ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಲ್ಲು ಅರ್ಜುನ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅನುಷ್ಕಾ ಶರ್ಮಾ ವಾಪಸ್;‌ ವಿರಾಟ್ ಕೊಹ್ಲಿ ಪತ್ನಿಯ ಭರ್ಜರಿ ರೀ-ಎಂಟ್ರಿ?

ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲೀ ಅವರ ಬಹುನಿರೀಕ್ಷಿತ ಪ್ಯಾನ್-ವರ್ಲ್ಡ್ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಅವರಂತಹ ಸ್ಟಾರ್ ನಟಿಯರ ದಂಡೇ ಇರುವ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾಗೆ ಏನು ಪಾತ್ರ ಎಂಬುದು ಸದ್ಯದ ಪ್ರಶ್ನೆ.

ಅಲ್ಲು ಅರ್ಜುನ್-ಅಟ್ಲೀ ಸಿನಿಮಾಗೆ ಅನುಷ್ಕಾ ಶರ್ಮಾ ಎಂಟ್ರಿ?

-

Avinash GR
Avinash GR Mar 22, 2026 7:45 PM

‘ಪುಷ್ಪ 2’ ಸಿನಿಮಾದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇದೀಗ ಆ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ʻಜವಾನ್‌ʼ ನಿರ್ದೇಶಕ ಅಟ್ಲೀ ಜೊತೆ ಕೈಜೋಡಿಸಿದ್ದು, ಆ ಹೊಸ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗಿವೆ. ಅಲ್ಲು ಅರ್ಜುನ್ ನಟನೆಯ 22ನೇ ಚಿತ್ರ ಇದ್ದಾಗಿದ್ದು, ದುಬಾರಿ ಬಜೆಟ್‌ನಲ್ಲಿ ಪ್ಯಾನ್‌ ವರ್ಲ್‌ ಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರತಂಡದಿಂದ ಒಂದು ಬ್ರೇಕಿಂಗ್‌ ನ್ಯೂಸ್‌ ಹೊರಬಿದ್ದಿದೆ.

ಅಲ್ಲು ಅರ್ಜುನ್‌ - ಅಟ್ಲೀ ಸಿನಿಮಾಗೆ ಎಂಟ್ರಿ ಕೊಡ್ತಾರಾ ಅನುಷ್ಕಾ?

ನಟಿ ಅನುಷ್ಕಾ ಶರ್ಮಾ ಅವರು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಜೊತೆ ಮದುವೆಯಾದ ಮೇಲೆ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. 2017ರಲ್ಲಿ ಜೀರೋ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸಿದ್ದ ಅವರು ಆನಂತರ ಅಷ್ಟೇನು ಸಕ್ರಿಯವಾಗಿಲ್ಲ. 'ಚಕ್ಡಾ ಎಕ್ಸ್‌ಪ್ರೆಸ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಟಾಕ್‌ ಇದ್ದರೂ, ಆ ಸಿನಿಮಾ ಇನ್ನೂ ತೆರೆಕಂಡಿಲ್ಲ. ಆದರೆ ಇದೀಗ ಅಲ್ಲು ಅರ್ಜುನ್‌ - ಅಟ್ಲೀ ಅವರ ಹೊಸ ಸಿನಿಮಾದ ಮೂಲಕ ಮತ್ತೆ ಚಿತ್ರರಂಗಕ್ಕೆ ಅನುಷ್ಕಾ ಶರ್ಮಾ ಮರಳುತ್ತಾರೆ ಎಂಬ ಟಾಕ್‌ ಇದೆ.

Allu Sirish Pre Wedding Bash: ಅಲ್ಲು ಅರ್ಜುನ್‌ ತಮ್ಮ ಅಲ್ಲು ಸಿರೀಶ್‌ ಪ್ರೀ-ವೆಡ್ಡಿಂಗ್‌ ಪಾರ್ಟಿ ಬಲು ಜೋರು! ಫೋಟೋಸ್‌ ವೈರಲ್‌

ಈ ಚಿತ್ರದಲ್ಲಿದ್ದಾರೆ ಸ್ಟಾರ್‌ ನಟಿಯರು

ಈಗಾಗಲೇ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಮೃಣಾಲ್ ಠಾಕೂರ್ ಮತ್ತು ಜಾನ್ವಿ ಕಪೂರ್ ಅವರಂತಹ ಸ್ಟಾರ್ ನಟಿಯರು ಬಣ್ಣ ಹಚ್ಚಿದ್ದಾರೆ ಎಂಬ ಸುದ್ದಿ ಇದೆ. ದೀಪಿಕಾ ಪಡುಕೋಣೆ ನಟಿಸುತ್ತಿರುವುದು ಖಚಿತವಾಗಿದೆ. ಇದೀಗ ಅನುಷ್ಕಾ ಶರ್ಮಾ ಕೂಡ ಈ ಪ್ರಾಜೆಕ್ಟ್ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಒಂದೇ ಸಿನಿಮಾದಲ್ಲಿ ಐವರು ಸ್ಟಾರ್ ನಾಯಕಿಯರು ನಟಿಸುತ್ತಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಪರೂಪವಾಗಿದೆ. ಅನುಷ್ಕಾ ಸೇರ್ಪಡೆ ಬಗ್ಗೆ ಇನ್ನಷ್ಟೇ ಮಾಹಿತಿ ಗೊತ್ತಾಗಬೇಕಿದೆ. ಹಿಂದಿ ಮಾರುಕಟ್ಟೆಯನ್ನು ಟಾರ್ಗೆಟ್‌ ಮಾಡಿಯೇ ಅಟ್ಲೀ ಇಷ್ಟೊಂದು ಮಂದಿ ಬಾಲಿವುಡ್ ನಟಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸದ್ಯದ ಮಾತು.

Allu Arjun: ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಸ್ನೇಹಾಗೆ ದುಬಾರಿ ಕಾರು ಗಿಫ್ಟ್‌ ಕೊಟ್ಟ ಅಲ್ಲು ಅರ್ಜುನ್

ಅಂದಹಾಗೆ, ಈ ಸಿನಿಮಾದ ಕಥೆ ಅಲ್ಲು ಅರ್ಜುನ್ ಪಾತ್ರದ ಸುತ್ತಲೇ ಸುತ್ತಲಿದ್ದು, ಅವರ ನಟನೆಯೇ ಈ ಸಿನಿಮಾದ ಪ್ರಧಾನ ಆಕರ್ಷಣೆ ಆಗಿರಲಿದೆಯಂತೆ. ಭಾರಿ ಬಜೆಟ್ ಮತ್ತು ವಿಭಿನ್ನ ಕಥಾಹಂದರದೊಂದಿಗೆ ಬರುತ್ತಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಳೆಯ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸಿನಿಪ್ರಿಯರು.

ಅನುಷ್ಕಾ ಅಭಿಮಾನಿಗಳಿಗೆ ಖುಷಿ

ಬೆಳ್ಳಿತೆರೆಯಿಂದ ದೂರವಿದ್ದ ಅನುಷ್ಕಾ ಶರ್ಮಾ ಅವರು ಈ ಚಿತ್ರದಲ್ಲಿ ನಟಿಸುವುದು ಪಕ್ಕಾ ಆದರೆ, ಇದು ಭರ್ಜರಿ ರೀ-ಎಂಟ್ರಿ ಎನಿಸಿಕೊಳ್ಳಲಿದೆ. ವಿರಾಟ್ ಕೊಹ್ಲಿ ಅವರನ್ನು ವಿವಾಹವಾದ ನಂತರ ತಮ್ಮ ಕುಟುಂಬ ಜೀವನಕ್ಕೆ ಅನುಷ್ಕಾ ಆದ್ಯತೆ ನೀಡಿದ್ದರು. ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರ ಪಾಲನೆಗಾಗಿ ಅವರು ಸಿನಿಮಾದಿಂದ ದೂರವಿದ್ದರು. ಸದ್ಯ ಅವರ ಕಮ್‌ಬ್ಯಾಕ್‌ ಬಗೆಗಿನ ನ್ಯೂಸ್ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.