಿಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿಯೊಬ್ಬರು 112ಕ್ಕೆ ಕರೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಝಾನ್ಸಿಯ ಪೊಲೀಸ್ ಲೈನ್‍ನಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿ ಕರೆ ಮಾಡಿ ಪೊಲೀಸ್ ಲೈನ್‍ನಲ್ಲಿ ಹೈಡ್ರಾಮಾ ಶುರು ಮಾಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್(Viral News) ಆಗಿದೆ.

ಕಳೆದ ಎರಡು ದಿನಗಳಿಂದ ಇಲಾಖೆಯ ಹಿರಿಯರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್‍ ಅಧಿಕಾರಿ ಮೋಹಿತ್ ಯಾದವ್ ವಿಡಿಯೊದಲ್ಲಿ ಆರೋಪಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಅನುಭವಿಸಿದ ಕಷ್ಟವನ್ನು ಹೇಳಿಕೊಂಡಿದ್ದಾರೆ. ಅಪರಾಧ ವಿಭಾಗದಲ್ಲಿ ನಿಯೋಜಿತರಾಗಿರುವ ಇನ್ಸ್‌ಪೆಕ್ಟರ್‌ ಮೋಹಿತ್ ಯಾದವ್ ಅವರು ಹಿರಿಯ ಅಧಿಕಾರಿಗಳಿಂದ ಕಿರುಕುಳವನ್ನು ಎದುರಿಸಿದ ನಂತರ ಸಹಾಯಕ್ಕಾಗಿ ಡಯಲ್ 112 ಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.



ಇನ್ಸ್‌ಪೆಕ್ಟರ್‌ ಮೋಹಿತ್ ಯಾದವ್ ಅವರು ನವಾಬಾದ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದು, ಅವರ ರಜೆ ಅರ್ಜಿಯನ್ನು ಉದ್ದೇಶಪೂರ್ವಕವಾಗಿ ಉನ್ನತ ಅಧಿಕಾರಿಗಳಿಗೆ ರವಾನಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ. ವಿಳಂಬದ ಬಗ್ಗೆ ಅವರು ರಿವರ್ಷನ್ ಇನ್ಸ್‌ಪೆಕ್ಟರ್‌ ಅವರನ್ನು ಕೇಳಿದಾಗ, ಅಧಿಕಾರಿ ಅವರನ್ನು ನಿಂದಿಸಿದ್ದಲ್ಲದೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.



ಈ ಘಟನೆಯ ಹಿನ್ನೆಲೆ ಇನ್ಸ್‌ಪೆಕ್ಟರ್‌ ಯಾದವ್ ತುರ್ತು ಪರಿಸ್ಥಿತಿಗಳಿಗಾಗಿ ಮೀಸಲಾದ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ. ಪಿಆರ್‌ವಿ ತಂಡವು ತ್ವರಿತವಾಗಿ ಸ್ಥಳಕ್ಕೆ ಬಂದು ಯಾದವ್‌ ಅವರನ್ನು ಸುರಕ್ಷಿತವಾಗಿ ನವಬಾದ್ ಪೊಲೀಸ್ ಠಾಣೆಗೆ ಕರೆದೊಯ್ದಿದೆ.

ಇತ್ತ ನಗರ ಎಸ್‍ಪಿ (ಪೊಲೀಸ್ ವರಿಷ್ಠಾಧಿಕಾರಿ) ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಅವು ಆಧಾರರಹಿತ ಎಂದು ಹೇಳಿದ್ದಾರೆ. ಅಶಿಸ್ತಿನ ಆರೋಪಗಳು ಸೇರಿದಂತೆ ಯಾದವ್ ವಿರುದ್ಧ ಈಗಾಗಲೇ ಅನೇಕ ತನಿಖೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಘಟನೆಯ ಸಮಯದಲ್ಲಿ ಇನ್ಸ್‌ಪೆಕ್ಟರ್‌ ಯಾದವ್ ರಿವರ್ಷನ್ ಇನ್ಸ್‌ಪೆಕ್ಟರ್‌ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಗರ ಎಸ್‌ಪಿ ಆರೋಪಿಸಿದ್ದಾರೆ. ಈಗ ಈ ವಿಚಾರ ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಕ್ಯಾಮರಾ ನೋಡ್ತಿದ್ದಂತೆ ಎದ್ನೋ ಬಿದ್ನೋ ಅಂತ ಪೊಲೀಸ್‌ ಓಡಿ ಹೋಗಿದ್ದೇಕೆ? ಪಾಕಿಸ್ತಾನದ ಈ ವಿಡಿಯೊ ನೋಡಿ

ಇನ್ಸ್‌ಪೆಕ್ಟರ್‌ ಯಾದವ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಆದರೆ ಅದನ್ನು ಇನ್ನೂ ಸ್ವೀಕರಿಸಲಾಗಿಲ್ಲ. ಈ ನಡುವೆ ಅವರ ಲಿಖಿತ ದೂರಿನ ಆಧಾರದ ಮೇಲೆ ನವಾಬಾದ್ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣವು ಪೊಲೀಸ್ ಪಡೆಯೊಳಗಿನ ಆಂತರಿಕ ಸಂಘರ್ಷಗಳು ಮತ್ತು ಅಧಿಕಾರಿಗಳನ್ನು ನಡೆಸಿಕೊಳ್ಳುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.