ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಪಾರು ಇಂದ ಗೊತ್ತಾಗತ್ತ ಮಹಾಸತ್ಯ? ಕೇಡಿನ ಸಿಕ್ಕಿಹಾಕಿಸ್ತಾಳಾ ಮಿಂಚು ?

Amruthadhaare Serial: ಅಮೃತಧಾರೆಯಲ್ಲಿ ಇದುವೆರೆಗೂ ಭೂಮಿ ಹಾಗೂ ಗೌತಮ್‌ಗೆ ಇದುವೆರೆಗೆ ಮಿಂಚುನೇ ತಮ್ಮ ಮಗಳು ಅನ್ನೋದು ಇದುವೆರೆಗೂ ಗೊತ್ತಾಗಿಲ್ಲ. ಪಾರು ಹಾಗೂ ಶಿವು ಈಗ ಎಂಟ್ರಿ ಕೊಟ್ಟಂತಿದೆ. ಪಾರು ಭೂಮಿಕಾಗೆ ಏನೋ ಕಾಲ್‌ ಮಾಡಿದ್ಲು ಆದರೆ ಹೇಳಬೇಕು ಅನ್ನೋ ವಿಚಾರ ಹೇಳದೇ ಸುಮ್ಮನೆ ಆಗಿದ್ದಾಳೆ. ಏನದು?

ಪಾರು ಇಂದ ಗೊತ್ತಾಗತ್ತ ಮಹಾಸತ್ಯ? ಕೇಡಿನ ಸಿಕ್ಕಿಹಾಕಿಸ್ತಾಳಾ ಮಿಂಚು ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jun 11, 2026 11:02 AM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಇದುವೆರೆಗೂ ಭೂಮಿ ಹಾಗೂ ಗೌತಮ್‌ಗೆ (Bhoomi Gowtham) ಇದುವೆರೆಗೆ ಮಿಂಚುನೇ ತಮ್ಮ ಮಗಳು ಅನ್ನೋದು ಇದುವೆರೆಗೂ ಗೊತ್ತಾಗಿಲ್ಲ. ಪಾರು (Paaru) ಹಾಗೂ ಶಿವು ಈಗ ಎಂಟ್ರಿ ಕೊಟ್ಟಂತಿದೆ. ಪಾರು ಭೂಮಿಕಾಗೆ (Bhoomika) ಏನೋ ಕಾಲ್‌ ಮಾಡಿದ್ಲು ಆದರೆ ಹೇಳಬೇಕು ಅನ್ನೋ ವಿಚಾರ ಹೇಳದೇ ಸುಮ್ಮನೆ ಆಗಿದ್ದಾಳೆ. ಏನದು?

ನಕಲಿ ದಂಪತಿಗೆ ತಲೆ ನೋವು

ನಕಲಿ ತಂದೆ ತಾಯಿ ಗೌತಮ್‌ ಬಳಿ ಓಡಿ ಬಂದು, ಮಗಳ ಬಗ್ಗೆ ಕಂಪ್ಲೇಟ್‌ ಮಾಡಿ ಒಳ್ಳೆಯದು ಮಾಡಿದ್ವಿ ಇಲ್ಲ ಅಂದ್ರೆ ನನ್ನ ಮಗಳು ನನಗೆ ಸಿಗ್ತಾ ಇರಲಿಲ್ಲ ಎಂದು ಡ್ರಾಮ ಮಾಡಿದ್ದಾರೆ. ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಆಗ ಗೌತಮ್‌, ಮಿಂಚುಳನ್ನ ಯಾರೂ ಎಲ್ಲಿಯೂ ಕರೆದುಕೊಂಡು ಹೋಗೋ ಹಾಗಿಲ್ಲ ಎಂದಿದ್ದಾನೆ. ಮಿಂಚುನೇ ನನ್ನ ಮಗಳು ಎಂದಿದ್ದಾನೆ ಗೌತಮ್‌. DNA ವಿಚಾರವಾಗಿ ಮಾತನಾಡಿದ್ದಾನೆ. ಈ ವಿಚಾರ ಈಗ ನಕಲಿ ದಂಪತಿಗೆ ತಲೆ ನೋವಾಗಿದೆ.

ಇದನ್ನೂ ಓದಿ: Dridam OTT: ಒಟಿಟಿಗೆ ಎಂಟ್ರಿ ಕೊಡಲಿದೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ! ಕನ್ನಡದಲ್ಲೂ ಲಭ್ಯ

ಅತ್ತ ಭೂಮಿಕಾಗೆ ಪಾರು ಕಾಲ್‌

ಭೂಮಿಕಾಗೆ ಏಕಾಏಕಿ ಪಾರು ಕರೆ ಮಾಡಿದ್ದಾಳೆ. ಕಳೆದು ಹೋದ ಮಗು ಬಗ್ಗೆ ವಿಚಾರಿಸಿದ್ದಾಳೆ.ಆದರೆ ಕೊನೆಯಲ್ಲಿ ಮಾತನಾಡುವಾಗ ಮಗಳ ಕೈಯಲ್ಲಿ ಇರೋ ತ್ರಿಶೂಲದ ಮಚ್ಚೆ ಬಗ್ಗೆ ಹೇಳದೇ ಸುಮ್ಮನಾಗಿದ್ದಾಳೆ. ಶಿವು ಕೊನೆಗೆ ನೆನಪಿಸಿದ್ದಾನೆ. ಹೀಗಾಗಿ ಮತ್ತೆ ಪಾರು ಮೂಲಕ ಮಿಂಚು ಸತ್ಯ ಭೂಮಿಕಾಗೆ ಗೊತ್ತಾಗತ್ತಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.



ಕೇಡಿ ಮುಖವಾಡ ಕಳಚಿಬೀಳೋ ಹೊತ್ತು!

ನಕಲಿ ಅಪ್ಪ ಅಮ್ಮ ಆ ಬಳಿಕ ಸೀದಾ ಬಂದದ್ದು ಜೈದೇವ್‌ ಮುಂದೆ DNA ಟೆಸ್ಟ್‌ ಕೊಡಲು ಹೇಳಿದ್ದಾರೆ. ಈ ಮ್ಯಾಟರ್‌ ಅಲ್ಲಿ ನಾವು ತಗಲಾಕೊಂಡ್ವಿ ಅನ್ನಿಸ್ತಾ ಇದೆ. ಜೈಲಿಗೆ ಕಳಿಸ್ತಾರೆ ನಮ್ಮನ್ನು. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಜೈದೇವ್‌ ಮುಂದೆ ಅಂಗಲಾಚಿ ಬೇಡಿದ್ದಾರೆ.

ಇನ್ನೊಂದು ಕಡೆ ಮಿಂಚುಗೆ ಗೌತಮ್‌, ಕಾರ್‌ನಲ್ಲಿ ಕರೆದಕೊಂಡು ಹೋಗಿದ್ದು ಯಾರು ಅಂತ ಪ್ರಶ್ನೆ ಇಟ್ಟಿದ್ದಾನೆ. ಈಗ ಈ ಎಲ್ಲದರ ಹಿಂದೆ ಜೈದೇವ್‌ ಕೈವಾಡ ಇದೆ ಅನ್ನೋದು ಗೌತಮ್‌ಗೆ ಗೊತ್ತಾಗತ್ತಾ ಅನ್ನೋದು ವೀಕ್ಷರಲ್ಲಿ ಇರೋ ಕುತೂಹಲ. ಮತ್ತೊಂದೆಡೆ ಶಕುನಿ ಮಾಮಾ ಲಕ್ಷ್ಮೀಕಾಂತ್‌ನನ್ನು ಜೈದೇವ್ ಬಂಧಿಸಿಟ್ಟಿದ್ದಾನೆ.

ಇದನ್ನೂ ಓದಿ: Rukmini Vasanth: ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಪ್ರಕರಣ ; ಶಾಕಿಂಗ್‌ ವಿಚಾರ ರಿವೀಲ್‌!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ