ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

RCBW vs DCW, WPL 2026 Final: ಎರಡನೇ ಪ್ರಶಸ್ತಿಗಾಗಿ ಆರ್‌ಸಿಬಿ ವನಿತೆಯರು ಕಣ್ಣು!

RCBW vs DCW WPL 2026 Final: ಲೀಗ್‌ ಹಂತದಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರುವ ಮೂಲಕ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಫೆಬ್ರವರಿ 5 ರಂದು ನಡೆಯುವ ಪ್ರಶಸ್ತಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ.

WPL 2026 Final: ಡೆಲ್ಲಿ ಮಣಿಸುವ ನಿರೀಕ್ಷೆಯಲ್ಲಿ ಆರ್‌ಸಿಬಿ!

ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರ್‌ಸಿಬಿ ವನಿತೆಯರು ಸವಾಲು. -

Profile
Ramesh Kote Feb 4, 2026 9:19 PM

ವಡೋದರ: ಬಹುನಿರೀಕ್ಷಿತ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಟೂರ್ನಿಯ ಫೈನಲ್‌ ಪಂದ್ಯಕ್ಕೆ ಇನ್ನ ಕೆಲವೇ ಗಂಟೆಗಳು ಬಾಕಿ ಇವೆ. ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಸಜ್ಜಾಗುತ್ತಿರುವ ವೇದಿಕೆಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCBW) ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (DCW) ತಂಡಗಳು ಕಾದಾಟ ನಡೆಸಲಿವೆ. ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ವನಿತೆಯರು ಡೆಲ್ಲಿಯನ್ನು ಮಣಿಸಿ ಎರಡನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಜೆಮಿಮಾ ರೊಡ್ರಿಗಸ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌, ಮೂರು ಬಾರಿ ಫೈನಲ್‌ ಸೋಲಿನಿಂದ ಹೊರಬಂದು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಕಾಯುತ್ತಿದೆ.

ಇದು ಡಬ್ಲ್ಯುಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಡಿಸಿ ತಂಡಗಳುು ಮುಖಾಮುಖಿಯಾಗುವ ಎರಡನೇ ಸಂದರ್ಭವಾಗಿದೆ. ಮೊದಲ ಬಾರಿ 2024ರಲ್ಲಿ ನಡೆದಿದ್ದು, ಆ ಪಂದ್ಯದಲ್ಲಿ ಆರ್‌ಸಿಬಿ ಎಂಟು ವಿಕೆಟ್‌ಗಳ ಜಯದೊಂದಿಗೆ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದಿತ್ತು. ಇತ್ತ ಡೆಲ್ಲಿ ತಂಡವು ಎಲ್ಲಾ ನಾಲ್ಕು ಫೈನಲ್‌ಗಳಿಗೆ ಪ್ರವೇಶ ಪಡೆದಿದ್ದರೂ, ಇನ್ನೂ ತನ್ನ ಮೊದಲ ಡಬ್ಲ್ಯುಪಿಎಲ್ ಪ್ರಶಸ್ತಿಗಾಗಿ ಎದುರು ನೋಡುತ್ತಿದೆ.

ಪ್ರಸಕ್ತ ಆವೃತ್ತಿಯ ಲೀಗ್ ಹಂತದ ಆರು ಪಂದ್ಯಗಳ ಜಯದಿಂದ 12 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ ಹಿನ್ನೆಲೆಯಲ್ಲಿ ಆರ್‌ಸಿಬಿ ವನಿತೆಯರು, ಫೈನಲ್‌ಗೆ ನೇರವಾಗಿ ಪ್ರವೇಶ ಮಾಡಿದ್ದಾರೆ. ಯುಪಿ ವಾರಿಯರ್ಸ್ ವಿರುದ್ಧ ಲೀಗ್ ಹಂತದ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.

IND vs AFG: ಅಫ್ಘಾನಿಸ್ತಾನ ತಂಡಕ್ಕೆ 5 ಪೆನಾಲ್ಟಿ ರನ್‌ ಕೊಟ್ಟ ಭಾರತ! ಇದಕ್ಕೆ ಕಾರಣವೇನು?

ಫೈನಲ್‌ ಪಂದ್ಯದವರೆಗೂ ಆರ್‌ಸಿಬಿ ತಂಡವನ್ನು ಮುಂಭಾಗದಿಂದ ಮುನ್ನಡೆಸಿದವರು ಸ್ಮೃತಿ ಮಂಧಾನಾ. ಅವರು ಎಂಟು ಪಂದ್ಯಗಳಲ್ಲಿ 48.33ರ ಸರಾಸರಿಯೊಂದಿಗೆ 290 ರನ್ ಗಳಿಸಿದ್ದಾರೆ. ನದಿನ್ ಡಿ ಕ್ಲರ್ಕ್ ಅವರ ಪ್ರದರ್ಶನ ಆರ್‌ಸಿಬಿ ತಂಡದ ಬೌಲಿಂಗ್‌ನಲ್ಲಿ ಹೈಲೈಟ್ ಆಗಿದ್ದು, ಅವರು 13.53ರ ಸರಾಸರಿ ಮತ್ತು 7.25ೆ ಎಕನಾಮಿ ರೇಟ್‌ನೊಂದಿಗೆ 15 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನನೊಂದಿಗೆ ಲೀಗ್‌ ಹಂತವನ್ನು ಮುಗಿಸಿ ಎಲಿಮಿನೇಟರ್‌ ಪಂದ್ಯಕ್ಕೆ ಅರ್ಹತೆ ಪಡೆದಿತ್ತು. ಅದರಂತೆ ಎಲಿಮಿನೇಟರ್‌ನಲ್ಲಿಯೂ ಬಲಿಷ್ಠ ಗುಜರಾತ್ ಜಯಂಟ್ಸ್‌ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ನಾಲ್ಕನೇ ಬಾರಿ ಅರ್ಹತೆ ಪಡೆದಿತ್ತು. ಎಲಿಮಿನೇಟರ್‌ನಲ್ಲಿ 23 ಎಸೆತಗಳಲ್ಲಿ 41 ರನ್‌ಗಳ ವೇಗದ ಪ್ರದರ್ಶನಕ್ಕೆ ಜೆಮಿಮಾ ರೊಡ್ರಿಗಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ICC T20I Rankings: ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂದಲ್ಲಿ 32 ಸ್ಥಾನ ಏರಿಕೆ ಕಂಡ ಇಶಾನ್‌ ಕಿಶನ್!

ಈ ಸೀಸನ್‌ನಲ್ಲಿ ಡಿಸಿ ತಂಡದ ಪ್ರಮುಖ ಬ್ಯಾಟರ್‌ ಲಿಝೆಲ್‌ ಲೀ, ಇವರು 31.44ರ ಸರಾಸರಿ ಮತ್ತು 141.50ರ ಸ್ಟ್ರೈಕ್‌ ರೇಟ್‌ನಲ್ಲಿ 283 ರನ್ ಗಳಿಸಿದ್ದಾರೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅವರು ಆರ್‌ಸಿಬಿ ಸ್ಮೃತಿ ಮಂಧಾನಾ ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇನ್ನು ಡೆಲ್ಲಿ ಬೌಲಿಂಗ್ ವಿಭಾಗವನ್ನು ನಂದಿನಿ ಶರ್ಮಾ ಮುನ್ನಡೆಸಲಿದ್ದಾರೆ. ಅವರು 16 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಗುಜರಾತ್ ಜಯಂಟ್ಸ್‌ ತಂಡದ ಸೋಫಿ ಡೆವೈನ್ ಒಂದು ವಿಕೆಟ್ ಜಾಸ್ತಿ ಪಡೆದಿದ್ದಾರೆ.

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 10

ಆರ್‌ಸಿಬಿ ಗೆಲುವು: 03

ಡಿಸಿ ಗೆಲುವು: 06

ಫಲಿತಾಂಶವಿಲ್ಲ: 01

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಗ್ರೇಸ್‌ ಹ್ಯಾರಿಸ್‌, ಸ್ಮೃತಿ ಮಂಧಾನಾ (ನಾಯಕಿ), ಜಾರ್ಜಿಯಾ ವಾಲ್‌, ರಿಚಾ ಘೋಷ್‌ (ವಿಕೆಟ್‌ ಕೀಪರ್‌), ರಾಧಾ ಯಾದವ್‌, ನದಿನ್‌ ಡಿ ಕ್ಲರ್ಕ್‌, ಪೂಜಾ ವಸ್ತ್ರಾಕರ್‌, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್‌, ಲಾರೆನ್‌ ಬೆಲ್‌, ಸಯಾಲಿ ಸಾತ್ಘರೆ

ಡೆಲ್ಲಿ ಕ್ಯಾಪಿಟಲ್ಸ್:‌ ಲಿಝೆಲ್‌ ಲೀ, ಶಫಾಲಿ ವರ್ಮಾ, ಲಾರಾ ವಾಲ್ವಾರ್ಡ್ತ್‌, ಜೆಮಿಮಾ ರೊಡ್ರಿಗಸ್‌ (ನಾಯಕಿ), ನಿಕಿ ಪ್ರಸಾದ್‌,ಮಾರಿಜಾನ್‌ ಕಾಪ್‌, ಚಿನೆಲ್ಲೀ ಹೆನ್ರಿ, ಸ್ನೇಹಾ ರಾಣಾ, ನಲ್ಲಪುರೆಡ್ಡಿ ಚರಣಿ, ಮಿನ್ನು ಮಣಿ, ನಂದಿನಿ ಶರ್ಮಾ

ಬಿಸಿಎ ಕ್ರೀಡಾಂಗಣದ ಪಿಚ್‌ ರಿಪೋರ್ಟ್‌

ಇಲ್ಲಿನ ಪಿಚ್‌ ಪಂದ್ಯದ ಪ್ರಥಮ ಇನಿಂಗ್ಸ್‌ನ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ನೆರವು ನೀಡಲಿದೆ. ನಂತರ ಇನಿಂಗ್ಸ್‌ನ ಎರಡನೇ ಭಾಗದಲ್ಲಿ ಮಂಜು ಬರಲಿದ್ದು, ಕಂಡಿಷನ್ಸ್‌ ಸ್ವಲ್ಪ ವಿಭಿನ್ನವಾಗಲಿದೆ. ಇಬ್ಬನಿಯ ಕಾರಣ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಮಿಂಚಲಿದ್ದಾರೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ತಂಡದ ನಾಯಕಿ ಚೇಸಿಂಗ್‌ ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಪಂದ್ಯದ ವಿವರ

2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಫೈನಲ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು VS ಡೆಲ್ಲಿ ಕ್ಯಾಪಿಟಲ್ಸ್‌

ದಿನಾಂಕ: ಫೆಬ್ರವರಿ 05, 2026

ಸಮಯ: ಸಂಜೆ 07: 00

ಸ್ಥಳ: ಬಿಸಿಎ ಕ್ರೀಡಾಂಗಣ, ವಡೋದರ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಹಾಟ್‌ಸ್ಟಾರ್‌