ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಗೌತಮ್ - ಭೂಮಿಕಾಗೆ ವಿಧಿಯ ಸವಾಲು! ಮಲ್ಲಿ ಖಡಕ್ ಮಾತಿಗೆ ಶಕುಂತಲಾ ಶಾಕ್‌

Amruthadhaare: ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋ ವಿಚಾರ ಗೊತ್ತಾಗಿದೆ. ಮದುವೆ ವಾರ್ಷಿಕೋತ್ಸವ ದಿನ ಭೂಮಿ ಹಾಗೂ ಗೌತಮ್‌ ಡಿನ್ನರ್‌ ಡೇಟ್‌ ಹೋಗಿದ್ದರು. ಅಲ್ಲಿ ರಕ್ತದ ವಾಂತಿ ಮಾಡಿಕೊಂಡಿದ್ದಾಳೆ ಭೂಮಿ.

Amruthadhaare Serial: ಗೌತಮ್ - ಭೂಮಿಕಾಗೆ ವಿಧಿಯ ಸವಾಲು!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jul 18, 2026 10:12 AM

ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare serial) ಗೌತಮ್‌ಗೆ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋ ವಿಚಾರ ಗೊತ್ತಾಗಿದೆ. ಮದುವೆ ವಾರ್ಷಿಕೋತ್ಸವ ದಿನ ಭೂಮಿ ಹಾಗೂ ಗೌತಮ್‌ (Gowtham Bhoomi) ಡಿನ್ನರ್‌ ಡೇಟ್‌ ಹೋಗಿದ್ದರು. ಅಲ್ಲಿ ರಕ್ತದ ವಾಂತಿ ಮಾಡಿಕೊಂಡಿದ್ದಾಳೆ ಭೂಮಿ.

ಶಕುಂತಲಾ ಬೆನ್ನ ಹಿಂದೆಯೇ ಸೋದರ ಲಕ್ಷ್ಮೀಕಾಂತ್

ಇದಾದ ಬಳಿಕ ಗೌತಮ್‌ಗೆ ಅನುಮಾನ ಬಂದು ವೈದ್ಯರ ಬಳಿ ಹೋಗಿ ಭೂಮಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಆಗ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋ ಬಗ್ಗೆ ಹೇಳಿದ್ದಾರೆ. ಗೌತಮ್‌ ಗಾಬರಿ ಆಗಿದ್ದಾನೆ. ಗೌತಮ್‌ ಈ ಬಗ್ಗೆ ಭೂಮಿ ಬಳಿ ಚರ್ಚಿಸಿದ್ದಾರೆ. ನಮ್ಮ ಪ್ರೀತಿ ಮುಂದೆ ಇದನ್ನು ಗೆಲ್ಲುತ್ತೇವೆ ಎಂದು ಭರವಸೆ ಕೊಟ್ಟಿದ್ದಾನೆ.

ಇದನ್ನೂ ಓದಿ: Amitabh Bachchan: ಹೊಸ ಥೀಮ್‌ನೊಂದಿಗೆ ಬರ್ತಿದೆ ʻKaun Banega Crorepatiʼ! ಈ ಬಾರಿ ವಿಶೇಷತೆ ಏನು?

ಭೂಮಿ ತನ್ನೆಲ್ಲಾ ಜವಾಬ್ದಾರಿಗಳನ್ನು ಗೌತಮ್ ಹೆಗಲಿಗೆ ರವಾನಿಸುವ ಕೆಲಸವನ್ನು ಭೂಮಿಕಾ ಮಾಡುತ್ತಿದ್ದಾಳೆ. ಈ ನಡುವೆ ಸಿಸ್ಟರ್ ಶಕುಂತಲಾ ಬೆನ್ನ ಹಿಂದೆಯೇ ಸೋದರ ಲಕ್ಷ್ಮೀಕಾಂತ್ ಬಿದ್ದಿದ್ದಾನೆ.

ಎಲ್ಲರ ಮುಂದೆ ತಾನು ಬದಲಾದಂತೆ ನಟಿಸುತ್ತಿರುವ ಶಕುಂತಲಾ, ಕೆಡಿ ಮಗ ಜೈದೇವ್ ಜೊತೆ ಕೈ ಜೋಡಿಸಿದ್ದಾಳೆ. ಶಕುಂತಲಾಳಲ್ಲಿ ಹಳೆಯ ದ್ವೇಷ ಕಾಣಿಸುತ್ತಿರೋದು ಲಕ್ಷ್ಮೀಕಾಂತ್ ಗಮನಕ್ಕೆ ಬಂದಿದೆ. ಮತ್ತೊಂದೆಡೆ ಮಲ್ಲಿ ಕಂಬ್ಯಾಕ್, ಶಕುಂತಲಾಳಲ್ಲಿ ಭಯ ಹುಟ್ಟಿಸಿದೆ. ಶಕುಂತಲಾಳನ್ನು ಭೇಟಿಯಾದ ಮಲ್ಲಿ, ಐಪಿಎಸ್ ಅಧಿಕಾರಿಯಂತೆಯೇ ಮಾತನಾಡಿ ತನ್ನ ಮುಂದಿನ ಗುರಿ ಮಾಜಿ ಗಂಡ ಜೈದೇವ್ ಎಂಬುದನ್ನು ಹೇಳಿದ್ದಾಳೆ.



ಇದರಿಂದ ಮಲ್ಲಿಯನ್ನು ಎದುರು ಹಾಕಿಕೊಳ್ಳೋ ಮುನ್ನ ನೂರು ಬಾರಿ ಯೋಚಿಸಬೇಕು ಎಂದು ಶಕುಂತಲಾ ನಿರ್ಧರಿಸಿದ್ದಾಳೆ. ಜೈದೇವ್ ಮನೆಯಿಂದ ಹೊರಗೆ ಬರಲು ಮತ್ತು ಭೂಮಿಕಾ ತಮ್ಮ ವಿರುದ್ಧ ನಿಂತಿರೋದಕ್ಕೆಲ್ಲಾ ಮಲ್ಲಿಯೇ ಕಾರಣ. ಹಾಗಾಗಿ ಭೂಮಿಕಾಗಿಂತ ಮಲ್ಲಿಯನ್ನೇ ಮುಗಿಸಬೇಕು ಎಂದು ಜೈದೇವ್ ಗುಡುಗಿದ್ದಾನೆ. ಭೂಮಿಕಾಗೆ ಕ್ಯಾನ್ಸರ್ ಬಂದಿರುವ ವಿಷಯ ತಿಳಿದ್ರೆ ಶಕುಂತಲಾ ಅದನ್ನು ತನ್ನ ಲಾಭಕ್ಕೆ ಹೇಗೆ ಬಳಸಿಕೊಳ್ತಾಳೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

ಧಾರಾವಾಹಿ ಇನ್ನೇನು ಮುಗಿಯುತ್ತದೆ. ಕೇಡಿ ಜೈದೇವ್‌ಗೆ ಶಿಕ್ಷೆಯಾಗೋದು ಬಾಕಿ ಇದೆ ಎಂದೇ ವೀಕ್ಷಕರು ಭಾವಿಸಿದ್ದರು. ಅದರ ಮಧ್ಯೆ, ನಾಯಕಿ ಭೂಮಿಕಾಗೆ ಬ್ರೆಸ್ಟ್‌ ಕ್ಯಾನ್ಸರ್‌ ಬಂದಿರೋದನ್ನ ವೀಕ್ಷಕರು ಸಹಿಸುತ್ತಿಲ್ಲ. ನೀವು ಕ್ಯಾನ್ಸರ್‌ಗೆ ಚಿಕಿತ್ಸೆ ಇಲ್ಲವೆಂಬಂತೆ ಹೇಳುತ್ತ, ಅನೇಕ ಕ್ಯಾನ್ಸರ್‌ ರೋಗಿಗಳಲ್ಲೂ ಭಯ ಹುಟ್ಟಿಸುತ್ತಿದ್ದೀರಿ ಎಂದೂ ತಕರಾರು ತೆಗೆಯುತ್ತಿದ್ದಾರೆ.

ಇದನ್ನೂ ಓದಿ: Samantha Ruth Prabhu : ನಟಿ ಸಮಂತಾ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ