ʻಆಸೆʼ ಧಾರಾವಾಹಿ ರೋಹಿಣಿ ಪಾತ್ರಕ್ಕೆ ಅಭಿಜ್ಞಾ ಭಟ್ ಆಯ್ಕೆ; ಅಮೃತಾ ರಾಮಮೂರ್ತಿ ಜಾಗಕ್ಕೆ ಬಂದ ʻರಾಮಾಚಾರಿʼ ನಟಿ
Aase Kannada Serial: ಆಸೆ ಧಾರಾವಾಹಿಯ ರೋಹಿಣಿ ಪಾತ್ರಕ್ಕೆ ನಟಿ ಅಭಿಜ್ಞಾ ಭಟ್ ಆಯ್ಕೆಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ನಟಿ ಅಮೃತಾ ರಾಮಮೂರ್ತಿ ಅವರು ಧಾರಾವಾಹಿಯಿಂದ ಹೊರನಡೆದ ಬೆನ್ನಲ್ಲೇ ಈ ಬದಲಾವಣೆ ನಡೆದಿದೆ. 'ರಾಮಾಚಾರಿ' ಮತ್ತು 'ಸ್ನೇಹದ ಕಡಲಲ್ಲಿ' ಖ್ಯಾತಿಯ ಅಭಿಜ್ಞಾ ಅವರು ಇನ್ಮುಂದೆ ರೋಹಿಣಿ ಪಾತ್ರವನ್ನು ನಿಭಾಯಿಸಲಿದ್ದಾರೆ.
-
ʻಸ್ಟಾರ್ ಸುವರ್ಣʼ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಆಸೆʼ ಧಾರಾವಾಹಿಯಿಂದ ನಟಿ ಅಮೃತಾ ರಾಮಮೂರ್ತಿ ಅವರು ಹೊರಬಂದಿದ್ದರು. ಈ ಬಗ್ಗೆ ಒಂದು ವಿಡಿಯೋವನ್ನು ಹಂಚಿಕೊಂಡು, ಆ ಬಗ್ಗೆ ಮಾಹಿತಿ ನೀಡಿದ್ದರು. "ಕಾರಣಾಂತರಗಳಿಂದ ನಾನು ಆಸೆ ಧಾರಾವಾಹಿಯನ್ನು ಬಿಟ್ಟಿದ್ದೇನೆ" ಎಂದು ಅಮೃತಾ ಹೇಳಿಕೊಂಡಿದ್ದರು. ಇದೀಗ ಆ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ.
ಅಮೃತಾ ಬಿಟ್ಟ ಪಾತ್ರಕ್ಕೆ ಹೊಸ ನಟಿ
ಹೌದು, ಆಸೆ ಧಾರಾವಾಹಿಯಲ್ಲಿ ರೋಹಿಣಿ ಎಂಬ ಪಾತ್ರವನ್ನು ಅಮೃತಾ ರಾಮಮೂರ್ತಿ ನಿಭಾಯಿಸುತ್ತಿದ್ದರು. ಈ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಆ ಪಾತ್ರದಿಂದ ಅಮೃತಾ ಹೊರನಡೆದ ಮೇಲೆ, ಅದನ್ನು ಯಾರು ನಿಭಾಯಿಸಲಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು. ಇದೀಗ ಆ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ನಟಿ ಅಭಿಜ್ಞಾ ಭಟ್ ಅವರು ಆಸೆ ಧಾರಾವಾಹಿಗೆ ಎಂಟ್ರಿ ನೀಡಿದ್ದಾರೆ. ಇನ್ಮುಂದೆ ರೋಹಿಣಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
Amruthadhaare Serial: ಅಜ್ಜಿ ಆಸೆ ಈಡೇರ್ಲೇ ಬೇಕು! ಗೌತಮ್- ಭೂಮಿಕಾ ಒಂದಾಗ್ಲೇ ಬೇಕು! ಅಂತ್ಯ ಹಾಡುತ್ತಾ ಅಮೃತಧಾರೆ?
ರೋಹಿಣಿಯಾದ ಅಭಿಜ್ಞಾ ಭಟ್
ʻಆಸೆʼ ಸೀರಿಯಲ್‌ನಲ್ಲಿ ರೋಹಿಣಿ ಪಾತ್ರವು ಫೇಮಸ್ ಆಗಿತ್ತು. ಇದೀಗ ಆ ಪಾತ್ರವನ್ನು ನಟಿ ಅಭಿಜ್ಞಾ ಭಟ್ ಅವರು ನಿಭಾಯಿಸಲಿದ್ದಾರೆ. ಈಚೆಗೆ ಜೀ ಕನ್ನಡ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರಲ್ಲಿ ಅಭಿಜ್ಞಾ ಸ್ಪರ್ಧಿಯಾಗಿದ್ದರು. ಅದಕ್ಕೂ ಮುನ್ನ 2018ರಲ್ಲಿ ಬಂದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು - ಸೀಸನ್ 4ʼರಲ್ಲಿ ಸ್ಪರ್ಧಿಯಾಗಿದ್ದ ಅಭಿಜ್ಞಾ ಭಟ್ ನಂತರ ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ 'ರಾಮಾಚಾರಿ' ನಲ್ಲಿ ದೀಪಾ ಎಂಬ ಪಾತ್ರದ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಜೊತೆಗೆ ಅಭಿಜ್ಞಾ ಭಟ್ ಅವರು 'ಸ್ನೇಹದ ಕಡಲಲ್ಲಿ' ಮತ್ತು 'ಗೌರಿ ಶಂಕರ' ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.
ಅಮೃತಾ ರಾಮಮೂರ್ತಿ ಧಾರಾವಾಹಿ ಬಿಡಲು ಕಾರಣ
"ಕಾರಣಾಂತರಗಳಿಂದ ನಾನು ಆಸೆ ಧಾರಾವಾಹಿಯನ್ನ ಬಿಡುತ್ತಿದ್ದೇನೆ. ನೀವೆಲ್ಲರೂ ತುಂಬಾ ಪ್ರೀತಿ ತೋರಿಸಿದ್ದೀರಾ. ಆಸೆ ಧಾರಾವಾಹಿ ಜೊತೆಗೆ ನನ್ನ ಮೇಲೂ ಸಿಕ್ಕಾಪಟ್ಟೆ ಪ್ರೀತಿ ತೋರಿಸಿದ್ದೀರಿ. ಈ ಪ್ರೀತಿ ಸದಾ ಹೀಗೆ ಇರಲಿ. ನಾನು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ. ಒಂದು ಸಣ್ಣ ಬ್ರೇಕ್ ತಗೊಂಡು, ನಾನು ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ. ಅಲ್ಲಿಯವರೆಗೂ, ನನಗೆ ಇಷ್ಟು ಸಪೋರ್ಟ್ ಮಾಡಿದ್ದಕ್ಕೆ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು" ಎಂದು ಅಮೃತಾ ರಾಮಮೂರ್ತಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದರು.