ಬಾಕ್ಸ್ ಆಫೀಸ್‌ನಲ್ಲಿ ʻಕರುಪ್ಪುʼ ಸಿನಿಮಾ ಭರ್ಜರಿ ಹಿಟ್; ನಟಿ ತ್ರಿಶಾ ಕೃಷ್ಣನ್ ಸಂಭಾವನೆ ದಾಖಲೆ ಪ್ರಮಾಣದಲ್ಲಿ ಏರಿಕೆ
ಸೂರ್ಯ ಅಭಿನಯದ 'ಕರುಪ್ಪು' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ, ಆ ಚಿತ್ರದ ನಾಯಕಿ ತ್ರಿಶಾ ಕೃಷ್ಣ ತಮ್ಮ ಸಂಭಾವನೆಯನ್ನು ದೊಡ್ಡಮಟ್ಟದಲ್ಲಿ ಏರಿಸಿಕೊಂಡಿದ್ಧಾರೆ ಎಂಬ ಮೂಲಗಳು ತಿಳಿಸಿವೆ. 3 ದಶಕಗಳಿಂದ ಚಿತ್ರರಂಗ ಆಳುತ್ತಿರುವ ತ್ರಿಶಾ ಅವರ ಬೇಡಿಕೆ ಕೇಳಿ ನಿರ್ಮಾಪಕರು ಸದ್ಯ ಶಾಕ್ ಆಗಿದ್ದಾರಂತೆ.
-
ನಟಿ ತ್ರಿಶಾ ಕೃಷ್ಣನ್ ಮತ್ತೊಮ್ಮೆ ಚಿತ್ರರಂಗದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಕಳೆದ 3 ದಶಕಗಳಿಗೂ ಹೆಚ್ಚು ಕಾಲ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ತ್ರಿಶಾ, ಈಚೆಗೆ ‘ಕರುಪ್ಪು’ ಸಿನಿಮಾದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಜೊತೆಗೆ ತಮ್ಮ ಸಂಭಾವನೆಯನ್ನು ಕೂಡ ಭಾರಿ ಪ್ರಮಾಣದಲ್ಲಿ ಏರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕರುಪ್ಪು ಸಿನಿಮಾದಿಂದ ದೊಡ್ಡ ಬೂಸ್ಟ್
ಕಳೆದ 25 ವರ್ಷಗಳಿಗೂ ಅಧಿಕ ಸಮಯದಿಂದ ನಾಯಕಿಯಾಗಿ ಮಿಂಚುತ್ತಿರುವ ತ್ರಿಶಾ ಈಗಲೂ ತಮ್ಮ ಕ್ರೇಜ್ ಮತ್ತು ಜನಪ್ರಿಯತೆಯನ್ನು ಹಾಗೇ ಉಳಿಸಿಕೊಂಡಿದ್ದಾರೆ. ಸದ್ಯ ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತದ ಇತರ ಭಾಷೆಗಳ ಚಿತ್ರಗಳಲ್ಲಿ ಯಶಸ್ವಿಯಾಗಿ ನಟಿಸಿರುವ ಅವರು, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ʻಕರುಪ್ಪುʼ ಗೆಲುವು ಅವರಿಗೆ ದೊಡ್ಡ ಬೂಸ್ಟ್ ನೀಡಿದೆ.
12 ಕೋಟಿ ರೂ.ಗಳಿಗೆ ತ್ರಿಶಾ ಸಂಭಾವನೆ ಏರಿಕೆ
‘ಕರುಪ್ಪು’ ಚಿತ್ರದ ಯಶಸ್ಸಿನ ನಂತರ ತ್ರಿಶಾ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಂಭಾವನೆಯದ್ದೇ ಚರ್ಚೆ. ಸದ್ಯ ತಮಿಳಿನ ದೊಡ್ಡ ಪ್ಯಾನ್-ಇಂಡಿಯಾ ಚಿತ್ರವೊಂದಕ್ಕೆ ತ್ರಿಶಾ ಅವರನ್ನು ನಾಯಕಿಯನ್ನಾಗಿ ಸೆಲೆಕ್ಟ್ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದ್ದು, ಅದಕ್ಕಾಗಿ ತ್ರಿಶಾ ಬರೋಬ್ಬರಿ 12 ಕೋಟಿ ರೂಪಾಯಿಗಳ ಭಾರಿ ಸಂಭಾವನೆಗೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, 'ಕರುಪ್ಪು' ಚಿತ್ರಕ್ಕೂ ತ್ರಿಶಾ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದಿದ್ದರಂತೆ. ಈಗೇನಾದರೂ 12 ಕೋಟಿ ರೂ.ಗಳನ್ನು ಸಂಭಾವನೆಯಾಗಿ ತ್ರಿಶಾ ಪಡೆದುಕೊಂಡರೆ, ಅದು ಹೊಸ ದಾಖಲೆಯಾಗಲಿದೆ.
ಪ್ರಸ್ತುತ ಈ ಸಂಭಾವನೆಗೆ ಸಂಬಂಧಿಸಿದಂತೆ ತ್ರಿಶಾ ಜೊತೆ ನಿರ್ಮಾಪಕರು ಮಾತುಕತೆ ನಡೆಸುತ್ತಿದ್ದಾರಂತೆ. ಚಿತ್ರದ ತಯಾರಕರು ಈ ಮೊತ್ತವನ್ನು ಕೊಂಚ ಕಡಿಮೆ ಮಾಡುವಂತೆ ಸಂಧಾನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಈ ವರದಿಗಳ ಬಗ್ಗೆ ನಟಿ ತ್ರಿಷಾ ಅಥವಾ ನಿರ್ಮಾಣ ಸಂಸ್ಥೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.
Vijay Trisha: ತ್ರಿಶಾ ಜೊತೆಯಲ್ಲೇ ಬಂದ ಸಿಎಂ ವಿಜಯ್; ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಜೋಡಿ
ಬಿಗ್ ಹಿಟ್ ಮೂಲಕ ಕಮ್‌ಬ್ಯಾಕ್ ಮಾಡುವ ತ್ರಿಶಾ
ಇತ್ತೀಚೆಗೆ ತ್ರಿಶಾ ಕೇವಲ ತಮ್ಮ ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೆ, ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಹಲವಾರು ಚರ್ಚೆಗಳಿಂದಲೂ ಸುದ್ದಿಯಲ್ಲಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದರೂ, ಪ್ರತಿ ಬಾರಿಯೂ ಯಶಸ್ವಿ ಸಿನಿಮಾಗಳ ಮೂಲಕ ಕಂಬ್ಯಾಕ್ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ತ್ರಿಶಾ ಮೇಲಿನ ನಿರೀಕ್ಷೆಗಳು ಗಗನಕ್ಕೇರಿದ್ದವು. ಆದರೆ, ಆ ನಂತರ ಅಜಿತ್ ಕುಮಾರ್ ಜೊತೆಗಿನ ‘ವಿಡಾಮುಯರ್ಚಿ’ ಮತ್ತು ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸೇರಿದಂತೆ ಅವರ ಕೆಲವು ಇತ್ತೀಚಿನ ಚಿತ್ರಗಳು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದವು. ಆದರೆ ಈಗ ಸೂರ್ಯ ಜೊತೆಗಿನ ʻಕರುಪ್ಪುʼ ಮೂಲಕ ದೊಡ್ಡ ಗೆಲುವನ್ನ ತಮ್ಮದಾಗಿಸಿಕೊಂಡಿದ್ದಾರೆ ತ್ರಿಶಾ.