Ninna Jothe Nanna Kathe Serial: ಕೆಟ್ಟ ಜನರಿಂದ ಆಚೆ ಬಂದೆ; ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಿಂದ ಹೊರಬಂದು ನಟಿ ಹೇಳಿದ್ದೇನು?
Ninna Jothe Nanna Kathe Serial: ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ನಿನ್ನ ಜೊತೆ ನನ್ನ ಕಥೆ' (Ninna Jothe Nanna Kathe) ತಂಡದಿಂದ ಪ್ರಮುಖ ನಟಿ ದಿಢೀರನೇ ಹೊರಬಂದಿದ್ದಾರೆ. ಅನನ್ಯ ಮೋಹನ್ ಜಾಗಕ್ಕೆ ಪೂಜಾ ಬಂದಿದ್ದರು, ಈಗ ಇವರು ಕೂಡ ಇದ್ದಕ್ಕಿದ್ದಂತೆ ಸೀರಿಯಲ್ ಬಿಟ್ಟಿದ್ದಾರೆ. ‘ಕರಿಮಣಿ’ ಸೀರಿಯಲ್ ಖ್ಯಾತಿಯ ನಟಿ ಪೂಜಾ ಮಂಜುಳಾ (Pooja Manjula).ಸದ್ಯ ಪೂಜಾ ಕೂಡ ಪಾತ್ರವನ್ನ ತೊರೆದಿದ್ದಾರೆ. ಸೀರಿಯಲ್‌ನಿಂದ ಹೊರಬಂದು ಸ್ಪಷ್ಟನೆ ಕೊಟ್ಟಿದ್ದಾರೆ.
ನಿನ್ನ ಜೊತೆ ನನ್ನ ಕಥೆ ಸೀರಿಯಲ್ -
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ನಿನ್ನ ಜೊತೆ ನನ್ನ ಕಥೆ' (Ninna Jothe Nanna Kathe) ತಂಡದಿಂದ ಪ್ರಮುಖ ನಟಿ ದಿಢೀರನೇ ಹೊರಬಂದಿದ್ದಾರೆ. ಅನನ್ಯ ಮೋಹನ್ ಜಾಗಕ್ಕೆ ಪೂಜಾ ಬಂದಿದ್ದರು, ಈಗ ಇವರು ಕೂಡ ಇದ್ದಕ್ಕಿದ್ದಂತೆ ಸೀರಿಯಲ್ ಬಿಟ್ಟಿದ್ದಾರೆ. ‘ಕರಿಮಣಿ’ ಸೀರಿಯಲ್ ಖ್ಯಾತಿಯ ನಟಿ ಪೂಜಾ ಮಂಜುಳಾ (Pooja Manjula).ಸದ್ಯ ಪೂಜಾ ಕೂಡ ಪಾತ್ರವನ್ನ ತೊರೆದಿದ್ದಾರೆ. ಸೀರಿಯಲ್‌ನಿಂದ ಹೊರಬಂದು ಸ್ಪಷ್ಟನೆ ಕೊಟ್ಟಿದ್ದಾರೆ.
‘ನಿನ್ನ ಜೊತೆ ನನ್ನ ಕಥೆ’ ಸೀರಿಯಲ್‌ನ ನೆಗೆಟಿವ್ ಪಾತ್ರ ದೇವಯಾನಿ. ಇವರ ಮಗಳು ಅಂಜನಾ. ಅಮ್ಮನ ಕೆಟ್ಟ ಕೆಲಸಕ್ಕೆ ಸಾಥ್ ಕೊಡುವ ಪಾತ್ರ. ಈ ಪಾತ್ರವನ್ನ ಪ್ರಾರಂಭದಿಂದಲೂ ಅನನ್ಯ ಮೋಹನ್ ಅವರು ನಿರ್ವಹಿಸಿದ್ದರು. ಕಳೆದ 2 ವರ್ಷಗಳಿಂದ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದಾರೆ. ‘ಮುಕ್ತ’ ಧಾರಾವಾಹಿಯಲ್ಲಿ ಅಮ್ಮನ ಜೊತೆಗೆ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಪೂಜಾ ಮಂಜುಳಾ ಅವರು ಸೀರಿಯಲ್‌ನಿಂದ ಹೊರಬಂದು ನೇರವಾಗಿ ತಂಡದ ಮೇಲೆ ಆರೋಪ ಮಾಡಿದ್ದಾರೆ. ‘ಕೆಟ್ಟ ಜನರು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 13: ಕ್ಯಾಪ್ಟನ್ ಜಗದೀಶ್ ನಿರ್ಧಾರಕ್ಕೆ ಸೌಂದರ್ಯಾ ಆಕ್ರೋಶ!
“ನಾನು ನಿನ್ನ ಜೊತೆ ನನ್ನ ಕಥೆ ಸೀರಿಯಲ್‌ನ ಕಂಟಿನ್ಯೂ ಮಾಡುತ್ತಿಲ್ಲ. ಕಾರಣ ಕೆಲವೊಂದು ಸಲ ಕೆಟ್ಟ ಜನರಿಂದ, ಕೆಟ್ಟ ಜಾಗದಿಂದ ಆಚೆ ಬರುವುದು ಒಳ್ಳೆಯದು. ಈ ತಂಡದಿಂದ ಆಚೆ ಬಂದಿರುವುದೇ ನನಗೆ ದೇವರು ಕೊಟ್ಟಿರುವ ವರ. ಯಾರೆಲ್ಲಾ ಇಷ್ಟುದಿನ ಬೆಂಬಲಿಸಿದ್ದೀರ ಅವರಿಗೆ ಥ್ಯಾಂಕ್ಯೂ, ಕೆಟ್ಟವರಿಗೂ ಒಳ್ಳೆಯದನ್ನ ಬಯಸೋಣ” ಎಂದು ನಟಿ ಪೂಜಾ ಮಂಜುಳಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 13: ಬಾರೋ ದೂದ್ ಪೇಡಾ, ಒಬ್ಬೊಬ್ಬರನ್ನು ಬಿಡಲ್ಲ! ರೊಚ್ಚಿಗೆದ್ದ ಕಿರಣ್
, ತಾವು ಕೆಲಸ ಮಾಡುತ್ತಿದ್ದ ಸ್ಥಳವನ್ನು 'ಕೆಟ್ಟ ಪ್ಲೇಸ್' ಎಂದೂ, ಜೊತೆಗಿದ್ದವರನ್ನು 'ಕೆಟ್ಟ ಜನರು' ಎಂದೂ ಜರೆದಿರುವುದಕ್ಕೆ ಸೆಟ್‌ನಲ್ಲಿ ಆಂತರಿಕ ಕಲಹ ನಡೆದಿರಬಹುದಾ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಂಜನಾ ಪಾತ್ರದಲ್ಲಿ ತಮ್ಮ ನಟನೆಯಿಂದ ವೀಕ್ಷಕರ ಮನಗೆದ್ದಿದ್ದ ಪೂಜಾ ಅವರ ಈ ನಿರ್ಧಾರ ಅಭಿಮಾನಿಗಳಿಗೆ ತೀವ್ರ ಆಘಾತ ತಂದಿದೆ.