ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthdhaare Serial: ವಿಧಿಯ ಸವಾಲಿನೆದುರು ಕುಗ್ಗೋಳಲ್ಲ ಗಟ್ಟಿಗಿತ್ತಿ ಭೂಮಿ! ಭಾವುಕರಾದ ಫ್ಯಾನ್ಸ್

Amruthdhaare Serial: ಭೂಮಿಕಾಳಿಗೆ ಇನ್ನು ಕೆಲವೇ ತಿಂಗಳುಗಳ ಕಾಲ ಮಾತ್ರ ಜೀವನವಿದೆ ಎಂಬ ರೀತಿಯಲ್ಲಿ ಕಥೆಯನ್ನು ಮುಂದುವರಿಸಲಾಗುತ್ತಿದೆ ಭೂಮಿಕಾ ತನ್ನ ಹೊಸ ರೂಪವನ್ನು ಕನ್ನಡಿಯ ಮುಂದೆ ನೋಡಿ ಧೈರ್ಯ ತಂದುಕೊಳ್ಳುವ ದೃಶ್ಯ ಕಣ್ಣು ಒದ್ದೆಯಾಗಿಸುವಂತಿದೆ. ಕೂದಲು ಕಳೆದುಕೊಂಡು ಕಿಮೋಥೆರಪಿ ಎದುರಿಸುತ್ತಿರುವ ಭೂಮಿಕಾಳನ್ನು ಕಂಡು ವೀಕ್ಷಕರು ಕಣ್ಣೀರಿಟ್ಟಿದ್ದಾರೆ.

Amruthdhaare : ವಿಧಿಯ ಸವಾಲಿನೆದುರು ಕುಗ್ಗೋಳಲ್ಲ ಗಟ್ಟಿಗಿತ್ತಿ ಭೂಮಿ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jul 30, 2026 10:43 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthdhaare Serial) ಹೊಸ ಟ್ವಿಸ್ಟ್‌ ಪಡೆದುಕೊಂಡಿದೆ. ನಾಯಕಿ ಭೂಮಿಕಾಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಅವಳು ತನ್ನ ಕೂದಲನ್ನು ತ್ಯಜಿಸಿದ್ದಾಳೆ. ಕೂದಲು ಕಳೆದುಕೊಂಡು ಕಿಮೋಥೆರಪಿ ಎದುರಿಸುತ್ತಿರುವ ಭೂಮಿಕಾಳನ್ನು (Bhoomika) ಕಂಡು ವೀಕ್ಷಕರು ಕಣ್ಣೀರಿಟ್ಟಿದ್ದಾರೆ.

ಧಾರಾವಾಹಿಯ ಮುಖ್ಯ ಪಾತ್ರಧಾರಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಚಿಕಿತ್ಸೆಯ ಭಾಗವಾಗಿ ಅವರು ತಮ್ಮ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಸೀರಿಯಲ್‌ನಲ್ಲಿ ಮೊದಲ ಬಾರಿಗೆ ಬೋಳು ತಲೆಯ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಭೂಮಿಕಾಗೆ ಕ್ಯಾನ್ಸರ್ ಎಂಬ ಆಘಾತಕಾರಿ ಟ್ವಿಸ್ಟ್ ನೀಡಲಾಗಿದೆ.

ಭೂಮಿಕಾಳ ಈ ಸ್ಥಿತಿಯನ್ನು ಕಂಡ ಗೌತಮ್ ಕೂಡ ಆಘಾತಕ್ಕೊಳಗಾಗಿದ್ದಾನೆ. ತನ್ನ ಜೀವನದ ಪ್ರೀತಿಯ ವ್ಯಕ್ತಿ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಇರುವುದನ್ನು ಕಂಡು ಗೌತಮ್ ನೋವಿನಿಂದ ಕುಗ್ಗಿದ್ದಾನೆ.

ಇದನ್ನೂ ಓದಿ: Reba Monica: ಮಗಳು ಹುಟ್ಟಿದ ಸಿಹಿ ಸುದ್ದಿ ಹಂಚಿಕೊಂಡ 'ರತ್ನನ್‌ ಪ್ರಪಂಚ' ನಟಿ ರೆಬಾ

ಭೂಮಿಕಾ ಪರ ನಿಂತ ಕುಟುಂಬ

. ಭೂಮಿಕಾಳಿಗೆ ಇನ್ನು ಕೆಲವೇ ತಿಂಗಳುಗಳ ಕಾಲ ಮಾತ್ರ ಜೀವನವಿದೆ ಎಂಬ ರೀತಿಯಲ್ಲಿ ಕಥೆಯನ್ನು ಮುಂದುವರಿಸಲಾಗುತ್ತಿದೆ ಭೂಮಿಕಾ ತನ್ನ ಹೊಸ ರೂಪವನ್ನು ಕನ್ನಡಿಯ ಮುಂದೆ ನೋಡಿ ಧೈರ್ಯ ತಂದುಕೊಳ್ಳುವ ದೃಶ್ಯ ಕಣ್ಣು ಒದ್ದೆಯಾಗಿಸುವಂತಿದೆ. ಇಡೀ ಕುಟುಂಬವೇ ಈ ಸಂಕಷ್ಟದ ಸಮಯದಲ್ಲಿ ಭೂಮಿಕಾ ಪರವಾಗಿ ನಿಂತಿದೆ.

ಭೂಮಿಕಾ ಕ್ಯಾನ್ಸರ್‌ನಿಂದ ಗುಣಮುಖಳಾಗುತ್ತಾಳೆಯೇ? ಅಥವಾ ಕಥೆ ಮತ್ತಷ್ಟು ದುರಂತದತ್ತ ಸಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಮಲ್ಲಿ ಇದೀಗ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದಾಳೆ.

ಓಡಿಹೋಗುತ್ತಿದ್ದ ಕಳ್ಳನನ್ನು ಹಿಡಿಯುವ ಮೂಲಕ ಮಲ್ಲಿ ಪೊಲೀಸ್ ಅಧಿಕಾರಿಯಾಗಿ ಭರ್ಜರಿ ಎಂಟ್ರಿ ನೀಡಿದ್ದಾಳೆ. ಹಲವು ಬಾರಿ ತಮ್ಮ ಸಂಚುಗಳಿಂದ ತಪ್ಪಿಸಿಕೊಂಡಿದ್ದ ಜೈದೇವ್ ಮತ್ತು ಶಕುಂತಲಾ ಇದೀಗ ಮತ್ತೆ ಗೌತಮ್ ಕುಟುಂಬಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಲು ಮುಂದಾಗಿದ್ದಾರೆ.

ಇದರ ನಡುವೆ ಜೈದೇವ್ ಮಾಡಿರುವ ಮತ್ತೊಂದು ದೊಡ್ಡ ಅಪರಾಧವೂ ಇನ್ನೂ ರಹಸ್ಯವಾಗಿಯೇ ಉಳಿದಿದೆ. ದಿಯಾ ಕೊಲೆಯ ಹಿಂದೆ ಜೈದೇವ್ ಕೈವಾಡವಿದೆ ಎಂಬ ಸತ್ಯ ಕುಟುಂಬದ ಯಾರಿಗೂ ಇನ್ನೂ ತಿಳಿದಿಲ್ಲ. ಈ ಸತ್ಯ ಯಾವಾಗ ಹೊರಬರುತ್ತದೆ ಎಂಬುದೇ ಮುಂದಿನ ಕಥೆಯ ಪ್ರಮುಖ ಕುತೂಹಲವಾಗಿದೆ.

ಜೈದೇವ್​ ಮತ್ತು ಶಕುಂತಲಾ ಗೌತಮ್​ ಫ್ಯಾಮಿಲಿಯನ್ನು ಬೀದಿಗೆ ತರುವ ಹುನ್ನಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರಿಬ್ಬರೂ ಹೇಗೋ ತಪ್ಪಿಸಿಕೊಂಡಿದ್ದರು. ಅದರಲ್ಲಿಯೂ ಜೈದೇವ ದಿಯಾಳ ಕೊಲೆ ಮಾಡಿದ್ದು, ಇನ್ನೂ ಯಾರಿಗೂ ಗೊತ್ತಿಲ್ಲ. ಇದೀಗ ಮಲ್ಲಿ ಇನ್ಸ್​ಪೆಕ್ಟರ್​ ಆಗಿರುವ ಹಿನ್ನೆಲೆಯಲ್ಲಿ, ಜೈದೇವ್​ಗೆ ಮುಹೂರ್ತ ಫಿಕ್ಸ್​ ಆಗುವಂತಿದೆ. ಅದೇ ರೀತಿ, ಶಕುಂತಲಾ ಕುತಂತ್ರ ಕೂಡ ಬಯಲು ಮಾಡಿ ಆಕೆಗೂ ಮಗನ ಜೊತೆಗೇ ಜೈಲೂಟ ಹಾಕಿಸುತ್ತಾಳೆ. ಅಲ್ಲಿಗೆ ಜೈದೇವ್​ ಮತ್ತು ಶಕುಂತಲಾರ ಕೆಟ್ಟ ದಿನ ಶುರುವಾದಂತಿದೆ.

ಇದನ್ನೂ ಓದಿ: Amruthadhaare Serial: ಜೈದೇವ್‌ನ ಪುಂಡಾಟಕ್ಕೆ ಲಾಠಿ ಏಟಿನ ರುಚಿ ತೋರಿಸಿದ್ದಾಳೆ ಮಲ್ಲಿ!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.