ಮೋದಿ ನನಗೊಂದು ಆಧಾರ್ ಕಾರ್ಡ್ ನೀಡಿ; ಭಾರತದಲ್ಲಿ ನೆಲೆಸುವ ಇಚ್ಛೆ ವ್ಯಕ್ತಪಡಿಸಿದ ಅಮೆರಿಕ ಪ್ರವಾಸಿ
Viral Video: ಅಮೆರಿಕ ಮೂಲದ ಪ್ರಸಿದ್ಧ ಸೋಷಿಯಲ್ ಮೀಡಿಯಾ ಕ್ರಿಯೇಟರ್ ವೊಬ್ಬರು ಭಾರತವನ್ನು ಬಿಟ್ಟು ಹೋಗಲಾಗದೆ ಭಾವುಕರಾಗಿ ವಿಡಿಯೊವೊಂದನ್ನು ಶೇರ್ ಮಾಡಿದ್ದಾರೆ. ತಮ್ಮ ಭಾರತದ ಪ್ರವಾಸ ಮುಗಿಸಿ ತಾಯ್ನಾಡಿಗೆ ಮರಳುವ ಕೇವಲ ಎಂಟು ಗಂಟೆಗಳ ಮೊದಲು ಅವರು ಈ ವಿಡಿಯೋ ಹಂಚಿಕೊಂಡಿದ್ದು, ತಮ್ಮ "ನೆಚ್ಚಿನ ದೇಶ" ಭಾರತ ಇಲ್ಲಿಂದ ಹೊರಡುವುದು ಸುಲಭವಲ್ಲ ಎಂದು ಹೇಳಿದ್ದಾರೆ. ತನಗೆ ಭಾರತ ಬಿಟ್ಟು ಹೋಗಲು ಮನಸ್ಸಿಲ್ಲ, ದಯವಿಟ್ಟು ನನಗೊಂದು ಆಧಾರ್ ಕಾರ್ಡ್ ನೀಡಿ ಎಂದು ಪ್ರಧಾನಿ ಮೋದಿಯವರನ್ನು ಟ್ಯಾಗ್ ಮಾಡಿ ವಿನಂತಿ ಮಾಡಿದ್ದಾರೆ.
ಅಮೆರಿಕದ ಪ್ರವಾಸಿ ಗೇಬ್ -
ನವದೆಹಲಿ, ಡಿ. 31: ಭಾರತದ ಸೌಂದರ್ಯಕ್ಕೆ ಮನ ಸೋಲದವರೇ ಇಲ್ಲ. ಇಲ್ಲಿನ ಆಚಾರ- ವಿಚಾರ ಸಂಸ್ಕೃತಿ ಮೆಚ್ಚಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಅದರಲ್ಲೂ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಇಲ್ಲಿಗೆ ಭೇಟಿ ನೀಡಿದ ಹಲವು ವಿದೇಶಿಗರು ಭಾರತೀಯದ ಸಹೃದಯ, ಪ್ರೀತಿ, ಆತಿಥ್ಯದ ಬಗ್ಗೆ ಹೊಗಳಿದ್ದಾರೆ. ಇದೀಗ ಅಮೆರಿಕ ಮೂಲದ ಪ್ರಸಿದ್ಧ ಸೋಶಿಯಲ್ ಮೀಡಿಯಾ ಕ್ರಿಯೇಟರ್ ಒಬ್ಬರು ಭಾರತವನ್ನು ಬಿಟ್ಟು ಹೋಗಲಾಗದೆ ಭಾವುಕರಾಗಿ ವಿಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಗಬ್ರುಜಿ ಎಂದು ಜನಪ್ರಿಯವಾಗಿರುವ ಅಮೆರಿಕದ ಗೇಬ್ ಈ ವಿಡಿಯೊ ಶೇರ್ ಮಾಡಿದ್ದಾರೆ. ತಮ್ಮ ಭಾರತದ ಪ್ರವಾಸ ಮುಗಿಸಿ ತಾಯ್ನಾಡಿಗೆ ಮರಳುವ ಕೇವಲ ಎಂಟು ಗಂಟೆಗಳ ಮೊದಲು ಅವರು ಈ ವಿಡಿಯೊ ಹಂಚಿಕೊಂಡಿದ್ದು, ತಮ್ಮ ನೆಚ್ಚಿನ ದೇಶ ಭಾರತ ಇಲ್ಲಿಂದ ಹೊರಡುವುದು ಸುಲಭವಲ್ಲ ಎಂದು ಹೇಳಿದ್ದಾರೆ. ತನಗೆ ಭಾರತ ಬಿಟ್ಟು ಹೋಗಲು ಮನಸ್ಸಿಲ್ಲ, ದಯವಿಟ್ಟು ನನಗೊಂದು ಆಧಾರ್ ಕಾರ್ಡ್ ನೀಡಿ ಎಂದು ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ವಿನಂತಿ ಮಾಡಿದ್ದಾರೆ.
ವಿಡಿಯೊ ವೀಕ್ಷಣೆ ಮಾಡಿ:
A foreign traveler got emotional while leaving India.
— Swapnil Kommawar (@KommawarSwapnil) December 26, 2025
He said India felt like home, not just a travel destination.
What touched him wasn’t monuments it was daily life:
street food at midnight, sudden help from strangers, simple kindness, and real human connection.
Sometimes… pic.twitter.com/5wM42uNJKj
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಗೇಬ್ ಅತ್ಯಂತ ಭಾವುಕರಾಗಿ ಕಾಣಿಸಿಕೊಂಡಿದ್ದಾರೆ. ಇದು ತನ್ನ ಅತ್ಯಂತ ಇಷ್ಟದ ಸ್ಥಳ. ಇಲ್ಲಿ ಎಂಟು ಗಂಟೆಗಳ ಕಾಲ ಬಾಕಿ ಇರುವಾಗಲೇ ನಾನು ಮೂರ್ನಾಲ್ಕು ಬಾರಿ ಅತ್ತಿದ್ದೇನೆ ಎಂದು ಭಾರತದೊಂದಿಗಿನ ಬಾಂಧವ್ಯವನ್ನು ವಿವರಿಸಿದ್ದಾರೆ. ಭಾರತದಲ್ಲಿ ಬಹಳ ಸಹಜ ಮತ್ತು ಸುಂದರವಾದ ಜೀವನ ಎಂಬುದನ್ನು ಗೇಬ್ ತಿಳಿಸಿದ್ದಾರೆ.
ಕರುವಿಗೆ ಟೂತ್‌ಬ್ರಷ್‌ನಿಂದ ಹಲ್ಲುಜ್ಜಿದ ಪುಟ್ಟ ಬಾಲಕಿ
ಇಲ್ಲಿ ಮಧ್ಯರಾತ್ರಿಯಲ್ಲೂ ಸಿಗುವ ಬೀದಿ ಆಹಾರ, ಕೈಗೆಟುಕುವ ಪ್ರಯಾಣ ಮತ್ತು ಜನರ ಉತ್ತಮ ಸಂಬಂಧ ಇದು ನಿಜವಾದ ಜೀವನ ಎಂದು ಅವರು ಶ್ಲಾಘಿಸಿದ್ದಾರೆ. ಇಲ್ಲಿದ್ದ ಜನರು ತನ್ನನ್ನು ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ ಮಾತನಾಡಿಸಿದ್ದಾರೆ. ಅಮೆರಿಕದಂತಹ ಶ್ರೀಮಂತ ದೇಶದಿಂದ ಬಂದರೂ, ಭಾರತವು ತನಗೆ ಜೀವನದ ನಿಜವಾದ ಅರ್ಥವನ್ನು ಕಲ್ಪಿಸಿದೆ. ಸೌಕರ್ಯ ಎಂದರೆ ಕೇವಲ ಹಣ ಮತ್ತು ಆಸ್ತಿಯಲ್ಲ. ಅದು ಇಲ್ಲಿನ ಜನರ ನಡುವಿನ ಪ್ರೀತಿ ಮತ್ತು ಇಲ್ಲಿ ಜೀವಂತವಾಗಿರುವ ಈ ದೇಶದ ಸಂಸ್ಕೃತಿ ಎಂದ ಹೇಳಿದ್ದಾರೆ. ಗೇಬ್ ಅವರ ಈ ವಿಡಿಯೊಕ್ಕೆ ಭಾರತೀಯರು ಮಾತ್ರವಲ್ಲದೆ ವಿದೇಶಿಯರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಸದ್ಯ ಭಾರಿ ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಭಾರತದ ಬಗ್ಗೆ, ಇಲ್ಲಿನ ಬಾಂಧವ್ಯದ ವ್ಯಕ್ತ ಪಡಿಸಿದ ನಿಮಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಭಾರತದ ಜನರ ಪ್ರೀತಿಗೆ ಮನಸೋಲದವರು ಯಾರು ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.