IND vs ENG: ಅಕ್ಷರ್ ಪಟೇಲ್ ಆಲ್‌ರೌಂಡರ್ ಆಟಕ್ಕೆ ಮಣಿದ ಇಂಗ್ಲೆಂಡ್, ಭಾರತ ಶುಭಾರಂಭ!
IND vs ENG 1st ODI Match Highlights: ಅಕ್ಷರ್ ಪಟೇಲ್ ಅವರ ಆಲ್‌ರೌಂಡರ್ ಆಟದ ಬಲದಿಂದ ಭಾರತ ತಂಡ, ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದು ಶುಭಾರಂಭ ಮಾಡಿದೆ.
ಇಂಗ್ಲೆಂಡ್ ಎದುರು ಮೊದಲನೇ ಒಡಿಐ ಗೆದ್ದ ಭಾರತ. -
ಬರ್ಮಿಂಗ್‌ಹ್ಯಾಮ್: ಅಕ್ಷರ್ ಪಟೇಲ್ (Axar Patel) ಅವರ ಆಲ್‌ರೌಂಡರ್ ಆಟದ ಬಲದಿಂದ ಭಾರತ ತಂಡ, ಮೊದಲನೇ ಏಕದಿನ ಪಂದ್ಯದಲ್ಲಿ (IND vs ENG) ಇಂಗ್ಲೆಂಡ್ ಎದುರು 6 ವಿಕೆಟ್‌ಗಳ ಗೆಲವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆಯುವ ಮೂಲಕ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಬೌಲಿಂಗ್‌ನಲ್ಲಿ 4 ವಿಕೆಟ್ ಹಾಗೂ ಬ್ಯಾಟಿಂಗ್‌ನಲ್ಲಿ ಅಜೇಯ ಅರ್ಧಶತಕ ಸಿಡಿಸಿದ ಭಾರತದ ಆಲ್‌ರೌಂಡರ್ ಅಕ್ಷರ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮಂಗಳವಾರ ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 259 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 48 ರನ್ ಇರುವಾಗಲೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿದಸಿದರು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ನಾಯಕ ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್, 103 ಎಸೆತಗಳಲ್ಲಿ 101 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.
IND vs ENG: ಭಾರತ ತಂಡಕ್ಕೆ ಮತ್ತೊಂದು ಗಾಯದ ಭೀತಿ? ಮೈದಾನದಿಂದ ಹೊರ ನಡೆದ ಗುರ್ನೂರ್ ಬ್ರಾರ್!
ಶುಭಮನ್ ಗಿಲ್ ಅರ್ಧಶತಕ
ನಾಯಕನಾಗಿ ಜವಾಬ್ದಾರಿಯುತ ಬ್ಯಾಟ್ ಮಾಡಿದ ಶುಭಮನ್ ಗಿಲ್ 75 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 80 ರನ್ ಗಳಿಸಿ ಶತಕದಂಚಿನಲ್ಲಿದ್ದರು. ಆದರೆ, ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಬ್ಯಾಟಿಂಗ್ ಮುಂದುವರಿಸದೆ ರಿಟೈರ್ ಹರ್ಟ್ ಆದರು. ಈ ವೇಳೆ 53 ಎಸೆತಗಳಲ್ಲಿ 35 ರನ್ ಭರವಸೆ ಮೂಡಿಸಿದ್ದ ಉಪ ನಾಯಕ ಶ್ರೇಯಸ್, 27ನೇ ಓವರ್‌ನಲ್ಲಿ ರನ್‌ಔಟ್ ಆದರು. ಬಳಿಕ ಕೆಎಲ್ ರಾಹುಲ್ ಕೇವಲ ಒಂದು ರನ್ ಗಳಿಸಿ ಔಟ್ ಆದರು.
Job completely done in style ✅#TeamIndia cruise to a 6️⃣-wicket victory to take a 1-0 lead in the ODI series 💙
— BCCI (@BCCI) July 14, 2026
Scorecard ▶️ https://t.co/2sg194tpxH #TeamIndia | #ENGvIND pic.twitter.com/PnUDkcVLyr
ಭಾರತವನ್ನು ಗೆಲ್ಲಿಸಿದ ಅಕ್ಷರ್-ವಾಷಿಂಗ್ಟನ್ ಜೊತೆಯಾಟ
ಐದನೇ ವಿಕೆಟ್‌ಗೆ ಜೊತೆಯಾದ ಸ್ಪಿನ್ ಆಲ್‌ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ 102 ರನ್‌ಗಳ ಅಜೇಯ ಜೊತೆಯಾಟವನ್ನು ಆಡುವ ಮೂಲಕ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಮಯಕ್ಕೆ ತಕ್ಕಂತೆ ಬ್ಯಾಟ್ ಮಾಡಿದ ಅಕ್ಷರ್, 52ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 57 ರನ್ ಗಳಿಸಿದರೆ, ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್ ನೀಡಿದ್ದ ವಾಷಿಂಗ್ಟನ್ ಸುಂದರ್ 63 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 52 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ಭಾರತ 45.2 ಓವರ್‌ಗಳಿಗೆ 262 ರನ್‌ಗಳನ್ನು ಗಳಿಸಿ ಗೆದ್ದು ಬೀಗಿತು.
Shubman Gill picks up from where he left off last year at Edgbaston.
— BCCI (@BCCI) July 14, 2026
Brings up a fine half-century off 51 deliveries.
His 19th in ODIs 👏👏#TeamIndia #ENGvIND | @ShubmanGill pic.twitter.com/flUjvXWb5T
258 ರನ್‌ಗಳಿಗೆ ಇಂಗ್ಲೆಂಡ್ ಆಲ್‌ಔಟ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದ್ದ ಇಂಗ್ಲೆಂಡ್ ತಂಡದ ದೊಡ್ಡ ಮೊತ್ತ ಕಲೆ ಹಾಕುವ ಯೋಜನೆಯನ್ನು ಭಾರತೀಯ ಬೌಲರ್‌ಗಳು ಭಗ್ನಗೊಳಿಸಿದರು. ಆದರೂ ಜೋ ರೂಟ್ ಹಾಗೂ ಲಿಯಾಮ್ ಡಾಸನ್ ಅವರ ನಿರ್ಣಾಯಕ ಅರ್ಧಶತಕಗಳ ಬಲದಿಂದ ಆತಿಥೇಯ ಇಂಗ್ಲೆಂಡ್ ತಂಡ, 47.5 ಓವರ್‌ಗಳಿಗೆ 258 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಟೀಮ್ ಇಂಡಿಯಾಗೆ 259 ರನ್‌ಗಳ ಗುರಿಯನ್ನು ನೀಡಿತು.
IND vs ENG: 200ನೇ ಒಡಿಐ ಪಂದ್ಯವನ್ನು ಆಡಿ ಆಂಗ್ಲರ ಪರ ಇತಿಹಾಸ ಬರೆದ ಜೋಸ್ ಬಟ್ಲರ್!
ಇಂಗ್ಲೆಂಡ್ ಪರ ಇನಿಂಗ್ಸ್ ಆರಂಭಿಸಿದ ಬೆನ್ ಡಕೆಟ್ ಹಾಗೂ ಜೇಕಬ್ ಬೆಥೆಲ್ ಅವರು ಮೊದಲನೇ ವಿಕೆಟ್‌ಗೆ 61 ರನ್ ಗಳಿಸಿ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟರು. ಇದೇ ಮೊದಲ ಬಾರಿ 50 ಓವರ್‌ಗಳ ಸ್ವರೂಪದಲ್ಲಿ ಇನಿಂಗ್ಸ್ ಆರಂಭಿಸಿದ ಬೆಥೆಲ್ (14) ಹಾಗೂ 45 ಎಸೆತಗಳಲ್ಲಿ 43 ರನ್ ಗಳಿಸಿ ಉತ್ತಮ ಆರಂಭ ಪಡೆದದ್ದ ಬೆನ್ ಡಕೆಟ್ ಅವರನ್ನು 13ನೇ ಓವರ್‌ನಲ್ಲಿ ಗುರ್ನೂರ್ ಬ್ರಾರ್ ಔಟ್ ಮಾಡಿ ಭಾರತದ ಕಮ್‌ಬ್ಯಾಕ್‌ಗೆ ನರವು ನೀಡಿದರು. 14ನೇ ಓವರ್‌ನಲ್ಲಿ ನಾಯಕ ಹ್ಯಾರಿ ಬ್ರೂಕ್ ಅವರನ್ನು ಜಸ್‌ಪ್ರೀತ್ ಬುಮ್ರಾ ಔಟ್ ಮಾಡಿದರು. ಈ ವೇಳೆ ಆಂಗ್ಲರು 64 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡರು.
ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಜೋಸ್ ಬಟ್ಲರ್ ಹಾಗೂ ಸ್ಯಾಮ್ ಕರನ್ ಅವರನ್ನು ಔಟ್ ಮಾಡುವಲ್ಲಿ ಕನ್ನಡಿಗ ಪ್ರಸಿಧ್ ಕೃಷ್ಣ ಯಶಸ್ವಿಯಾದರು. 20 ರನ್ ಗಳಿಸಿ ಭರವಸೆ ಮೂಡಿಸಿದರೂ ವಿಲ್ ಜ್ಯಾಕ್ಸ್ ಅವರನ್ನು ಶಿವಂ ದುಬೇ ಔಟ್ ಮಾಡಿದರು.
Innings Break!
— BCCI (@BCCI) July 14, 2026
A fine display of bowling by #TeamIndia as England is all out for 258 runs in 47.5 overs.
Scorecard - https://t.co/Hven15ywKn #ENGvIND pic.twitter.com/OsiaHJXVVs
ಜೋ ರೂಟ್- ಲಿಯಾಮ್ ಡಾಸನ್ ಜುಗಲ್‌ಬಂದಿ
ಮೂರನೇ ಕ್ರಮಂಕದಲ್ಲಿ ಕ್ರೀಸ್‌ಗೆ ಬಂದ ಜೋ ರೂಟ್ ಒಂದು ತುದಿಯಲ್ಲಿ ಗಟ್ಟಿಯಾಗಿ ಆಡುತ್ತಿದ್ದರೂ ಮತ್ತೊಂದು ತುದಿಯಲ್ಲಿ ಯಾರೂ ಜಾಸ್ತಿ ಹೊತ್ತು ಸಾಥ್ ನೀಡಲಿಲ್ಲ. ಆದರೆ, ಅವರಿಗೆ 7ನೇ ವಿಕೆಟ್‌ಗೆ ಜೊತೆಯಾದ ಲಿಯಾಮ್ ಡಾಸನ್ ಅವರು 83 ಎಸೆತಗಳಲ್ಲಿ 68 ರನ್‌ಗಳನ್ನು ದಾಖಲಿಸಿದರು. ಈ ಇಬ್ಬರೂ 121 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಂಡದ ಮೊತ್ತವನ್ನು 250 ರ ಗಡಿ ದಾಟಿಸಿದರು. ಕೊನೆಯವರೆಗೂ ಬ್ಯಾಟ್ ಮಾಡಿ ಅಜೇಯರಾಗಿ ಉಳಿದ ಜೋ ರೂಟ್, 76 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 76 ರನ್‌ಗಳಿಸಿದರು.
ಭಾರತ ತಂಡದ ಪರ ಅಕ್ಷರ್ ಪಟೇಲ್ 4 ವಿಕೆಟ್ ಪಡೆದರೆ, ಗುರ್ನೂರ್ ಬ್ರಾರ್ ಹಾಗೂ ಪ್ರಸಿಧ್ ಕೃಷ್ಣ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.