Amruthadhaare Serial: ಸದ್ದಿಲ್ಲದೇ ಎಂಗೇಜ್ ಆದ ʻಅಮೃತಧಾರೆʼ ಸೀರಿಯಲ್ ನಟಿ ದಿಯಾ!
Amruthadhaare Serial: ಈ ಹಿಂದೆ 'ಪುಣ್ಯವತಿ' ಧಾರಾವಾಹಿಯಲ್ಲೂ ಅವರು ನಟಿಸಿದ್ದರು. ರಾಧಿಕಾ ಧಾರಾವಾಹಿಯಲ್ಲಿಯೂ ನಟಿ ನಟಿಸಿದ್ದರು. ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಎಂಗೇಜ್ ಆಗಿದ್ದಾರೆ, ಮದುವೆ ಆಗಲು ರೆಡಿ ಆಗಿದ್ದಾರೆ. ಪ್ರಿ ವೆಡ್ಡಿಂಗ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.
ಶ್ವೇತಾ ಗೌಡ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈದೇವ್ ಪತ್ನಿ ದಿಯಾ (Dia) ಪಾತ್ರದಲ್ಲಿ ಶ್ವೇತಾ ಗೌಡ (Shwrtha Gowda) ಅವರು ನಟಿಸಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ದಿಯಾ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ರಿಯಲ್ ಲೈಫನಲ್ಲಿ (Real Life) ಮದುವೆ ಆಗುತ್ತಿದ್ದಾರೆ.
ಶ್ವೇತಾ ಗೌಡ ಎಂಗೇಜ್!
ಈ ಹಿಂದೆ 'ಪುಣ್ಯವತಿ' ಧಾರಾವಾಹಿಯಲ್ಲೂ ಅವರು ನಟಿಸಿದ್ದರು. ರಾಧಿಕಾ ಧಾರಾವಾಹಿಯಲ್ಲಿಯೂ ನಟಿ ನಟಿಸಿದ್ದರು. ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಎಂಗೇಜ್ ಆಗಿದ್ದಾರೆ, ಮದುವೆ ಆಗಲು ರೆಡಿ ಆಗಿದ್ದಾರೆ. ಪ್ರಿ ವೆಡ್ಡಿಂಗ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Kartavya OTT: ಈ ಮೂವಿ ಮೂಲಕ ಮತ್ತೆ ಸೈಫ್ ಅಲಿ ಖಾನ್ ಒಟಿಟಿಗೆ ಎಂಟ್ರಿ! ಸ್ಟ್ರೀಮಿಂಗ್ ಯಾವಾಗ?
ಮೇ 14ರಂದು ಇವರು ಮದುವೆ ಆಗಲಿದ್ದಾರೆ. ಯದುವೀರ್ ಸುನೀಲ್ ಚಂದ್ರ ಜೊತೆ ಇವರು ಎಂಗೇಜ್ ಆಗಿದ್ದಾರೆ ಎನ್ನಲಾಗಿದೆ. ಅಂದಹಾಗೆ ಯದುವೀರ್ ಯಾರು? ವೃತ್ತಿ ಏನು ಎನ್ನೋದು ಕೂಡ ರಿವೀಲ್ ಆಗಿಲ್ಲ. ಈ ಬಗ್ಗೆ ಶ್ವೇತಾ ಅವರೇ ಮಾಹಿತಿ ಕೊಡಬೇಕಿದೆ. ಇನ್ನೊಂದು ಕಡೆ ಮದುವೆ ಬಳಿಕ ಅವರು ನಟಿಸ್ತಾರಾ? ಇಲ್ಲವಾ ಎಂದು ಕೂಡ ಮಾಹಿತಿ ಇಲ್ಲ.
ಧಾರಾವಾಹಿ ವಿಚಾರಕ್ಕೆ ಬರೋದಾದರೆ , ದಿಯಾ ಈಗ ಜೈದೇವ್‌ಗೆ ಕೈಕೊಟ್ಟು ಓಡಿ ಹೋಗಿದ್ದಾಳೆ. ಮನೆಯಲ್ಲಿ ಇದ್ದ ಒಡವೆ ಬಂಗಾರ ಎಲ್ಲವನ್ನೂ ಕದ್ದುಕೊಂಡು ಪರಾರಿಯಾಗಿದ್ದಾಳೆ.
ಜಯದೇವ್ ಈಗ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ, ಅವನು ಒಂದಿಷ್ಟು ಹಣ, ಬಂಗಾರವನ್ನು ಇಟ್ಟುಕೊಂಡಿದ್ದು, ಅದನ್ನು ಬಳಸಿ ಅವನು ವಿದೇಶಕ್ಕೆ ಹೋಗಿ ಸೆಟಲ್ ಆಗಬೇಕು ಎಂದುಕೊಂಡಿದ್ದನು. ಆದರೆ ಈಗ ಮನೆ ಸೀಜ್ ಆಗಿದೆ. ಜಯದೇವ್ ಬೀದಿಗೆ ಬಿದ್ದಿದ್ದಾನೆ.
ಇದನ್ನೂ ಓದಿ: Amruthadhaare Serial : ಅಹಂಕಾರ ತ್ಯಜಿಸಿ ಪಶ್ಚಾತಾಪದಲ್ಲಿ ಮಿಂದೆದ್ದ ಶಕುಂತಲಾ! ಬೀದಿಗೆ ಬಂದ ಜಯದೇವ್
ಶಕುಂತಲಾ ಬೀದಿ ಪಾಲಾಗಿದ್ದಾಗ ಮತ್ತೆ ಗೌತಮ್ ಕರೆದುಕೊಂಡು ಬಂದು ತಾಯಿಯನ್ನು ಸಲಹುತ್ತಿದ್ದಾನೆ. ಕಥೆ ಈಗ ನೋಡ್ತಾ ಇದ್ದರೆ ಧಾರಾವಾಹಿ ಅಂತ್ಯ ಕಾಣುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಈಗಾಗಲೇ ಜೀ ವಾಹಿನಿ ಹೊಸ ಸೀರಿಯಲ್ ಪ್ರೋಮೋ ಹಂಚಿಕೊಂಡಿದೆ.