Serial Actress Rajini: ಜಿಮ್ ಟ್ರೈನರ್ ಅರುಣ್ ವೆಂಕಟೇಶ್ ಜೊತೆ ಸದ್ದಿಲ್ಲದೇ ಹಸೆಮಣೆ ಏರಿದ ಸೀರಿಯಲ್ ನಟಿ ರಜಿನಿ!
Actress Rajini: ಅಮೃತವರ್ಷಿಣಿ’ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ರಜನಿ ಸದ್ದಿಲ್ಲದೆ ಮದುವೆ ಯಾಗಿದ್ದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ರಜನಿ ಸಪ್ತಪದಿ ತುಳಿದಿದ್ದಾರೆ. ಈ ಮದುವೆಯು ಬೆಂಗಳೂರಿನಲ್ಲಿ ನಡೆದಿದ್ದು, ಆಪ್ತರ ಸಮ್ಮುಖದಲ್ಲಿ ನೆರವೇರಿದೆ.
ಜಿಮ್ ಟ್ರೈನರ್ ಜೊತೆ ಸಪ್ತಪತಿ ತುಳಿದ ನಟಿ ರಜಿನಿ -
ಬೆಂಗಳೂರು: ಅಮೃತವರ್ಷಿಣಿ’ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ರಜನಿ (Actress Rajini) ಸದ್ದಿಲ್ಲದೆ ಮದುವೆಯಾಗಿದ್ದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ರಜನಿ ಸಪ್ತಪದಿ ತುಳಿದಿದ್ದಾರೆ. ಈ ಮದುವೆಯು ಬೆಂಗಳೂರಿನಲ್ಲಿ ನಡೆದಿದ್ದು ಆಪ್ತರ ಸಮ್ಮುಖದಲ್ಲಿ ನೆರವೇರಿದೆ. ಎರಡು ವರ್ಷಗಳಿಂದ ಅಧಿಕ ಸಮಯದಿಂದ ರಜಿನಿ ಹಾಗೂ ಅರುಣ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಆಗಲೇ ಇವರಿಬ್ಬರು ಪ್ರೇಮಿಗಳೆಂದು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಪ್ರಶ್ನೆ ಮಾಡಿದಾಗ ರಜಿನಿ ಅವರು “ ನಾವು ಬೆಸ್ಟ್ ಪ್ರೆಂಡ್ಸ್ ಎಂದು ಹೇಳಿದ್ದರು. ಸದ್ಯ ಇವರಿಬ್ಬರ ಮದುವೆಯ ವಿಡಿಯೊ ಸೋಷಿ ಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ರಜಿನಿ ದಂಪತಿಗಳ ಮದುಗೆ ಇಂದು ಬೆಳಗ್ಗೆ 9.30-10.30 ಒಳಗಿನ ಮುಹೂರ್ತದಲ್ಲಿ ಮದುವೆ ನಡೆದಿದೆ. ಮದುವೆಗೆ ಆಪ್ತರಷ್ಟೇ ಭಾಗಿಯಾಗಿದ್ದು ಸೀರಿಯಲ್ ಸೆಲೆಬ್ರಿಟಿಗಳು ಅಭಿಮಾನಿಗಳು ನಟಿಗೆ ಶುಭ ಹಾರೈಸಿದ್ದಾರೆ. ಬಾಡಿ ಬಿಲ್ಡರ್ ಜೊತೆ ರಜಿನಿ ಅವರು ಹಲವು ರೀಲ್ಸ್ ಮಾಡಿದ್ದರು. ಜಿಮ್‌ನಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಆದರೆ ರಜಿನಿ ಅವರು ಅರುಣ್ ಜೊತೆ ಈ ಹಿಂದೆಯೇ ಮದುವೆ ಯಾಗಿ ದ್ದರು ಎಂದು ಗಾಸಿಪ್ ಹರಡಿದಾಗ ನಾನು ಕದ್ದುಮುಚ್ಚಿ ಮದುವೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಮದುವೆ ಆಗೋದಾದ್ರೆ ನಾನು ಎಲ್ಲರನ್ನೂ ಕರೆಯು ವುದಿಲ್ವಾ? ಹಾಗಾಗಿ ನನ್ನ ಮದುವೆಯೇ ಆಗಿಲ್ಲ, ಆಗದೇ ಇದ್ದರೆ ಎಲ್ಲಿಂದ ಮದುವೆಗೆ ಕರೆಯಲಿ?' ಎಂದು ರಜಿನಿ ಗೊಂದಲಗಳಿಗೆ ತೆರೆ ಎಳೆದಿದ್ದರು.
ಜಿಮ್ ಟ್ರೈನರ್ ಜೊತೆ ಸಪ್ತಪತಿ ತುಳಿದ ನಟಿ ರಜಿನಿ
ಸದ್ಯ ರಜಿನಿ ಅವರ ಗಾಸಿಪ್ ಸುದ್ದಿ ನಿಜವಾಗಿದ್ದು ಅವರ ಮದುವೆ ವಿಡಿಯೊ ವೈರಲ್ ಆಗುತ್ತಿದೆ. ರಜಿನಿ ಬಹಳ ಗ್ರ್ಯಾಂಡ್ ಆಗಿ ಸೀರೆಯಲ್ಲಿ ಮಿಂಚಿದ್ದಾರೆ. ಅರುಣ್ ವೆಂಕಟೇಶ್ ಅವರು ಬಿಳಿ ಬಣ್ಣದ ಪಂಚೆತೊಟ್ಡು ಮದುವೆಗೆ ರೆಡಿಯಾಗಿದ್ದಾರೆ. ರಜಿನಿ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲೂ ಮಿಂಚಿದ್ದಾರೆ. ಅವರ ನಟನೆಯ 'ಅಮೃತವರ್ಷಿಣಿ’ ಸೀರಿಯಲ್ ಬಹಳಷ್ಟು ಫೇಮಸ್ ಆಗಿತ್ತು. ಆ ಬಳಿಕ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಬಳಿಕ ಅವರು ರಿಯಾಲಿಟಿ ಶೋಗಳಲ್ಲೂ ಕಾಣಿಸಿದರು. ಡ್ಯಾನ್ಸ್ ರಿಯಾಲಿಟಿ ಶೋ, 'ಮಜಾ ಟಾಕೀಸ್' ಶೋನಲ್ಲಿಯೂ ರಜಿನಿ ಭಾಗವಹಿಸಿದ್ದರು. ಅದೇ ರೀತಿ ಲವು ಕಾರ್ಯಕ್ರಮ ಕೂಡ ಅವರು ಹೋಸ್ಟ್ ಮಾಡಿದ್ದರು.ಅಂದಹಾಗೆ ಅರುಣ್ ಗೌಡ ಅವರು ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದಾರೆ.