ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Jaggesh: ಪೈರಸಿ ವಿರುದ್ಧ ಒಂದು ಹೆಜ್ಜೆ ಮುಂದಿಟ್ಟ ನಟ ಜಗ್ಗೇಶ್; ಲೈವ್ ವಿಡಿಯೋದಲ್ಲಿ ಹೇಳಿದ್ದೇನು?

Sandalwood: ಇತ್ತೀಚೆಗೆ ಪೈರಸಿ ಮಾಡೋರ ಕಾಟ ಹೆಚ್ಚಾಗಿದೆ. ಮಾರ್ಕ್‌ ಸಿನಿಮಾ ವೇಳೆ ಕಿಚ್ಚ ಸುದೀಪ್‌ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದರು. ಇದೀಗ ನವರಸ ನಾಯಕ ಜಗ್ಗೇಶ್‌ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ ಲೈವ್ ಬಂದು ಈ ಬಗ್ಗೆ ನಟ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ಇದೀಗ ನಟ ಜಗ್ಗೇಶ್ ಸಿನಿಮಾ ಪೈರಸಿ ಮಾಡುವ ಕಿಡಿಗೇಡಿ ಒಬ್ಬನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೈರಸಿ ವಿರುದ್ಧ ಒಂದು ಹೆಜ್ಜೆ ಮುಂದಿಟ್ಟ ನಟ ಜಗ್ಗೇಶ್

ನಟ ಜಗ್ಗೇಶ್‌ -

Yashaswi Devadiga
Yashaswi Devadiga Dec 31, 2025 2:39 PM

ಇತ್ತೀಚೆಗೆ ಪೈರೆಸಿ (piracy) ಮಾಡೋರ ಕಾಟ ಹೆಚ್ಚಾಗಿದೆ. ಮಾರ್ಕ್‌ ಸಿನಿಮಾ (Mark Movie) ವೇಳೆ ಕಿಚ್ಚ ಸುದೀಪ್‌ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದರು. ಇದೀಗ ನವರಸ ನಾಯಕ ಜಗ್ಗೇಶ್‌ (Jaggesh) ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ ಲೈವ್ ಬಂದು ಈ ಬಗ್ಗೆ ನಟ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ಇದೀಗ ನಟ ಜಗ್ಗೇಶ್ ಸಿನಿಮಾ ಪೈರಸಿ ಮಾಡುವ ಕಿಡಿಗೇಡಿ ಒಬ್ಬನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೈರಸಿಯಿಂದ ಚಿತ್ರರಂಗಕ್ಕೆ (Cinema) ಹೇಗೆ ನಷ್ಟವಾಗುತ್ತಿದೆ ಎಂದು ವಿವರಿಸಿದ್ದಾರೆ. ಬಳಿಕ ಈ ಪೈರಸಿ ಜಾಲ ಭೇದಿಸಿದ್ದು ಹೇಗೆ ಎಂದು ಮಾಹಿತಿ ನೀಡಿದ್ದಾರೆ.‌

ಲೈವ್‌ ಬಂದು ಹೇಳಿದ್ದೇನು?

ನಿರ್ಮಾಪಕರು ಸಾಲ ಮಾಡಿ ಸಿನಿಮಾ ಮಾಡಿರುತ್ತಾರೆ. ನೂರಾರು ಜನರ ಶ್ರಮ ಚಿತ್ರದಲ್ಲಿರುತ್ತದೆ. ಆದರೆ ಸಿನಿಮಾ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಪೈರಸಿ ಮಾಡುತ್ತಾರೆ. ಎಷ್ಟು ನೋಡುತ್ತಾ ಕೂರಲು ಸಾಧ್ಯವಿಲ್ಲ. ಪೈರಸಿ ಅನ್ನೋದು ಕೊಲೆ ಅಥವಾ ಬ್ಯಾಂಕ್‌ ದರೋಡೆಗೆ ಸಮ ಎಂದು ಜಗ್ಗೇಶ್ ಹೇಳಿದ್ದಾರೆ.

ಸಿನಿಮಾಗಳನ್ನ ಕದಿಯೋರಿಗೆ ಶಿಕ್ಷೆ ಕೂಡ ಇದೆ. ಸಿನಿಮಾ ಕದಿಯೋರಿಗೆ 3 ವರ್ಷ ಜೈಲು ಆಗುತ್ತದೆ. ಅದನ್ನ ಬೇರೆಯವರಿಗೂ ಫಾರ್ವರ್ಡ್ ಮಾಡಿದರೆ ಆಯಿತು. ಅವರೂ ಒಳಗೆ ಹೋಗುತ್ತಾರೆ. ಹಾಗಾಗಿಯೇ ಸಿನಿಮಾಗಳನ್ನ ಕದಿಯಬೇಡಿ. ಹಾಗೆ ಬಂದಿರೋ ಚಿತ್ರದ ಲಿಂಕ್ ಅನ್ನು ಫಾರ್ವರ್ಡ್ ಮಾಡ್ಬೇಡಿ ಅಂತಲೂ ಜಗ್ಗೇಶ್ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: Dr Rajkumar ಜೊತೆಗಿನ ಅಪರೂಪದ ಫೋಟೋ ಶೇರ್‌ ಮಾಡಿದ ಜಗ್ಗೇಶ್‌; 'ಈ ಚಿತ್ರ ನೋಡಿ ಭಾವುಕನಾಗಿಬಿಟ್ಟೆ' ಎಂದ ನವರಸ ನಾಯಕ

'ಕೋಣ' ಚಿತ್ರದ ನಿರ್ಮಾಪಕ ರವಿಕಿರಣ್ ಇದೀಗ ಈ ಪೈರಸಿ ಜಾಲವನ್ನು ಭೇದಿಸಿದ್ದಾರೆ ಎಂದು ವರದಿಯಾಗಿದೆ. ನಂದಿನಿ ಲೇಔಟ್ ಪೊಲೀಸರು ಕಿಡಿಗೇಡಿ ಒಬ್ಬನನ್ನು ಬಂಧಿಸಿದ್ದಾರೆ.ಈಗಾಗಲೇ ಬಂಧಿತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಜಗ್ಗೇಶ್‌ ಪೋಸ್ಟ್‌

ಇನ್ನು ಸುದೀಪ್‌ ಅವರು ಪೈರೆಸಿ ಬಗ್ಗೆ ಈ ಹಿಂದೆ ಮಾತನಾಡಿ, ಈ ಬಗ್ಗೆ ಸುದೀಪ್‌ ಮಾತನಾಡಿ, ಪೈರಸಿ ಬಗ್ಗೆ ನಾನು ಮಾತನಾಡುವ ಅಧಿಕಾರ ಇಲ್ವಾ? ನನ್ನ ಸಿನಿಮಾ ನಾನು ಕಾಪಾಡಿಕೊಳ್ಳಬಾರದಾ? ನನ್ನ ವೇದಿಕೆ ಮೇಲೆ ನಿಂತು ನಾನು ವಾರ್ನ್‌ ಮಾಡೋದು ತಪ್ಪಾ? ಯಾರಿಗೆ ರೀಚ್‌ ಅಗಬೇಕು ಅವರಿಗೆ ಆಗತ್ತೆ.

ಇದನ್ನೂ ಓದಿ: 2026ರ ಸಂಕ್ರಾಂತಿಗೆ ದಕ್ಷಿಣ ಭಾರತದಲ್ಲಿ ಸಿನಿಮಾ ಹಬ್ಬ; ಒಂದು ವಾರದಲ್ಲಿ 7 ಸಿನಿಮಾಗಳು ತೆರೆಗೆ, ನಿಮ್ಮ ಆಯ್ಕೆ ಯಾವುದು?

ನಾನು ಯಾರಿಗೆ ಹೇಳಬೇಕು ಅವರಿಗೆ ಹೇಳಿದೆ. ಯಾವ ಆರ್ಟಿಸ್ಟ್‌ ಸಂಬಂಧಪಟ್ಟ ಅವರಿಗೆ ಹೇಳಿಲ್ಲ. ಎಲ್ಲ ಕಲಾವಿದರ ಬಗ್ಗೆ ನಾನು ಮಾತನಾಡಲ್ಲ. ಎಷ್ಟು ಸಂದರ್ಶನ ನೋಡಿಲ್ಲ ನೀವು? ನಾನು ಆ ಥರ ಏನು ಮಾತನಾಡಲ್ಲ ಎಂದಿದ್ದರು .