ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಗೌತಮ್ ಮೇಲಿನ ಸೇಡಿಗೆ ಕೇಡಿ ಜೇಡಿಯ ಭರ್ಜರಿ ಡಿಮ್ಯಾಂಡ್‌!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೈದೇವ್‌ ಕಿಚ್ಚು ಹೆಚ್ಚಾಗುತ್ತಿದೆ. ಗೌತಮ್‌ ಮೇಲಿನ ಸೇಡು ದಿನೇ ದಿನೇ ಜೋರಾಗುತ್ತಿದೆ. ಆಸ್ತಿಯನ್ನು ಗೌತಮ್‌ ಬಿಟ್ಟುಕೊಟ್ಟರೂ ಇನ್ನೂ ಜೈದೇವ್‌ಗೆ ಸಾಲುತ್ತಿಲ್ಲ. ಗೌತಮ್‌ ತಂದೆಯ ಸಮಾಧಿ ಜಾಗವನ್ನೂ ಜೈದೇವ್‌ ಡಿಮ್ಯಾಂಡ್‌ ಇಟ್ಟಿದ್ದಾನೆ. ಇಲ್ಲವಾದರೆ ಮಲ್ಲಿಗೆ ಡಿವೋರ್ಸ್‌ ಕೊಡುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾನೆ ಜೈದೇವ್‌.

Amruthadhaare : ಗೌತಮ್ ಮೇಲಿನ ಸೇಡಿಗೆ ಕೇಡಿ ಜೇಡಿಯ ಭರ್ಜರಿ ಡಿಮ್ಯಾಂಡ್‌!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Mar 4, 2026 9:35 AM

ಜೀ ಕನ್ನಡ ವಾಹಿನಿಯಲ್ಲಿ (Zee Kannad) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈದೇವ್‌ ಕಿಚ್ಚು ಹೆಚ್ಚಾಗುತ್ತಿದೆ. ಗೌತಮ್‌ ಮೇಲಿನ ಸೇಡು ದಿನೇ ದಿನೇ ಜೋರಾಗುತ್ತಿದೆ. ಆಸ್ತಿಯನ್ನು ಗೌತಮ್‌ ಬಿಟ್ಟುಕೊಟ್ಟರೂ ಇನ್ನೂ ಜೈದೇವ್‌ಗೆ ಸಾಲುತ್ತಿಲ್ಲ. ಗೌತಮ್‌ ತಂದೆಯ ಸಮಾಧಿ ಜಾಗವನ್ನೂ ಜೈದೇವ್‌ ಡಿಮ್ಯಾಂಡ್‌ ಇಟ್ಟಿದ್ದಾನೆ. ಇಲ್ಲವಾದರೆ ಮಲ್ಲಿಗೆ ಡಿವೋರ್ಸ್‌ (Malli Divorce) ಕೊಡುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾನೆ ಜೈದೇವ್‌.

ಮಲ್ಲಿ ಹಾಗೂ ಸುನಿ ಮದುವೆ ತಯಾರಿ ಜೋರು

ಮಲ್ಲಿ ಹಾಗೂ ಸುನಿ ಮದುವೆ ತಯಾರಿ ಜೋರಾಗಿದೆ. ಇದರ ಜೊತೆಗೆ ಜೈದೇವ್‌ನ ಕಿಚ್ಚು ಜೋರಾಗಿದೆ. ಸುನಿಗೆ ಎಲ್ಲ ವಿಷಯ ತಿಳಿದ್ದರೂ ಹೇಗೂ ಆತನನ್ನು ಕನ್ವಿನ್ಸ್‌ ಮಾಡಿದ್ದಾನೆ ಜೈದೇವ್‌. ಮದುವೆ ಮಾಡೋಕೆ ನಾನು ಬಿಡಲ್ಲ ಅಂತ ಜೈದೇವ್‌ ಶಪಥ ಮಾಡಿದ್ದಾನೆ. ಅಣ್ಣ ಅತ್ತಿಗೆ ಕೊಟ್ಟಿರೋ ಕಾಟಕ್ಕೆ ಯಾರನ್ನೂ ಸುಮ್ಮನೆ ಬಿಡಲ್ಲ. ನೆಮ್ಮದಿಯಾಗಿ ಇರಲು ಯಾರಿಗೂ ಬಿಡಲ್ಲ ಅಂತ ಕೆಡಿ ಜೈದೇವ್‌ ತೀರ್ಮಾನ ಮಾಡಿದ್ದಾನೆ.

ಇದನ್ನೂ ಓದಿ: Dog Satish: C M ಬಂದು ಹೇಳಿದ್ರು ವಿಡಿಯೋ ಡಿಲೀಟ್ ಮಾಡಲ್ಲ; ಡಾಗ್‌ ಸತೀಶ್

ಮಲ್ಲಿ‌ ಬದುಕು ಬಲಿ ಕೇಳ್ತಿದ್ದಾನೆ ಕೇಡಿ ಜೇಡಿ!

ಮಲ್ಲಿಗೆ ಡಿವೋರ್ಸ್‌ ಕೊಡಲು ಒಂದು ಡಿಮ್ಯಾಂಡ್‌ ಇಟ್ಟಿದ್ದಾನೆ ಜೈದೇವ್‌. ತಂದೆಯ ಸಮಾಧಿ ಜಾಗ ತನ್ನ ಹೆಸರಿಗೆ ಬರೆದುಕೊಡು ಎಂದಿದ್ದಾನೆ. ಆಗ ಮಾತ್ರ ಮಲ್ಲಿಗೆ ಡಿವೋರ್ಸ್‌ ಕೊಡುವುದಾಗಿ ಹೇಳಿದ್ದಾನೆ.

ಗೌತಮ್‌ ಅಪ್ಪನ ಸಮಾಧಿ ಮುಂದೆ ನಿಂತು, ಅಪ್ಪ ನಾನು ಜೀವನದಲ್ಲಿ ಏನೇ ನಿರ್ಧಾರ ತೆಗೆದುಕೊಂಡಿದ್ದರೂ ನೀವು ನೆನಪಾಗುತ್ತಿದ್ರಿ. ನಾನು ಈಗಲೂ ನಿರ್ಧಾರ ಮಾಡಿದೆ. ಜೀವ ಇರೋರಗೆ ಜೀವನ ಸಿಗೋದು ಮುಖ್ಯನಾ, ನಿಮ್ಮ ಸಮಾಧಿ ಇರೋ ಜಾಗ ಮುಖ್ಯನಾ ಅಂತ ತೂಕ ಮಾಡಿದೆ. ಮಲ್ಲಿ ಜೀವನ ಮುಖ್ಯ ಅನ್ನಿಸಿತು ಎಂದಿದ್ದಾನೆ. ಇಷ್ಟು ಹೇಳಿ ಜೈದೇವ್‌ಗೆ ಆ ಜಾಗ ಬಿಟ್ಟುಕೊಟ್ಟಿದ್ದಾನೆ ಗೌತಮ್‌.

ಅಷ್ಟೇ ಅಲ್ಲ ಮಲ್ಲಿ ಜೀವನಕ್ಕೆ ಇನ್ನು ಯಾವತ್ತೂ ಅಡ್ಡ ಬರಬಾರದು ಅಂತ ಜೈದೇವ್‌ಗೆ ವಾರ್ನ್‌ ಮಾಡಿದ್ದಾನೆ. ಜೈದೇವ್‌ ಬಳಿಕ ಗೌತಮ್‌ಗೆ ಡಿವೋರ್ಸ್‌ ಕೊಟ್ಟಿದ್ದಾನೆ.

ಇಷ್ಟೆಲ್ಲ ಆಸ್ತಿ, ಸಮಾಧಿ ಜಾಗ ಎಲ್ಲವನ್ನೂ ಪಡೆದುಕೊಂಡರೂ ಜೈದೇವ್‌ ಮಾತ್ರ ಸುಮ್ಮನಾಗೊಲ್ಲ. ಇನ್ನಷ್ಟು ಗೌತಮ್‌ ಕುಟುಂಬಕ್ಕೆ ತೊಂಡದರೆ ಕೊಡ್ತಾನೆ ಇರ್ತಾನೆ. ಮುಂದೆ ಜೈದೇವ್‌ ಯಾವ ರೀತಿ ಪ್ಲ್ಯಾನ್‌ ಮಾಡ್ತಾನೆ? ಸುನಿ ಮಲ್ಲಿ ಜೀವನಕ್ಕೆ ಕಳಂಕ ಆಗ್ತಾನಾ?ಗೌತಮ್‌ ಮುಂದಿನ ನಡೆ ಏನು? ಎಂಬುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಮಲ್ಲಿ ಬದುಕಿನ ಸತ್ಯ ಅನಾವರಣ; ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ?

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ