ಶ್ರೀಗಂಧದ ಎಣ್ಣೆಯನ್ನು ಚರ್ಮಕ್ಕೆ ಹಚ್ಚುವುದರಿಂದ ಲಾಭವೇನು? ಇಲ್ಲಿದೆ ಮಾಹಿತಿ
Sandalwood Oil For Skin: ಶ್ರೀಗಂಧದ ನಾಡಿನಲ್ಲಿರುವ ನಮಗೆ ಗಂಧದ ಸದ್ಗುಣಗಳ ಬಗ್ಗೆ ಮಾತಾ ಡುವುದೇನಿದೆ, ಎಲ್ಲಾ ಗೊತ್ತು…ಎಂದು ಭಾವಿಸಿದರೆ ತಪ್ಪಾದೀತು. ಗಂಧದ ಕೊರಡೊಂದನ್ನು ತೇಯ್ದು, ದೇವರಿಗೆ ಲೇಪಿಸುವುದೊ, ಅಪರೂಪಕ್ಕೊಮ್ಮೆ ಮುಖಕ್ಕೆ ಲೇಪಿಸುವುದೋ ಬಿಟ್ಟರೆ ಹೆಚ್ಚಿನ ಬಳಕೆ ಯನ್ನೇನು ಮಾಡುವುದಿಲ್ಲ ನಾವು... ಹಳೆಯ ತಲೆಮಾರಿನವರಂತೆ ಗಂಧವನ್ನು ಔಷಧೀಯ ಬಳಕೆಗೂ ಉಪಯೋಗಿಸುವುದಿಲ್ಲ. ಇದಕ್ಕಿಂತ ಮುಖ್ಯವಾಗಿ ಗಂಧದ ಕೊರಡು ಈಗ ಹೆಚ್ಚಿನ ಮನೆಗಳಲ್ಲಿ ಇಲ್ಲವೂ ಇಲ್ಲ. ಹಾಗಾದರೆ ಗಂಧದ ಲಾಭಗಳನ್ನು ದೊರಕಿಸಿಕೊಳ್ಳುವುದು ಹೇಗೆ…
ಸಂಗ್ರಹ ಚಿತ್ರ -
ನವದೆಹಲಿ: ಶ್ರೀಗಂಧದೆಣ್ಣೆಯನ್ನು (Sandalwood Oil For Skin) ಹೊಂದಿದೆಯೆನ್ನಲಾದ ಸಾಬೂನೊಂದು ಇತ್ತೀಚೆಗೆ ಸುದ್ದಿಯಲ್ಲಿತ್ತು. ನಾವೀಗ ಸಾಬೂನಿನ ಸುದ್ದಿಯನ್ನು ಬಿಟ್ಟು, ಗಂಧದೆಣ್ಣೆಯ ವಿಷಯ ಮಾತಾಡೋಣ. ಶ್ರೀಗಂಧದ ನಾಡಿನಲ್ಲಿರುವ ನಮಗೆ ಗಂಧದ ಸದ್ಗುಣಗಳ ಬಗ್ಗೆ ಮಾತಾಡುವುದೇನಿದೆ, ಎಲ್ಲಾ ಗೊತ್ತು. ಎಂದು ಭಾವಿಸಿದರೆ ತಪ್ಪಾದೀತು. ಗಂಧದ ಕೊರಡೊಂದನ್ನು ತೇಯ್ದು, ದೇವರಿಗೆ ಲೇಪಿಸುವುದೊ, ಅಪರೂಪಕ್ಕೊಮ್ಮೆ ಮುಖಕ್ಕೆ ಲೇಪಿಸುವುದೋ ಬಿಟ್ಟರೆ ಹೆಚ್ಚಿನ ಬಳಕೆಯನ್ನೇನು ಮಾಡುವುದಿಲ್ಲ ನಾವು. ಹಳೆಯ ತಲೆಮಾರಿನವರಂತೆ ಗಂಧವನ್ನು ಔಷಧೀಯ ಬಳಕೆಗೂ ಉಪಯೋಗಿಸುವುದಿಲ್ಲ. ಇದಕ್ಕಿಂತ ಮುಖ್ಯವಾಗಿ ಗಂಧದ ಕೊರಡು ಈಗ ಹೆಚ್ಚಿನ ಮನೆಗಳಲ್ಲಿ ಇಲ್ಲವೂ ಇಲ್ಲ. ಹಾಗಾದರೆ ಗಂಧದ ಲಾಭಗಳನ್ನು ದೊರಕಿಸಿ ಕೊಳ್ಳುವುದು ಹೇಗೆ?
ತ್ವಚೆಯ ಮೇಲೆ ಗಂಧ ತೈಲ ಲೇಪನವು ಭಾರತೀಯ ಪರಂಪರಾಗತ ವೈದ್ಯಶಾಸ್ತ್ರದ ಭಾಗ. ಈ ಎಣ್ಣೆಯ ಲಾಭಗಳು ಚರ್ಮಕ್ಕೆ ಹಲವು ರೀತಿಯಲ್ಲಿದೆ. ಹಲವಾರು ಸಂಸ್ಕೃತಿ, ಪಾಂತ್ಯಗಳಲ್ಲಿ ಶ್ರೀಗಂಧದೆಣ್ಣೆಯನ್ನು ಸೌಂದರ್ಯವರ್ಧಕ ವಾಗಿಯೇ ಬಳಸಲಾಗುತ್ತದೆ. ಈ ಎಣ್ಣೆಯಲ್ಲಿರುವ ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಚರ್ಮದ ಮೇಲಿನ ಕಲೆ, ಮೊಡವೆಗಳನ್ನು ನಿವಾರಿಸಿ, ಸುಕ್ಕು ಕಡಿಮೆ ಮಾಡಿ, ತ್ವಚೆಯನ್ನು ಬಿಗಿ ಮಾಡಿ, ಹೊಳಪು ಮರಳುವಂತೆ ಮಾಡುತ್ತವೆ. ಏನಿದರ ಗುಣಗಳು?
ಸೋಂಕು ವಿರೋಧಿ: ಗಂಧದ ಎಣ್ಣೆಯಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯ ವಿರೋಧಿ ಗುಣಗಳಿವೆ. ಹಾಗಾಗಿ ಮೊಡವೆಗಳ ಮೂಲಕ ಕಾಡುವ ಸೂಕ್ಷ್ಮಾಣುಗಳ ಸೋಂಕುಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಪದೇಪದೆ ಕಾಡುವ ಮೊಡವೆಗಳ ಸಮಸ್ಯೆಯನ್ನು ತಹಬಂದಿಗೆ ತರಬಹುದು.
ಉರಿಯೂತ ಶಮನ: ಇದರ ಉತ್ಕರ್ಷಣ ನಿರೋಧಕಗಳು ಚರ್ಮದ ಮೇಲಿನ ಉರಿಯೂತವನ್ನು ಕಡಿಮೆ ಮಾಡಿ, ನಯವನ್ನು ಮರಳಿಸುತ್ತವೆ. ಎಕ್ಸಿಮಾ, ಸೋರಿಯಾಸಿಸ್‌ನಂಥ ಸಮಸ್ಯೆಗಳಿದ್ದರೆ ವೈದ್ಯರ ಸಲಹೆಯ ಮೇರೆಗೆ ಬಳಸುವುದು ಉಚಿತ. ಅದಿಲ್ಲದಿದ್ದರೆ, ಸಾಮಾನ್ಯ ಶುಷ್ಕ ಚರ್ಮಗಳಿಗೆ, ಸೂಕ್ಷ್ಮ ತ್ವಚೆಗೆ ಇದನ್ನು ಬಳಸುವುದರಿಂದ ಹಾನಿಯಾಗುವ ಸಂಭವ ಕಡಿಮೆ.
ಚರ್ಮಕ್ಕೆ ಮೆರುಗು: ಒಣ ಚರ್ಮದವರಿಗೆ ಮಾತ್ರವೇ ಇದು ಸೂಕ್ತ ಎಂದಲ್ಲ. ಸದಾ ಎಣ್ಣೆ ಉಗುಳುವ ಎಣ್ಣೆತ್ವಚೆಯವರಿಗೂ ಇದು ಒಳ್ಳೆಯದೆ. ಅತಿಯಾಗಿ ಎಣ್ಣೆ ಒಸರುವುದನ್ನು ಇದು ತಡೆದು ಚರ್ಮದ ಮೇಲಿನ ಸೂಕ್ಷ್ಮ ರಂಧ್ರ, ಬಿರುಕುಗಳನ್ನು ಸರಿಪಡಿಸುತ್ತದೆ. ಸಡಿಲ ಚರ್ಮವನ್ನು ಬಿಗಿ ಮಾಡಿ, ತ್ವಚೆಯ ಮೇಲಿನ ವಿಕಾರಗಳನ್ನು ಹೋಗಲಾಡಿಸುತ್ತದೆ. ಒಣ ಚರ್ಮದ ಮೇಲಿನ ಕೆಂಪು ಕಲೆಗಳು, ಉರಿಯನ್ನು ಹೋಗಲಾಡಿಸಿ, ತ್ವಚೆಗೆ ಮೆರುಗು ನೀಡುತ್ತದೆ.
Health Tips: ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ
ಸುಕ್ಕು ಮಾಯ! ವಯಸ್ಸಾದಂತೆ ಚರ್ಮದ ಮೇಲೆ ಸುಕ್ಕು ಬರುವುದು ಸಾಮಾನ್ಯ. ಆದರೆ ಚರ್ಮದ ಮೇಲಿನ ಕೊಲಾಜಿನ್ ಉತ್ಪಾದನೆಯನ್ನು ಪ್ರಚೋದಿಸುವ ಶ್ರೀಗಂಧ ತೈಲವು, ಮುಕ್ತಕಣಗಳನ್ನೂ ನಿರ್ಬಂಧಿಸುತ್ತದೆ. ಹಾಗಾಗಿ ಚರ್ಮ ಸುಕ್ಕಾಗುವುದು, ಕಳೆಗುಂದುವುದು, ಸಡಿಲವಾಗುವುದು ಮುಂತಾದವನ್ನು ತಡೆದು, ಯೌವನಭರಿತ ತ್ವಚೆಯನ್ನು ನೀಡುತ್ತದೆ.
ಪರಿಮಳಭರಿತ: ಗಂಧದ ಘಮ ಯಾರಿಗೆ ಇಷ್ಟವಿಲ್ಲ? ನಿತ್ಯವೂ ಈ ತೈಲದ ಪರಿಮಳವನ್ನು ಆಘ್ರಾಣಿಸುವುದರಿಂದ ಮಾನಸಿಕ ಒತ್ತಡ ಶಮನಕ್ಕೆ ಅನುಕೂಲವಾಗುತ್ತದೆ. ಅರೋಮ ಥೆರಪಿಯಂಥ ಚಿಕಿತ್ಸೆಗಳಲ್ಲಿ ಇಂಥ ಸುಗಂಧದ್ರವ್ಯಗಳ ಬಳಕೆಗೆ ಪರಿಣಾಮಕಾರಿಯಾಗ ಫಲವನ್ನು ಕಂಡುಕೊಳ್ಳಲಾಗಿದೆ. ಈ ಮೂಲಕ ಗಂಧತೈಲವು ದೇಹದ ಮತ್ತು ಮನಸ್ಸಿನ ಒಟ್ಟಾರೆ ಸ್ವಾಸ್ಥ್ಯವನ್ನೂ ವೃದ್ಧಿಸುತ್ತದೆ.
ತೇವಭರಿತ: ವಾತಾವರಣದ ಮಾಲಿನ್ಯ, ಧೂಳು, ಬಿಸಿಲು ಇತ್ಯಾದಿಗಳಿಂದ ಚರ್ಮ ತನ್ನ ನೈಸರ್ಗಿಕ ತೇವವನ್ನು ಕಳೆದುಕೊಂಡು ಒಣಗಿ ಸತ್ವಹೀನವಾದಂತೆ ಕಾಣುತ್ತದೆ. ಹಲವು ರೀತಿಯ ಕ್ರೀಮು ಗಳನ್ನು ಪ್ರಯೋಗಿಸಿದರೂ ಕೆಲವೊಮ್ಮೆ ನಯವಾದ, ತೇವಭರಿತ ಚರ್ಮವನ್ನು ಪಡೆಯಲು ಸಾಧ್ಯವಾಗದೆ ಹೋಗಬಹುದು. ನಿಯಮಿತವಾಗಿ ಗಂಧದ ಎಣ್ಣೆಯ ಬಳಕೆಯಿಂದ ಚರ್ಮದ ಒರಟುತನ, ಶುಷ್ಕತೆ ಮಾಯವಾಗಿ, ನಯವಾದ ತೇವಭರಿತ ಚರ್ಮವನ್ನು ಪಡೆಯಬಹುದು.