ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial : ಅಹಂಕಾರ ತ್ಯಜಿಸಿ ಪಶ್ಚಾತಾಪದಲ್ಲಿ ಮಿಂದೆದ್ದ ಶಕುಂತಲಾ! ಬೀದಿಗೆ ಬಂದ ಜಯದೇವ್

Amruthadhaare Serial : ‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗಿತ್ತು. ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಒಂದು ಕಡೆ ಶಕುಂತಲಾಗೆ (Shakuntala) ಪಶ್ಚಾತ್ತಾಪ ಆಗ್ತಾ ಇದ್ದರೆ, ಇನ್ನೊಂದು ಕಡೆ ಜೈದೇವ್‌ ಪತ್ನಿ ದಿಯಾ ಮೋಸ ಮಾಡಿ ಹಣ, ಚಿನ್ನದೊಂದಿಗೆ ಪರಾರಿಯಾಗಿದ್ದಾಳೆ.

Amruthadhaare: ಅಹಂಕಾರ ತ್ಯಜಿಸಿ ಪಶ್ಚಾತಾಪದಲ್ಲಿ ಮಿಂದೆದ್ದ ಶಕುಂತಲಾ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Apr 30, 2026 10:48 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare serial ) ಮೇ ಅಂತ್ಯಕ್ಕೆ ಮುಕ್ತಾಯವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಥೆ ಸಾಗುವ ರೀತಿ ನೋಡಿ ವೀಕ್ಷಕರು ಊಹಿಸುತ್ತಿದ್ದಾರೆ. ಒಂದು ಕಡೆ ಶಕುಂತಲಾಗೆ (Shakuntala) ಪಶ್ಚಾತ್ತಾಪ ಆಗ್ತಾ ಇದ್ದರೆ, ಇನ್ನೊಂದು ಕಡೆ ಜೈದೇವ್‌ ಪತ್ನಿ ದಿಯಾ ಮೋಸ ಮಾಡಿ ಹಣ, ಚಿನ್ನದೊಂದಿಗೆ ಪರಾರಿಯಾಗಿದ್ದಾಳೆ. ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಜಯದೇವ್ ಬೀದಿಗೆ ಬಿದ್ದಿದ್ದಾನೆ.

ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್

‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗಿತ್ತು. ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಇಡಿ ಅಧಿಕಾರಿಗಳು ಅಟ್ಯಾಕ್‌ ಮಾಡಿದ್ದಾರೆ. ಜೊತೆಗಿದ್ದ ದಿಯಾ ಕೂಡ ಜೈದೇವ್‌ಗೆ ಮೋಸ ಮಾಡಿದ್ದಾಳೆ. ಹಣ ಹಾಗೂ ಚಿನ್ನವನ್ನು ತೆಗೆದುಕೊಂಡು ಜಯದೇವ್ ಪತ್ನಿ ದಿಯಾ ಓಡಿ ಹೋಗಿದ್ದಾಳೆ.

ಇದನ್ನೂ ಓದಿ: Dacoit OTT Release: ಅಡಿವಿ ಶೇಷ್-ಮೃಣಾಲ್‌ ನಟನೆಯ 'ಡಕಾಯಿತ್' ಒಟಿಟಿ ರಿಲೀಸ್‌ ಯಾವಾಗ?

ಶಕುಂತಲಾಗೆ ಕ್ಷಮೆ ನೀಡ್ತಾಳಾ ಭಾಗ್ಯಮ್ಮ?

ಶಕುಂತಲಾ ಬೀದಿ ಪಾಲಾಗಿದ್ದಾಗ ಮತ್ತೆ ಗೌತಮ್‌ ಕರೆದುಕೊಂಡು ಬಂದು ತಾಯಿಯನ್ನು ಸಲಹುತ್ತಿದ್ದಾನೆ. ಭಾಗ್ಯಮ್ಮ ಹಾಗೂ ಶಕುಂತಲಾ ಮುಖಾಮುಖಿ ಆಗಿದ್ದಾರೆ. ಭಾಗ್ಯಮ್ಮ ಕೂಡ ಮಕ್ಕಳನ್ನು ನಾವು ಹೇಗೆ ಸಾಕುತ್ತೇವೋ ಹಾಗೆ ಇರ್ತಾರೆ. ಗೌತಮ್‌ಗೆ ಪ್ರೀತಿ ಕೊಡುದು ಅಷ್ಟೇ ಗೊತ್ತು. ಮತ್ತೆ ವಿಷದ ಹಾವಿಗೆ ಹಾಲು ಎರೆಯುವಂತೆ ಮಾಡಬೇಡ ಎಂದಿದ್ದಾಳೆ. ಶಕುಂತಲಾ ಕೂಡ ತಾನು ಬದಲಾಗಿದ್ದೇನೆ ಎಂದು ಕಣ್ಣೀರಿಟ್ಟಿದ್ದಾಳೆ. ಅಷ್ಟೇ ಅಲ್ಲ ಮಕ್ಕಳ ವ್ಯಾಮೋಹದಿಂದ ಆಚೆ ಬಂದಿದ್ದೇನೆ ಎಂದು ಭಾವುಕಳಾಗಿದ್ದಾಳೆ.

ಈಗಾಗಲೇ ಗೌತಮ್​ಗೆ ಜಯದೇವ್ ಯಾವ ರೀತಿಯ ವ್ಯಕ್ತಿ ಎಂಬುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಅವನು ಈತನ ಬೆಂಬಲಕ್ಕೆ ನಿಲ್ಲೋದು ಅನುಮಾನವೇ ಸರಿ.

ಇನ್ನೊಂದು ಕಡೆ ಶಕುಂತಲಾಳನ್ನ ಭೂಮಿಕಾ ಕ್ಷಮಿಸಿದ್ದಕ್ಕೆ ಗೌತಮ್‌ ಭಾವುಕನಾಗಿದ್ದಾನೆ. ಅಷ್ಟೇ ಅಲ್ಲ ಇಷ್ಟೆಲ್ಲ ಮಾಡಿದ್ದರೂ ನಿನ್ನ ಒಂದು ಮಾತು ಕೇಳದೆ ಅಮ್ಮನನ್ನು ಮನೆಗೆ ಕರೆದುಕೊಂಡು ಬಂದೆ ಎಂದಿದ್ದಾನೆ. ಆಗ ಭೂಮಿ ಕೂಡ ಯಾರೇ ಏನೇ ಮಾಡಿದರೂ ಅವರಿಗೆ ಬಂದ ಸ್ಥಿತಿ ಯಾವ ಹೆಣ್ಣಿಗೂ ಬರಬಾರದು. ನಿಮ್ಮ ನಿರ್ಧಾರಕ್ಕೆ ಸದಾ ನಾನು ಜೊತೆಗಿರುವೆ ಎಂದಿದ್ದಾಳೆ ಭೂಮಿ. ಇದನ್ನ ಕೇಳಿ ಗೌತಮ್‌ ಕಣ್ಣೀರಿಟ್ಟು ಹೆಂಡತಿಯನ್ನು ತಬ್ಬಿಕೊಂಡಿದ್ದಾನೆ.

ಕಥೆ ಈಗ ನೋಡ್ತಾ ಇದ್ದರೆ ಧಾರಾವಾಹಿ ಅಂತ್ಯ ಕಾಣುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಈಗಾಗಲೇ ಜೀ ವಾಹಿನಿ ಹೊಸ ಸೀರಿಯಲ್‌ ಪ್ರೋಮೋ ಹಂಚಿಕೊಂಡಿದೆ.

ಇದನ್ನೂ ಓದಿ: KD Twitter Review: ಧ್ರುವ ಸರ್ಜಾ ನಟನೆಗೆ ಫುಲ್‌ ಮಾರ್ಕ್ಸ್‌ ಕೊಟ್ರು ಫ್ಯಾನ್ಸ್‌; ಮೂವಿ ನೋಡಿದವರು ಎನಂದ್ರು?

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಜಗದ್ಧಾತ್ರೀ’ ಶೀಘ್ರದಲ್ಲಿ ಬರುತ್ತಿದೆ. ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ಮೋಕ್ಷಿತಾ ಪೈ ಅವರು ನಾಯಕಿ ಎಂಬ ಸುದ್ದಿ ತಿಂಗಳುಗಳಿಂದ ಓಡಾಡುತ್ತಿತ್ತು.