ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthdhaare Serial: ಶಕುಂತಲಾ ಬೆನ್ನ ಹಿಂದೆ ಬಿದ್ದ ಶಕುನಿ ಮಾಮ; ಭೂಮಿ ಮನದ ಭಾರ ಇಳಿಸೋ ಪ್ರಯತ್ನದಲ್ಲಿ ಗೌತಮ್

Amruthdhaare Serial: ಅಮೃತಧಾರೆ (Aruthdhaare Serial) ಧಾರಾವಾಹಿಯಲ್ಲಿ ಭೂಮಿ ಮೇಲೆ ಕಥೆ ಸಾಗುತ್ತಿದೆ. ಭೂಮಿಕಾಗೆ ಕ್ಯಾನ್ಸರ್ ಇರುವುದು ವೀಕ್ಷಕರಲ್ಲಿ ಆತಂಕ ಮೂಡಿಸಿದೆ. ಕೊರವಂಜಿಯೊಬ್ಬಳು ಭೂಮಿಕಾ ದೀರ್ಘ ಸುಮಂಗಲಿಯಾಗಿ ಬಾಳುತ್ತಾಳೆ ಎಂದು ಭವಿಷ್ಯ ನುಡಿದಿದ್ದಾಳೆ. ಹೀಗಾಗಿ ಈಗ ಗೌತಮ್‌ ಪ್ರೀತಿಗೆ ಭೂಮಿ ಗೆದ್ದೆ ಗೆಲ್ಲುತ್ತಾಳೆ.

Amruthdhaare Serial: ಶಕುಂತಲಾ ಬೆನ್ನ ಹಿಂದೆ ಬಿದ್ದ ಶಕುನಿ ಮಾಮ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jul 21, 2026 10:47 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada Serial) ಪ್ರಸಾರ ಕಾಣುತ್ತಿರುವ ಅಮೃತಧಾರೆ (Aruthdhaare Serial) ಧಾರಾವಾಹಿಯಲ್ಲಿ ಭೂಮಿ ಮೇಲೆ ಕಥೆ ಸಾಗುತ್ತಿದೆ. ಭೂಮಿಕಾಗೆ ಕ್ಯಾನ್ಸರ್ ಇರುವುದು ವೀಕ್ಷಕರಲ್ಲಿ ಆತಂಕ ಮೂಡಿಸಿದೆ. ಕೊರವಂಜಿಯೊಬ್ಬಳು ಭೂಮಿಕಾ ದೀರ್ಘ ಸುಮಂಗಲಿಯಾಗಿ ಬಾಳುತ್ತಾಳೆ ಎಂದು ಭವಿಷ್ಯ ನುಡಿದಿದ್ದಾಳೆ. ಹೀಗಾಗಿ ಈಗ ಗೌತಮ್‌ (Gowtham Bhoomika) ಪ್ರೀತಿಗೆ ಭೂಮಿ ಗೆದ್ದೆ ಗೆಲ್ಲುತ್ತಾಳೆ.

ಕೊರವಂಜಿ ಭವಿಷ್ಯ

ಗೌತಮ್​ ಮತ್ತು ಭೂಮಿಕಾ ದೇವಾಲಯವೊಂದಕ್ಕೆ ಹೋಗಿದ್ದಾರೆ. ಅದು ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯ. ಅಲ್ಲಿ ಕಣಿ ಹೇಳುವವಳು ಇವರಿಬ್ಬರ ಕೈ ನೋಡಿದ್ದಾಳೆ. ಅದರಲ್ಲಿ ಕೊರವಂಜಿ ನಿಮ್ಮಿಬ್ಬರ ಸಂಸಾರ ನೂರ್ಕಾಲ ಚೆನ್ನಾಗಿ ಇರುತ್ತದೆ. ಮುತ್ತೈದೆಯಾಗಿಯೇ ಕೊನೆಯವರೆಗೂ ಇರುವೆ.

ಇದನ್ನೂ ಓದಿ: Kantara Chapter 1: ಹೊಸ ದಾಖಲೆ ಸೃಷ್ಟಿಸಿದ ʼಕಾಂತಾರ 'ಬ್ರಹ್ಮಕಲಶ' ಹಾಡು

ನಿಮ್ಮ ಸಂಸಾರ ತುಂಬಾ ಚೆನ್ನಾಗಿ ಸದಾಕಾಲ ಇರುತ್ತದೆ ಎಂದಿದ್ದಾಳೆ. ದೇವರ ಸನ್ನಿಧಿಯಲ್ಲಿ ಹೇಳಿದ ಮಾತಿನಿಂದ ಭೂಮಿಕಾಗೆ ಏನೂ ಆಗುವುದಿಲ್ಲ ಎನ್ನುವುದು ಕನ್​ಫರ್ಮ್​ ಆಗಿದೆ. ಒಂದಿಷ್ಟು ಗೋಳಾಟದ ನಡುವೆ, ಗೌತಮ್​ ಹೇಗಾದರೂ ಮಾಡಿ ಭೂಮಿಕಾಳನ್ನು ಉಳಿಸಿಕೊಳ್ಳುತ್ತಾನೆ ಎಂದು ವೀಕ್ಷಕರು ಖುಷಿಪಟ್ಟುಕೊಳ್ಳುತ್ತಿದ್ದಾರೆ.

ಸದ್ಯ ಹೊಸ ಪ್ರೋಮೋ ಔಟ್‌ ಆಗಿದೆ. ಭೂಮಿಕಾ ನಡೆ ಕಂಡು ಅನುಮಾನ ಬಂದು ಗೌತಮ್‌, ವೈದ್ಯರ ಬಳಿ ಭೂಮಿಕಾ ಆರೋಗ್ಯದ ಬಗ್ಗೆ ವಿಚಾರಿಸಿದ್ದಾನೆ. ಅಲ್ಲಿಗೆ ಭೂಮಿಕಾಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋ ಬಗ್ಗೆ ಗೌತಮ್‌ಗೆ ಗೊತ್ತಾಗಿದೆ. ಭೂಮಿಕಾಗೆ ಸಮಾಧಾನ ಮಾಡಿದ ಗೌತಮ್‌, ನಮ್ಮ ಪ್ರೀತಿ ಗೆಲ್ಲುತ್ತದೆ ಎಂದಿದ್ದಾನೆ.

ಎಲ್ಲರ ಮುಂದೆ ತಾನು ಬದಲಾದಂತೆ ನಟಿಸುತ್ತಿರುವ ಶಕುಂತಲಾ, ಕೆಡಿ ಮಗ ಜೈದೇವ್ ಜೊತೆ ಕೈ ಜೋಡಿಸಿದ್ದಾಳೆ. ಶಕುಂತಲಾಳಲ್ಲಿ ಹಳೆಯ ದ್ವೇಷ ಕಾಣಿಸುತ್ತಿರೋದು ಲಕ್ಷ್ಮೀಕಾಂತ್ ಗಮನಕ್ಕೆ ಬಂದಿದೆ.

ಹಾಗೆಯೇ ಗೌತಮ್ ಮತ್ತು ಭೂಮಿಕಾ ಬಗ್ಗೆ ಶಕುಂತಲಾಳ ಅಸಮಾಧಾನ ಲಕ್ಷ್ಮೀಕಾಂತ್‌ ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ. ಜೈದೇವ್ ಮನೆಯಿಂದ ಹೊರಗೆ ಬರಲು ಮತ್ತು ಭೂಮಿಕಾ ತಮ್ಮ ವಿರುದ್ಧ ನಿಂತಿರೋದಕ್ಕೆಲ್ಲಾ ಮಲ್ಲಿಯೇ ಕಾರಣ. ಭೂಮಿಕಾಗೆ ಕ್ಯಾನ್ಸರ್ ಬಂದಿರುವ ವಿಷಯ ತಿಳಿದ್ರೆ ಶಕುಂತಲಾ ಅದನ್ನು ತನ್ನ ಲಾಭಕ್ಕೆ ಹೇಗೆ ಬಳಸಿಕೊಳ್ತಾಳೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಮತ್ತೊಂದೆಡೆ ಮಲ್ಲಿ ಬಂದಿರೋದು ಕೆಡಿಗಳಲ್ಲಿ ನಡುಕು ಹುಟ್ಟಿಸಿದೆ.

ಮುಂದೆ ಭೂಮಿಕಾ ಆರೋಗ್ಯ ಕಥೆ ಏನು? . ಶಕುಂತಲಾಳನ್ನು ಲಕ್ಷ್ಮೀಕಾಂತ್ ಹಿಂಬಾಲಿಸುತ್ತಿದ್ದು ಹೊಸ ಟ್ವಿಸ್ಟ್‌ ಸಿಗುತ್ತಾ? ಮಲ್ಲಿಯಿಂದ ಕೆಡಿಗೆ ಒಂದು ಗತಿ ಆಗುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌; ಭೂಮಿ ಒಡಲ ಗುಟ್ಟು ಗೌತಮ್ ಎದುರು ಬಯಲು

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ