ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Aase Serial: ರೋಹಿಣಿ ಮುಚ್ಚಿಟ್ಟ ಮಹಾ ರಹಸ್ಯದ ಅನಾವರಣ!

Aase Serial: ಸ್ಟಾರ್‌ ಸುವರ್ಣ ಧಾರಾವಾಹಿಯಲ್ಲಿ ಪ್ರಸಾರ ಕಾಣುತ್ತಿರುವ ಆಸೆ, ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ರೋಹಿಣಿ ರಹಸ್ಯ ಬಯಲಾಗುವ ಹೊತ್ತು ಬಂದಂತಿದೆ. ಪ್ರೋಮೋ ನೋಡಿ ಸಖತ್‌ ಥ್ರಿಲ್‌ ಆಗಿದ್ದಾರೆ ವೀಕ್ಷಕರು. ರೋಹಿಣಿ ರಹಸ್ಯ ಬಯಲಾಗುವ ಹೊತ್ತು ಕನಸಾ ಅಥವಾ ನನಸಾ ಅನ್ನೋದು ವೀಕ್ಷಕರಲ್ಲಿ ಕುತೂಹಲ. ಮನೋಜ್‌ ಕಥೆ ಏನು?

Aase Serial: ರೋಹಿಣಿ ಮುಚ್ಚಿಟ್ಟ ಮಹಾ ರಹಸ್ಯದ ಅನಾವರಣ!

ಆಸೆ ಧಾರಾವಾಹಿ -

Yashaswi Devadiga
Yashaswi Devadiga May 3, 2026 8:55 PM

ಸ್ಟಾರ್‌ ಸುವರ್ಣ ಧಾರಾವಾಹಿಯಲ್ಲಿ (Star Suvarna) ಪ್ರಸಾರ ಕಾಣುತ್ತಿರುವ ಆಸೆ (Aase Serial), ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ರೋಹಿಣಿ (Rohini) ರಹಸ್ಯ ಬಯಲಾಗುವ ಹೊತ್ತು ಬಂದಂತಿದೆ. ಪ್ರೋಮೋ ನೋಡಿ ಸಖತ್‌ ಥ್ರಿಲ್‌ ಆಗಿದ್ದಾರೆ ವೀಕ್ಷಕರು. ರೋಹಿಣಿ ರಹಸ್ಯ ಬಯಲಾಗುವ ಹೊತ್ತು ಕನಸಾ ಅಥವಾ ನನಸಾ (Surya Meena) ಅನ್ನೋದು ವೀಕ್ಷಕರಲ್ಲಿ ಕುತೂಹಲ. ಮನೋಜ್‌ ಕಥೆ ಏನು?

ಸೂರ್ಯ-ಮೀನಾ ಸದಾ ರೋಹಿಣಿ ಹಾಗೂ ಮನೋಜನ ಮೇಲೆ ಕಣ್ಣು ಇಟ್ಟಿರುತ್ತಾರೆ. ರೋಹಿಣಿಗೆ ಬಾಲ್ಯ ವಿವಾಹವಾಗಿರೋದು ಇಂದಿಗೂ ಮನೋಜನಿಗೆ ಆಗಲಿ ಮನೆಯವರಿಗೆ ಆಗಲಿ ಗೊತ್ತಿಲ್ಲ.ಕೈಗೆ ಒಂದು ಮಗು ಕೊಟ್ಟು ಆ ವ್ಯಕ್ತಿ ಇಹಲೋಕ ತ್ಯಜಿಸುತ್ತಾನೆ. ಆದರೆ ಮನೋಜ ರೋಹಿಣಿ ಬದುಕಲ್ಲಿ ಬಂದು ಮದುವೆ ಕೂಡ ಆಗುತ್ತಾಳೆ.

ಇದನ್ನೂ ಓದಿ : Meghana Raj: ಪತಿ ಚಿರಂಜೀವಿ ಸರ್ಜಾ ಕನಸು ಈಡೇರಿಸಿದ ನಟಿ ಮೇಘನಾ ರಾಜ್‌ ! ರಜನಿ ಜೊತೆಗಿನ ಫೋಟೋ ಶೇರ್ ಮಾಡಿದ್ಯಾಕೆ?

ರೋಹಿಣಿಯ ಹಳೆ ರಹಸ್ಯಗಳು ಮನೋಜನಿಗೆ ಗೊತ್ತಿರಲಿಲ್ಲ. ಈ ವಿಚಾರ ಮೊದಲು ಗೊತ್ತಾಗಿದ್ದು ಮೀನಾಗೆ.

ಮೊದಲ ಪತಿಯ ಪಿತೃ ಕಾರ್ಯದಲ್ಲಿ ಅಮ್ಮ ಮತ್ತು ಮಗನ ಜೊತೆ ರೋಹಿಣಿ ಭಾಗಿಯಾಗಿದ್ದಳು. ನದಿಯ ದಡದಲ್ಲಿ ನಡೆಯುತ್ತಿದ್ದ ದೃಶ್ಯ ಮೀನಾ ಕಣ್ಣಿಗೆ ಬಿದ್ದಿತ್ತು. ಕೋಪಗೊಂಡ ಮೀನಾ ರೋಹಿಣಿಯ ಕೆನ್ನೆಗೆ ಬಾರಿಸಿದ್ದಳು. ಅಷ್ಟೇ ಅಲ್ಲ ಮನೆಯಲ್ಲಿ ಎಲ್ಲ ವಿಚಾರಗಳನ್ನು ತಿಳಿಸಲು ಕೂಡ ಹೇಳಿದ್ದಳು. ಈ ಸತ್ಯನ ನಾನೇ ಮನೆಯವರಿಗೆ ಹೇಳುತ್ತೇನೆ ಎಂದು ಮೀನಾ ಎಷ್ಟೇ ಬಾರಿ ಹೇಳಿದರೂ ಅದು ಅಲ್ಲಿಗೆ ಅಂತ್ಯವಾಗಿತ್ತು. ಆದರೀಗ ಈ ಸತ್ಯ ಸೂರ್ಯನ ಮುಂದೆ ಅನಾವರಣ ಆಗಿದೆ.

ಈ ಹಿಂದೆ ಬಹಳಷ್ಟು ಬಾರಿ ಇದೇ ರೀತಿ ಪ್ರೋಮೋಗಳು ಬಂದಿದ್ದು, ಕಟ್‌ ಮಾಡಿದರೇ ಅದು ಕನಸು ಅಂತ ತೋರಿಸಲಾಗಿತ್ತು. ಹೀಗಾಗಿ ಈ ಹೊಸ ಪ್ರೋಮೋ ನೋಡಿದವರು ಶಾಕ್‌ ಆಗಿದ್ದಾರೆ.

ಪ್ರೋಮೋದಲ್ಲಿ ಸೂರ್ಯ ಬಂದವನು, ಕಿಶ್‌ ಅಮ್ಮ ಜೀವಂತವಾಗಿದ್ದಾರೆ. ಅವರ ಕ್ಯಾರೆಕ್ಟರ್‌ ಸರಿ ಇಲ್ಲ ಎಂದಿದ್ದಾನೆ ಸೂರ್ಯ. ರೋಹಿಣಿ ಈ ಮಾತನ್ನು ಒಪ್ಪದೇ, ಕ್ರಿಶ್‌ ಅಮ್ಮ ಸರಿಯಾಗಿಯೇ ಇದ್ದಾರೆ. ಯಾಕೆ ಅಂದರೆ ಅವನನ್ನು ಒಂಬತ್ತು ತಿಂಗಳು ಹೆತ್ತು ಹೊತ್ತು ಬೆಳೆಸಿದ್ದು ನಾನು ಎಂದಿದ್ದಾಳೆ.

ಈ ಮಾತು ಕೇಳಿ ಮನೆಯವರೆಲ್ಲರೂ ಶಾಕ್‌ ಆಗಿದ್ದಾರೆ. ರೋಹಿಣಿಯನ್ನು ಈಗ ಮನೋಜ ಮನೆಯಿಂದ ಆಚೆ ಹಾಕಿದ್ದಾನೆ. ಮುಂದೆ ಏನಾಗತ್ತೆ ಅನ್ನೋದು ಸಂಚಿಕೆಯಲ್ಲಿ ಗೊತ್ತಾಗಲಿದೆ. ಇನ್ನು ತಾರಾ ವಿಚಾರವನ್ನೂ ಮೀನಾ ಕಲೆ ಹಾಕುತ್ತಿದ್ದಾಳೆ.

ಇದನ್ನೂ ಓದಿ: Shah Rukh Khan: ʼಕಿಂಗ್ʼ ಮೂವಿಯ ಈ ದೃಶ್ಯ ಲೀಕ್‌! ಶಾರುಖ್‌ರನ್ನು ಹೊಗಳಿದ್ದೇಕೆ ಫ್ಯಾನ್ಸ್‌?

ಮನೋಜನು ತಾಯಿ ಮುಂದೆ ತಪ್ಪು ಒಪ್ಪಿಕೊಳ್ತಾನಾ ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.7.30ಕ್ಕೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ಆಸೆ’ ಧಾರಾವಾಹಿ ಪ್ರಸಾರ ಕಾಣುತ್ತಿದೆ.