ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Seial: ದೀಪಿಕಾ ಬದುಕಿನ ಮಹತ್ವದ ರಹಸ್ಯ ಬಿಚ್ಚಿಟ್ರು ಅಜ್ಜಿ!

Amruthadhaare Seial: ಅಮೃತಧಾರೆ ಧಾರಾವಾಹಿಯು ಕುತೂಹಲಕಾರಿ ತಿರುವುಗಳೊಂದಿಗೆ ಅಂತಿಮ ಘಟ್ಟ ತಲುಪಿದೆ. ಭೂಮಿಕಾ ಜಾಗದಲ್ಲಿ ಬಂದಿರೋ ದೀಪಿಕಾಗೆ ಅಸಲಿಯತ್ತು ಗೊತ್ತಾಗಿದೆ. ದೀಪಿಕಾಗೆ ತನ್ನ ಹುಟ್ಟಿನ ಗುಟ್ಟು ಬಯಲಾಗಿದೆ.ಅವಳ ಅಜ್ಜಿ, ದೀಪಿಕಾಗೆ ಅವಳು ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ತಿಳಿಸಿದ್ದಾಳೆ. ಅತ್ತ ಗೌತಮ್ ಬರುವುದರೊಳಗೆ ಎಲ್ಲಾ ಮುಗಿಸಿ, ಓಡಿಹೋಗುವ ಪ್ಲ್ಯಾನ್​ ಮಾಡುತ್ತಿದ್ದಾರೆ ತಾಯಿ-ಮಗ.

Amruthadhaare Seial: ದೀಪಿಕಾ ಬದುಕಿನ ಮಹತ್ವದ ರಹಸ್ಯ ಬಿಚ್ಚಿಟ್ರು ಅಜ್ಜಿ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Oct 16, 2026 10:19 AM

ಅಮೃತಧಾರೆ ಧಾರಾವಾಹಿಯು (Amruthadhaare serial) ಕುತೂಹಲಕಾರಿ ತಿರುವುಗಳೊಂದಿಗೆ ಅಂತಿಮ ಘಟ್ಟ ತಲುಪಿದೆ. ಭೂಮಿಕಾ (Bhoomika) ಜಾಗದಲ್ಲಿ ಬಂದಿರೋ ದೀಪಿಕಾಗೆ ಅಸಲಿಯತ್ತು ಗೊತ್ತಾಗಿದೆ. ದೀಪಿಕಾಗೆ ತನ್ನ ಹುಟ್ಟಿನ ಗುಟ್ಟು ಬಯಲಾಗಿದೆ.ಅವಳ ಅಜ್ಜಿ, ದೀಪಿಕಾಗೆ ಅವಳು ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ತಿಳಿಸಿದ್ದಾಳೆ. ಅತ್ತ ಗೌತಮ್ (Gowtham) ​ ಬರುವುದರೊಳಗೆ ಎಲ್ಲಾ ಮುಗಿಸಿ, ಓಡಿಹೋಗುವ ಪ್ಲ್ಯಾನ್​ ಮಾಡುತ್ತಿದ್ದಾರೆ ತಾಯಿ-ಮಗ.

ದೀಪಿಕಾ ಬದುಕಿನ ಮಹತ್ವದ ರಹಸ್ಯ

ಹೌದು ಇತ್ತ ದೀಪಿಕಾ ಮತ್ತು ಭೂಮಿಕಾ ಒಂದಾಗಿ ಶತ್ರು ಸಂಹಾರಕ್ಕೆ ಮುಂದಾಗಿದ್ದಾರೆ. ಅದೇ ಹೊತ್ತಿಗೆ ದೀಪಿಕಾ ಅಜ್ಜಿ ಎಲ್ಲ ಸತ್ಯವನ್ನೂ ಹೇಳಿದ್ದಾಳೆ. ನನ್ನ ಮಗಳು ಮತ್ತು ಅಳಿಯ ದೇವಸ್ಥಾನಕ್ಕೆ ಮಕ್ಕಳ ಕೊರಗು ನೀಗಿಸಲು ಬೇಡಿಕೊಳ್ಳಲು ಹೋದ ಸಮಯದಲ್ಲಿ ದೀಪಿಕಾ ಸಿಕ್ಕ ವಿಷಯವನ್ನುಹೇಳಿದ್ದಾಳೆ. ದೀಪಿಕಾ ಅಮ್ಮ ಬಂದು ಮಗುವನ್ನು ಇಟ್ಟು, ಈ ಮಗುವಿನಿಂದ ನನ್ನ ಗಂಡನ ಪ್ರಾಣಕ್ಕೆ ಅಪಾಯ ಇದೆ ಎಂದು ಹೇಳಿದ್ದಾರೆ. ಆದ್ದರಿಂದ ನೀನೇ ಕಾಪಾಡು ಎಂದು ಮಗುವನ್ನು ದೇವರ ಎದುರು ಇಟ್ಟು ಹೋದ ವಿಷಯ ತಿಳಿಸಿದ್ದಾಳೆ.

ಇದನ್ನೂ ಓದಿ: Bigg Boss Kannada 13: ‘ಇಷ್ಟು ಕೆಳಮಟ್ಟಕ್ಕೆ ಇಳಿದು ಗೆಲ್ಲಬಾರದು’; ಗಾನವಿ ಬಗ್ಗೆ ಗಗನ್‌ ಅಸಮಾಧಾನ

ಆ ಮಗುವಿನ ಬಳಿ ದುಡ್ಡು ಇಟ್ಟು ಹೋಗಿದ್ದರು. ಕೊನೆಗೆ ನನ್ನ ಮಗಳು ಅಳಿಯ ನಿನ್ನನ್ನು ಕರೆದುಕೊಂಡು ಬಂದರು. ಆದರೆ ಕೆಲವು ದಿನಗಳ ನಂತರ ನಿನ್ನ ಅಮ್ಮ ಬಂದು ಮಗುವನ್ನು ಕೊಡುವಂತೆ ಹೇಳಿದಳು ಎಂದು ವಿಷಯ ತಿಳಿಸಿದ್ದಾಳೆ. ಆದರೆ ಮಗುವನ್ನು ಕರೆದುಕೊಂಡು ಹೋದರೆ ಪ್ರಾಣಕ್ಕೆ ಅಪಾಯ ಇದೆ ಎಂದು ಹೇಳಿದ್ದೀರಲ್ಲ. ಅದಕ್ಕಾಗಿ ನಾವೇ ಮಗುವನ್ನು ಸಾಕುತ್ತೇವೆ ಎಂದು ನಿನ್ನ ಸಾಕು ಅಪ್ಪ, ಅಮ್ಮ ಹೇಳಿ ನಿನ್ನನ್ನು ಆ ಊರಿನಿಂದ ಬೇರೆ ಕಡೆ ಕರೆದುಕೊಂಡು ಬಂದರು ಎಂದಿದ್ದಾಳೆ.



ಭೂಮಿಕಾ ಜಾಗದಲ್ಲಿ ಬಂದಿರೋ ದೀಪಿಕಾಗೆ ಅಸಲಿಯತ್ತು ಗೊತ್ತಾಗಿದೆ. ದೀಪಿಕಾ ಮತ್ತು ಭೂಮಿಕಾ ಅವಳಿ ಮಕ್ಕಳು ಎನ್ನೋದಷ್ಟೇ ಈಗ ತಿಳಿಯಬೇಕಿದೆ. ಅಷ್ಟಕ್ಕೂ ಎಲ್ಲಾ ಆಸ್ತಿಗೆ ದೀಪಿಕಾಳಿಂದ ಸಹಿ ಹಾಕಿಸಿಕೊಳ್ಳಲು ಶಕುಂತಲಾ ಮತ್ತು ಜೈದೇವ್​ ಕಾತರದಿಂದ ಕಾಯುತ್ತಿದ್ದಾರೆ.ಗೌತಮ್​ ಎಂಟ್ರಿಯಾಗಿದೆ. ಆಸ್ತಿಗಾಗಿ ತನ್ನ ಪ್ರೀತಿಯ ಪತ್ನಿ ಭೂಮಿಕಾಳನ್ನು ಇಬ್ಬರೂ ಸೇರಿ ಸಾಯಿಸಲು ಹೊರಟಿರುವ ಸತ್ಯ ಗೊತ್ತಾದರೆ ಗೌತಮ್​ ಏನು ಮಾಡುತ್ತಾನೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಇದನ್ನೂ ಓದಿ: Bigg Boss Kannada 13: ‘ಇಷ್ಟು ಕೆಳಮಟ್ಟಕ್ಕೆ ಇಳಿದು ಗೆಲ್ಲಬಾರದು’; ಗಾನವಿ ಬಗ್ಗೆ ಗಗನ್‌ ಅಸಮಾಧಾನ

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.