ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Annayya Serial: ವೀರಭದ್ರನ ಹೆಡೆಮುರಿ ಕಟ್ಟೋಕೆ ಸಿದ್ಧವಾಯ್ತು ಅತ್ತೆ - ಸೊಸೆ ಜೋಡಿ!

Annayya Serial Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದೆ. ಶಾರದಮ್ಮಗೆ ಶಿಕ್ಷೆ ವಿಧಿಸಬೇಕು ಅಂತಿದ್ದ ವೀರಭದ್ರ ತಲೆ ತಗ್ಗಿಸುವಂತಾಗಿದೆ. ವೀರಭದ್ರನ ಹೆಡೆಮುರಿ ಕಟ್ಟೋಕೆ ಈಗ ಅತ್ತೆ ಸೊಸೆ ಒಂದಾಗಿದ್ದಾಗಿದೆ. ಇನ್ನು ಮುಂದೆ ಇವರಿಬ್ಬರನ್ನು ದಾಟಿಯೇ ವೀರಭಧ್ರ ಪ್ಲ್ಯಾನ್‌ ಮಾಡಬೇಕಿದೆ. ಇನ್ನೊಂದು ಕಡೆ ಸತ್ಯದ ಬೆಳಕಿನಲ್ಲಿರೋ ಗೋಡಂಬಿ ಪರಶು ಕೈಗೆ ಸಿಕ್ಕಿಬೀಳುತ್ತಾನಾ ಅನ್ನೋ ಕುತೂಹಲವೂ ಎದುರಾಗಿದೆ.

ವೀರಭದ್ರನ ಹೆಡೆಮುರಿ ಕಟ್ಟೋಕೆ ಸಿದ್ಧವಾಯ್ತು ಅತ್ತೆ - ಸೊಸೆ ಜೋಡಿ!

ಅಣ್ಣಯ್ಯ ಧಾರಾವಾಹಿ -

Yashaswi Devadiga
Yashaswi Devadiga Feb 25, 2026 12:57 PM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿ (Annayya Serial) ರೋಚಕ ತಿರುವು ಪಡೆದುಕೊಂಡಿದೆ. ಶಾರದಮ್ಮಗೆ ಶಿಕ್ಷೆ ವಿಧಿಸಬೇಕು ಅಂತಿದ್ದ ವೀರಭದ್ರ ತಲೆ ತಗ್ಗಿಸುವಂತಾಗಿದೆ. ವೀರಭದ್ರನ (Veerabhadra) ಹೆಡೆಮುರಿ ಕಟ್ಟೋಕೆ ಈಗ ಅತ್ತೆ ಸೊಸೆ ಒಂದಾಗಿದ್ದಾಗಿದೆ. ಇನ್ನು ಮುಂದೆ ಇವರಿಬ್ಬರನ್ನು ದಾಟಿಯೇ ವೀರಭಧ್ರ ಪ್ಲ್ಯಾನ್‌ ಮಾಡಬೇಕಿದೆ. ಇನ್ನೊಂದು ಕಡೆ ಸತ್ಯದ ಬೆಳಕಿನಲ್ಲಿರೋ ಗೋಡಂಬಿ ಪರಶು (Parashu) ಕೈಗೆ ಸಿಕ್ಕಿಬೀಳುತ್ತಾನಾ ಅನ್ನೋ ಕುತೂಹಲವೂ ಎದುರಾಗಿದೆ.

ವೀರಭದ್ರ ಶಾರದಮ್ಮನಿಗೆ ಎಷ್ಟೋ ಕೆಡುಕನ್ನು ಉಂಟು ಮಾಡಿದ್ದಾನೆ. ಅಷ್ಟೇ ಯಾಕೆ ಮಕ್ಕಳನ್ನೇ ಶಾರದಮ್ಮನಿಂದ ದೂರ ಮಾಡಿದ್ದಾನೆ. ತನ್ನ ಜೀವನವನ್ನೇ ಹಾಳು ಮಾಡಿದ ವೀರಭದ್ರನಿಗೆ ಮುಟ್ಟಿ ನೊಡುವಂತೆ ಈ ಹಿಂದೆ ಶಾರದಮ್ಮ ತಿರುಗೇಟು ಕೊಟ್ಟಿದ್ದಳು.

ಊರ ಪಂಚಾಯ್ತಿಯಲ್ಲಿ ವೀರಭದ್ರನಿಗೆ ಸೋಲು

ಊರಿನವರನ್ನು ಕರೆಸಿ ಪಂಚಾಯ್ತಿ ನಡೆಸಿದ್ದಾನೆ. ವೀರಭದ್ರ ಮಾತನಾಡಿ, ʻಶಾರದಮ್ಮ ಒಡವೆ ಕದ್ದಿದ್ದಾಳೆ ಎಂಬುದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಕದ್ದುಕೊಂಡ ಹೋಗಿದ್ದ ಚಿನ್ನದ ಬೆಲೆಯನ್ನ ಈಗಿನ ಬೆಲೆಯಲ್ಲಿ ಕಟ್ಟಿದ್ದರೆ ಶಾರದಮ್ಮ ಈ ಊರಿನಲ್ಲಿ ಇರಬಹುದುʼ ಎಂದು ಆದೇಶ ನೀಡ್ತಾನೆ.

ಇದನ್ನೂ ಓದಿ: Vijay Rashmika Wedding: ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್‌ ದೇವರಕೊಂಡ ಜೋಡಿ!

ಅದೇ ಹೊತ್ತಿಗೆ ಪಾರು ಎಂಟ್ರಿ ಕೊಟ್ಟಿದ್ದಾಳೆ.ತಂದೆ ಬಳಿ ಬಂದ ಪಾರು, ಆ ಒಡೆವಯನ್ನ ಕದ್ದುಕೊಂಡು ಬಚ್ಚಿಟ್ಟುಕೊಂಡಿದ್ರಲ್ಲ, ಆ ಜಾಗದಿಂದಲೇ ನಾನು ಬರ್ತೀರೋದುʼ ಎಂದಿದ್ದಾಳೆ ಪಾರು. ಪಾರು ಮಾತು ಕೇಳಿ ವೀರಭದ್ರನಿಗೆ ಶಾಕ್‌ ಆಗಿದೆ. ತನ್ನ ಕೇಡಿನ ಕೆಲಸ ಮಗಳಿಗೆ ಹೇಗೆ ಗೊತ್ತಾಯ್ತು ಅಂತ ಶಾಕ್‌ ಆಗಿದ್ದಾನೆ.

ಅತ್ತೆ - ಸೊಸೆ ಜೋಡಿ ಒಂದಾಯ್ತು

ಪಂಚಾಯ್ತಿ ಬಳಿಕ ಪಾರು ಅಪ್ಪನಿಗೆ ಸವಾಲ್‌ ಹಾಕಿದ್ದಾಳೆ. ಯಾವ ಊರ ಜನರು ಕಲ್ಲಿನ ಪ್ರತಿಭೆ ಮಾಡಬೇಕು ಅಂತಿದ್ದರೂ ಅದೇ ಊರ ಜನ ಕೈಯಲ್ಲಿ ಕಲ್ಲು ಹಿಡಿದುಕೊಂಡು ನಿಮ್ಮ ಹಿಂದೆ ಬರೋ ಥರ ಮಾಡ್ತೀನಿ ಅಂತ ಸವಾಲ್‌ ಹಾಕಿದ್ದಾಳೆ. ಜೊತೆಗೆ ಶಾರದಮ್ಮ ಕೂಡ ವೀರಭದ್ರನಿಗೂ ಸವಾಲ್‌ ಹಾಕಿದ್ದಾಳೆ.

ಮದುವೆ ಸಂಭ್ರಮ

ಇನ್ನೊಂದು ಕಡೆ ಅಣ್ಣಯ್ಯ ಸೀರಿಯಲ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಎಲ್ಲರ ಮುಂದೆ ಒಳ್ಳೆಯವನಂತೆ ನಟಿಸುತ್ತಿರುವ ಪರಶು ಮುಖವಾಡ ಕಳಚಿ ಬೀಳುತ್ತಾ ಅನ್ನೋ ಗೊಂದಲಗಳಿಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ವೀರಭದ್ರ ಮಗನ ಮುಂದೆ ಯಾವುದೇ ಕಾರಣಕ್ಕೂ ಮದುವೆ ಮಾತ್ರ ನಿಂತು ಹೋಗಬಾರದು ಅಂತ ಹೇಳಿದ್ದಾನೆ. ಇವರಿಬ್ಬರು ಮಾತನಾಡಿರೋದನ್ನು ಕೇಳಿಸಿಕೊಂಡಿದ್ದಾನೆ ಪರಶು. ಸತ್ಯದ ಬೆಳಕಿನಲ್ಲಿರೋ ಗೋಡಂಬಿ ಪರಶು ಕೈಗೆ ಬೇಡಿ ಹಾಕಿಸ್ತಾನಾ?

ಇದನ್ನೂ ಓದಿ: Amruthadhaare Serial: ಜೇಡಿಯ ದರ್ಪಕ್ಕೆ ಸಿಡಿದೆದ್ದ ಗೌತಮ್ ದಿವಾನ್! ಶಕುಂತಲಾ ಶಾಕ್‌

ಮದುವೆ ಮಂಟಪಕ್ಕೆ ಮಗುವಿನೊಂದಿಗೆ ಮಹಿಳೆಯೊಬ್ಬಳು ಎಂಟ್ರಿ ಕೊಟ್ಟು, ಪರಶುನನ್ನು ಅಪ್ಪ ಎಂದು ಮಗು ಕರೆದಿದ್ದು ಕಥೆಗೆ ಹೊಸ ತಿರುವು ನೀಡಿದೆ. ಆ ಮಹಿಳೆ ಯಾರು? ಈ ಎಲ್ಲ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.