ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಗೌತಮ್‌ ಅಖಾಡಕ್ಕೆ ಜೈದೇವ್‌ ವೈಲ್ಡ್‌ ಕಾರ್ಡ್‌ ಎಂಟ್ರಿ! ಮಿಂಚು ಕಥೆ ಏನು?

Amruthadhaare Serial: ಇತ್ತೀಚೆಗೆ ನಡೆದ ಘಟನೆಯಿಂದ ಅಖಿಲಾಂಡೇಶ್ವರಿ ಸಹಾಯ ಗೌತಮ್‌ ಸಿಕ್ಕಿದೆ. ಈಗ ಅಖಿಲಾಂಡೇಶ್ವರಿಗೆ ಕಳೆದು ಹೋದ ಮಗುವಿನ ಬಗ್ಗೆ ಸುಳಿವೂ ಸಿಕ್ಕಿದೆ. ಹೀಗಾಗಿ ಗೌತಮ್‌ಗೆ ಕಾಲ್‌ ಮಾಡಿದ್ದಾರೆ. ಗೌತಮ್‌ ಮೀಟಿಂಗ್‌ ಅಲ್ಲಿ ಇದ್ದ ಕಾರಣ ಕಾಲ್‌ ರಿಸೀವ್‌ ಮಾಡಿಲ್ಲ, ಹೀಗಾಗಿ ಶಕುನಿ ಮಾಮ ಕಾಲ್‌ ಸ್ವೀಕರಿಸಿ, ಅಖಿಲಾಂಡೇಶ್ವರಿ ಕೊಟ್ಟ ಅಡ್ರೆಸ್‌ ಅನ್ನು ಬರೆದುಕೊಂಡಿದ್ದಾನೆ. ಆದರೆ ಈ ವಿಚಾರ ಜೈದೇವ್‌ಗೆ ಗೊತ್ತಾಗಿದೆ.

ಗೌತಮ್‌ ಅಖಾಡಕ್ಕೆ ಜೈದೇವ್‌ ವೈಲ್ಡ್‌ ಕಾರ್ಡ್‌ ಎಂಟ್ರಿ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 19, 2026 10:16 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಹೊಸ ಟ್ವಿಸ್ಟ್‌ ಪಡೆದುಕೊಂಡಿದೆ. ಈ ಹಿಂದೆ ಗೌತಮ್‌ ಹಾಗೂ ಭೂಮಿಕಾಗೆ ಹೆಣ್ಣು ಮಗು ಹುಟ್ಟಿತ್ತು. ಆ ಮಗು ಹುಟ್ಟಿದ ತಕ್ಷಣ ಜಯದೇವ್‌ (Jaidev) ಆ ಮಗುವನ್ನು ಕಿಡ್ನ್ಯಾಪ್‌ ಮಾಡಿ ಕಾಡಿನಲ್ಲಿ ಎಸೆದಿದ್ದನು. ಈ ಮಗುವಿಗೋಸ್ಕರ ಗೌತಮ್‌ ತುಂಬ ಕಷ್ಟಪಟ್ಟರೂ ಪ್ರಯೋಜನವೇ ಆಗಿಲ್ಲ. ಜೈದೇವ್‌ಗೆ ಈಗ ಮಗುವಿನ ಸುಳಿವು ಸಿಕ್ಕಿದೆ.

ಜೈದೇವ್‌ ವೈಲ್ಡ್‌ ಕಾರ್ಡ್‌ ಎಂಟ್ರಿ

ಇತ್ತೀಚೆಗೆ ನಡೆದ ಘಟನೆಯಿಂದ ಅಖಿಲಾಂಡೇಶ್ವರಿ ಸಹಾಯ ಗೌತಮ್‌ ಸಿಕ್ಕಿದೆ. ಈಗ ಅಖಿಲಾಂಡೇಶ್ವರಿಗೆ ಕಳೆದು ಹೋದ ಮಗುವಿನ ಬಗ್ಗೆ ಸುಳಿವೂ ಸಿಕ್ಕಿದೆ. ಹೀಗಾಗಿ ಗೌತಮ್‌ಗೆ ಕಾಲ್‌ ಮಾಡಿದ್ದಾರೆ. ಗೌತಮ್‌ ಮೀಟಿಂಗ್‌ ಅಲ್ಲಿ ಇದ್ದ ಕಾರಣ ಕಾಲ್‌ ರಿಸೀವ್‌ ಮಾಡಿಲ್ಲ, ಹೀಗಾಗಿ ಶಕುನಿ ಮಾಮ ಕಾಲ್‌ ಸ್ವೀಕರಿಸಿ, ಅಖಿಲಾಂಡೇಶ್ವರಿ ಕೊಟ್ಟ ಅಡ್ರೆಸ್‌ ಅನ್ನು ಬರೆದುಕೊಂಡಿದ್ದಾನೆ.

ಆದರೆ ಈ ವಿಚಾರ ಜೈದೇವ್‌ಗೆ ಗೊತ್ತಾಗಿದೆ. ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟೇ ಕೊಡುವೆ ಅಂತ ಜೈದೇವ್‌ ಈಗ ಅಬ್ಬರಿಸಿದ್ದಾನೆ. ಗೌತಮ್‌ ತಿಳಿಯೋದಕ್ಕೂ ಮುಂಚೆ ಜೈದೇವ್‌ಗೆ ಗೊತ್ತಾಗಿದ್ದು, ಇದೀಗ ಮಿಂಚುಗೆ ಕಂಟಕವಾಗುತ್ತಾ ಅನ್ನೋದು ಕುತೂಹಲ.

ಇದನ್ನೂ ಓದಿ: Ram Charan: ಅತ್ಯಂತ ಸ್ಫೂರ್ತಿದಾಯಕ ಚಿತ್ರ ʻಪೆದ್ದಿʼ! ರಾಮ್‌ ಚರಣ್‌ ಹೇಳಿದ್ದೇನು?

ಆ ಮಗುವನ್ನು ಕಾಪಾಡಲು ಹೋಗಿ ಗೌತಮ್‌ಗೆ ಏನಾದರೂ ಆದರೂ ಆಗಬಹುದು. ಈಗಾಗಲೇ ಪುರೋಹಿತರು ನಿಮ್ಮ ಮಗಳಿಂದಲೇ ನಿಮಗೆ ಕಂಟಕ ಎಂದು ಈ ಹಿಂದೆ ಹೇಳಿದ್ದರು. ಗೌತಮ್‌ ಡ್ರೈವರ್‌ ಆಗಿದ್ದಾಗಲೇ ಮಗು ಸಿಕ್ಕಿತ್ತು. ಅವಳೇ ಮಿಂಚು ಆಗಿರಬಹುದು ಅನ್ನೋದು ವೀಕ್ಷಕರಲ್ಲಿ ಇರುವ ಕುತೂಹಲ.



ಮತ್ತೊಂದು ಕಡೆ ಜೈದೇವ್‌ ಈಗ ದಿಯಾ ಮನೆ ಆಳಾಗಿದ್ದಾನೆ. ಇನ್ನು ಮಹಿಮಾ ಗರ್ಭಿಣಿಯಾಗಿದ್ದಾರೆ. ಗೌತಮ್ ಮನೆಗೆ ಭೇಟಿ ನೀಡಿರುವ ಮಹಿಮಾ ಎಲ್ಲರೊಂದಿಗೆ ಮಾತನಾಡಿರುವುದು ಹೊಸ ಎಪಿಸೋಡ್‌ನಲ್ಲಿ ಇದೆ. ನೀನು ಹೆಚ್ಚು ಪ್ರವಾಸ ಮಾಡಬಾರದು ಎಲ್ಲಿಯೂ ಓಡಾಡಬಾರದು ಅಂತ ಹೇಳಿದ್ದಾರೆ.

ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಮಿಂಚು ಹಾಗೂ ಅಪ್ಪು ನಡುವಿನ ಮುದ್ದಿನ ಕಿತ್ತಾಟವು ಹೈಲೈಟ್‌ ಆಗಿದೆ.

ಇದನ್ನೂ ಓದಿ: Actor Darshan: ವಿವಾಹ ವಾರ್ಷಿಕೋತ್ಸವ; ವಿಜಯಲಕ್ಷ್ಮಿ ದರ್ಶನ್‌ ಭಾವುಕ!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ