Amruthadhaare Serial: ಜೈದೇವ್‌ನ ಪುಂಡಾಟಕ್ಕೆ ಲಾಠಿ ಏಟಿನ ರುಚಿ ತೋರಿಸಿದ್ದಾಳೆ ಮಲ್ಲಿ!
Amruthadhaare Serial: ಮೃತಧಾರೆಯಲ್ಲಿ (Amruthdhaare Serial) ಕುಡಿದ ಮತ್ತಿನಲ್ಲಿ ಮಾಜಿ ಪತ್ನಿ, ಐಪಿಎಸ್ ಅಧಿಕಾರಿ ಮಲ್ಲಿಗೆ ಜೈದೇವ್ (Jaidev) ಸಾರ್ವಜನಿಕವಾಗಿ ಅವಮಾನಿಸುತ್ತಾನೆ. ಮಲ್ಲಿಯನ್ನು ಹೇಗೆಲ್ಲಾ ಅವಮಾನಿಸಲು ಸಾಧ್ಯವೋ ಎಲ್ಲವನ್ನು ಜೈದೇವ್ ಮಾಡಿದ್ದಾನೆ. ಇನ್ನೊಂದು ಕಡೆ ಭೂಮಿಯ ಕೇರ್ ಈಗ ಗೌತಮ್ ಮೇಲಿದೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಮಡದಿ ಭೂಮಿಕಾಳ ಆಸೆಯನ್ನು ಈಡೇರಿಸಲು ಗೌತಮ್ ಮುಂದಾಗಿದ್ದಾನೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthdhaare Serial) ಕುಡಿದ ಮತ್ತಿನಲ್ಲಿ ಮಾಜಿ ಪತ್ನಿ, ಐಪಿಎಸ್ ಅಧಿಕಾರಿ ಮಲ್ಲಿಗೆ ಜೈದೇವ್ (Jaidev) ಸಾರ್ವಜನಿಕವಾಗಿ ಅವಮಾನಿಸುತ್ತಾನೆ. ಮಲ್ಲಿಯನ್ನು (Malli) ಹೇಗೆಲ್ಲಾ ಅವಮಾನಿಸಲು ಸಾಧ್ಯವೋ ಎಲ್ಲವನ್ನು ಜೈದೇವ್ ಮಾಡಿದ್ದಾನೆ.
ಕುಡಿದು ಕಾರ್ ಚಲಾಯಿಸಿಕೊಂಡು ಬಂದ ಜೈದೇವ್‌ನನ್ನು ಪೊಲೀಸರು ನಿಲ್ಲಿಸುತ್ತಾರೆ. ಈ ವೇಳೆ ಡ್ಯೂಟಿಯಲ್ಲಿದ್ದ ಮಲ್ಲಿಯನ್ನು ನೋಡಿದ ಜೈದೇವ್, ಅಲ್ಲಿದ್ದ ಎಲ್ಲಾ ಪೊಲೀಸರ ಮುಂದೆ ಈಕೆ ನನ್ನ ಮಾಜಿ ಹೆಂಡ್ತಿ. ನನ್ನ ಹಣದಲ್ಲಿ ಐಪಿಎಸ್ ಓದಿ, ಬೇರೊಬ್ಬನ ಜೊತೆ ಹೋದವಳು ಎಂದು ಹೇಳುತ್ತಾನೆ.
ಇದನ್ನೂ ಓದಿ: Batwara 1947 Trailer: ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದ ಕಥೆ; ʼಬಟ್ವಾರಾʼ ಟ್ರೈಲರ್ ಔಟ್
ಜೈದೇವ್ ಉಪಟಳ ಹೆಚ್ಚಾಗುತ್ತಿದ್ದಂತೆ ಆತನ ಮೇಲೆ ಲಾಠಿ ಬೀಸಿದ ಮಲ್ಲಿ, ಜೈಲಿಗೆ ಕರೆದುಕೊಂಡು ಹೋಗುವಂತೆ ಹೇಳುತ್ತಾಳೆ. ಇಡೀ ರಾತ್ರಿ ಜೈಲಿನಲ್ಲಿಯೇ ಕಳೆದ ಜೈದೇವ್‌ನನ್ನು ಬಿಟ್ಟು ಕಳುಹಿಸಬೇಕಾ ಎಂದು ಪೊಲೀಸರು ಮಲ್ಲಿಗೆ ಫೋನ್ ಮಾಡಿ ಕೇಳ್ತಾರೆ. ಆದ್ರೆ ಮಲ್ಲಿ ಮಾತ್ರ, ಕಾನೂನಿನ ಪ್ರಕಾರ ಏನು ಮಾಡಬೇಕು ಅದನ್ನೇ ಮಾಡಿ ಎಂದಿದ್ದಾಳೆ.
ಇನ್ನೊಂದು ಕಡೆ ಭೂಮಿಯ ಕೇರ್ ಈಗ ಗೌತಮ್ ಮೇಲಿದೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಮಡದಿ ಭೂಮಿಕಾಳ ಆಸೆಯನ್ನು ಈಡೇರಿಸಲು ಗೌತಮ್ ಮುಂದಾಗಿದ್ದಾನೆ. ಪತ್ನಿ ಭೂಮಿಕಾ ಜೊತೆ ಮಾರುಕಟ್ಟೆಗೆ ಬಂದಿರುವ ಗೌತಮ್, ಚೌಕಾಸಿ ಮಾಡಿ ತರಕಾರಿ ಖರೀದಿಸುತ್ತಿದ್ದಾನೆ. ಈ ಮುಂಚೆಗ ಹೇಗೆ ಚೌಕಾಸಿ ಮಾಡಬೇಕು ಎಂಬುದನ್ನು ಗೌತಮ್‌ಗೆ ಭೂಮಿಕಾ ಹೇಳಿಕೊಟ್ಟಿದ್ದಳು ಅಂದರಂತೆ ಮಾಡುತ್ತಿದ್ದಾನೆ. ಮತ್ತೊಂದು ಕಡೆ ಭೂಮಿ ತಮ್ಮ ಕೂಡ ಜೈದೇವ್ ಬೆನ್ನ ಹಿಂದೆ ಬಿದ್ದಿದ್ದಾನೆ.
ಜೈದೇವ್ ಮತ್ತು ಶಕುಂತಲಾ ಗೌತಮ್ ಫ್ಯಾಮಿಲಿಯನ್ನು ಬೀದಿಗೆ ತರುವ ಹುನ್ನಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರಿಬ್ಬರೂ ಹೇಗೋ ತಪ್ಪಿಸಿಕೊಂಡಿದ್ದರು. ಅದರಲ್ಲಿಯೂ ಜೈದೇವ ದಿಯಾಳ ಕೊಲೆ ಮಾಡಿದ್ದು, ಇನ್ನೂ ಯಾರಿಗೂ ಗೊತ್ತಿಲ್ಲ. ಇದೀಗ ಮಲ್ಲಿ ಇನ್ಸ್ಪೆಕ್ಟರ್ ಆಗಿರುವ ಹಿನ್ನೆಲೆಯಲ್ಲಿ, ಜೈದೇವ್ಗೆ ಮುಹೂರ್ತ ಫಿಕ್ಸ್ ಆಗುವಂತಿದೆ. ಅದೇ ರೀತಿ, ಶಕುಂತಲಾ ಕುತಂತ್ರ ಕೂಡ ಬಯಲು ಮಾಡಿ ಆಕೆಗೂ ಮಗನ ಜೊತೆಗೇ ಜೈಲೂಟ ಹಾಕಿಸುತ್ತಾಳೆ. ಅಲ್ಲಿಗೆ ಜೈದೇವ್ ಮತ್ತು ಶಕುಂತಲಾರ ಕೆಟ್ಟ ದಿನ ಶುರುವಾದಂತಿದೆ.
ಇದನ್ನೂ ಓದಿ: Ramayana Movie: ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಘೋಷಣೆ
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.