Virat Kohli Test Retire: ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ!
Virat Kohli: ಒಂದು ವೇಳೆ ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಿವೃತ್ತಿ ಘೋಷಿಸಿದರೆ, ಭಾರತೀಯ ಟೆಸ್ಟ್ ತಂಡವು ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿ ಆಟಗಾರರನ್ನು ಕಳೆದುಕೊಳ್ಳಲಿದೆ. ಭವಿಷ್ಯದ ಆಟಗಾರರಾದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಅವರಂತಹ ಆಟಗಾರರನ್ನು ತಂಡ ಹೆಚ್ಚು ಅವಲಂಬಿಸಿ ಪ್ರದರ್ಶನ ನೀಡಬೇಕಿದೆ.


ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅನುಭವಿ ವಿರಾಟ್ ಕೊಹ್ಲಿ ಕೂಡ ಟೆಸ್ಟ್‌ಗೆ ನಿವೃತ್ತಿ ಪ್ರಕಟಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಕೊಹ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನವೇ ಕೊಹ್ಲಿ ಟೆಸ್ಟ್‌ಗೆ ಗುಡ್‌ಬೈ ಹೇಳುವ ಸಾಧ್ಯತೆ ಇದೆ. ಕಳೆದ ವರ್ಷ ರೋಹಿತ್ ಮತ್ತು ವಿರಾಟ್ ಜತೆಯಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.
ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ವಿರಾಟ್ ಕೊಹ್ಲಿ ಅವರೊಂದಿಗೆ ಮಾತನಾಡಿ, ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಕೊಹ್ಲಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಟೆಸ್ಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ ಎಂದು ವರದಿ ಹೇಳಿದೆ.
ಒಂದು ವೇಳೆ ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಿವೃತ್ತಿ ಘೋಷಿಸಿದರೆ, ಭಾರತೀಯ ಟೆಸ್ಟ್ ತಂಡವು ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿ ಆಟಗಾರರನ್ನು ಕಳೆದುಕೊಳ್ಳಲಿದೆ. ಭವಿಷ್ಯದ ಆಟಗಾರರಾದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಅವರಂತಹ ಆಟಗಾರರನ್ನು ತಂಡ ಹೆಚ್ಚು ಅವಲಂಬಿಸಿ ಪ್ರದರ್ಶನ ನೀಡಬೇಕಿದೆ.
2024-25ರ ಟೆಸ್ಟ್ ಋತುವಿನಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾದಲ್ಲಿ ನಡೆದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ರನ್ ಗಳಿಸಲು ಹೆಣಗಾಡಿದ್ದರು. ಐದು ಪಂದ್ಯಗಳಿಂದ ಕೇವಲ 190 ರನ್ ಮಾತ್ರ ಗಳಿಸಿದ್ದರು. ಪರ್ತ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದರೂ, ಆ ಬಳಿಕದ ನಾಲ್ಕು ಪಂದ್ಯಗಳಲ್ಲಿ ಅವರು ಕೇವಲ 85 ರನ್ ಗಳಿಸಿದ್ದರು. ಕೊಹ್ಲಿ ಒಟ್ಟಾರೆ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30 ಶತಕಗಳು ಸೇರಿದಂತೆ 9,230 ರನ್ ಗಳಿಸಿದ್ದಾರೆ.
ಇದನ್ನೂ ಓದಿ IPL 2025: ʻಇನ್ನುಳಿದ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಡಿಸಿʼ-ಬಿಸಿಸಿಐಗೆ ಮೈಕಲ್ ವಾನ್ ಸಲಹೆ!
ರೋಹಿತ್‌ರಿಂದ ತೆರವಾದ ನಾಯಕತ್ವ ಸ್ಥಾನಕ್ಕೆ ಹಲವು ಮಂದಿ ರೇಸ್‌ನಲ್ಲಿದ್ದಾರೆ. ಹಿರಿತನ, ಅನುಭವದ ಆಧಾರದಲ್ಲಿ ಟೆಸ್ಟ್ ನಾಯಕತ್ವ ನೀಡಲು ಬಯಸಿದರೆ ಜಸ್‌ಪ್ರೀತ್ ಬೂಮ್ರಾ, ಕೆ.ಎಲ್.ರಾಹುಲ್ ಮುಂಚೂಣಿಯಲ್ಲಿದ್ದಾರೆ. ಇವರಿಬ್ಬರೂ ತಲಾ 3 ಪಂದ್ಯಗಳಿಗೆ ನಾಯಕರಾಗಿದ್ದಾರೆ. ಸದ್ಯ ಬಿಸಿಸಿಐ ಯುವ ಆಟಗಾರನಿಗೆ ನಾಯಕತ್ವ ನೀಡಲು ಬಯಸಿದೆ ಎನ್ನಲಾಗಿದೆ. ಹಾಗಾದರೆ ಶುಭ್‌ಮನ್ ಗಿಲ್ ಅಥವಾ ರಿಷಭ್ ಪಂತ್‌ಗೆ ಹೊಣೆಗಾರಿಕೆ ಸಿಗಬಹುದು.